ತಮಿಳುನಾಡು : Goddess Parvati Idol : ಬರೋಬ್ಬರಿ ಅರ್ಧ ಶತಮಾನಗಳ ಹಿಂದೆ ಕುಂಭಕೋಣಂನ ತಂದಂತೋಟ್ಟಂನಲ್ಲಿರುವ ನಾದನಪುರೇಶ್ವರ್ ಶಿವನ ದೇವಸ್ಥಾನದಿಂದ ನಾಪತ್ತೆಯಾಗಿದ್ದ ಬೆಲೆ ಬಾಳುವ ಪಾರ್ವತಿ ದೇವಿಯ ವಿಗ್ರಹವು ನ್ಯೂಯಾರ್ಕ್ನಲ್ಲಿ ಪತ್ತೆಯಾಗಿದೆ ಎಂದು ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ ಮಾಹಿತಿ ನೀಡಿದೆ. ನ್ಯೂಯಾರ್ಕ್ನ ಬೋನ್ಹಾಮನ್ಸ್ ಹರಾಜಿನ ಮನೆಯಲ್ಲಿ ಈ ವಿಗ್ರಹ ಪತ್ತೆಯಾಗಿದೆ ಎಂದು ತಮಿಳುನಾಡು ಸಿಐಡಿ ಮಾಹಿತಿ ನೀಡಿದೆ.
1971ರಲ್ಲಿ ವಿಗ್ರಹ ಕಾಣೆಯಾದ ಬಳಿಕ ಈ ಸಂಬಂಧ ಸ್ಥಳೀಯ ಪೊಲೀಸರಿಗೆ ಬೆಲೆ ನೀಡಲಾಗಿತ್ತು. 2019ರ ಫೆಬ್ರವರಿ ತಿಂಗಳಲ್ಲಿ ಕೆ.ವಾಸು ಎಂಬವರು ನೀಡಿದ್ದ ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರೂ ಸಹ ಈ ವಿಗ್ರಹವನ್ನು ಶೋಧ ಮಾಡಲು ಸಾಧ್ಯವಾಗಿರಲಿಲ್ಲ. ಐಡಲ್ ವಿಂಗ್ನ ಪೊಲೀಸ್ ಅಧಿಕಾರಿಯಾಗಿದ್ದ ಎಂ ಚಿತ್ರಾ ಈ ವಿಗ್ರಹ ಶೋಧದ ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ವಿದೇಶದಲ್ಲಿರುವ ವಿವಿಧ ವಸ್ತುಸಂಗ್ರಹಾಲಯಗಳು ಮತ್ತು ಹರಾಜು ಕೇಂದ್ರಗಳಲ್ಲಿ ಚೋಳರ ಕಾಲದ ಪಾರ್ವತಿ ವಿಗ್ರಹಗಳನ್ನು ಹುಡಕಲು ಆರಂಭಿಸಿದ ಬಳಿಕ ನ್ಯೂಯಾರ್ಕ್ನಲ್ಲಿ ಪಾರ್ವತಿ ವಿಗ್ರಹ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
#Congrats ! To my team for tracing an elegant antique #idol of #Parvati in tribhanga pose stolen from #Nadanapureeswara temple in Thandanthottam, to Bonhams House,New York.Wing has readied papers to bring it back . @tnpoliceoffl @CMOTamilnadu, #IPS, #police @mkstalin @TNDIPRNEWS pic.twitter.com/3PcFBo9wcI
— Jayanth Murali IPS, DGP, Author of “42 Mondays” (@jayantmuraliips) August 8, 2022
12ನೇ ಶತಮಾನದಲ್ಲಿದ್ದ ಚೋಳರ ಕಾಲದ ತಾಮ್ರ – ಮಿಶ್ರಲೋಹದಿಂದ ಮಾಡಲ್ಪಟ್ಟ ಈ ಪಾರ್ವತಿ ವಿಗ್ರಹವು 52 ಸೆಂಟಿ ಮೀಟರ್ ಎತ್ತರವನ್ನು ಹೊಂದಿದೆ. ಇದರ ಮೌಲ್ಯ ಬರೋಬ್ಬರಿ 1,68,26,143 ರೂಪಾಯಿಯಾಗಿದೆ ಎಂದು ಐಡಲ್ ವಿಂಗ್ ಮಾಹಿತಿ ಬಿಡುಗಡೆ ಮಾಡಿದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಕರೆಯಲ್ಪಡುವ ಪಾರ್ವತಿ ದೇವಿ ಅಥವಾ ಉಮಾ ದೇವಿ ಎಂದು ಕರೆಯಲ್ಪಡುವ ದೇವಿಯು ನಿಂತುಕೊಂಡ ರೀತಿಯಲ್ಲಿ ಈ ವಿಗ್ರಹವನ್ನು ತಯಾರಿಸಲಾಗಿದೆ. ವಿಗ್ರಹದಲ್ಲಿ ಪಾರ್ವತಿ ದೇವಿ ಕಿರೀಟ ಧರಿಸಿದ್ದಾಳೆ. ಇದನ್ನು ರಾಶಿಯ ಉಂಗುರಗಳ ಕರಂಡ ಮುಕುಟ ಎಂದು ಕರೆಯುತ್ತಾರೆ. ಕಿರೀಟದ ಹಿಂಬಧಿಯಲ್ಲಿ ಕಮಲದ ಹೂವನ್ನು ಕಾಣಬಹುದಾಗಿದೆ.
ಇದನ್ನು ಓದಿ : illicit relationship :ಸೋದರತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
ಇದನ್ನೂ ಓದಿ : KL Rahul to Lead India : ಘಾಟಿ ಸುಬ್ರಮಣ್ಯನ ಸನ್ನಿಧಿಗೆ ಹೋದ ಐದೇ ದಿನಗಳಲ್ಲಿ ಕ್ಯಾಪ್ಟನ್, ರಾಹುಲ್‌ಗೆ ಸಿಕ್ತು ದೈವಬಲ
Goddess Parvati Idol That Went Missing 50 Years Ago Found in NY and it’s Worth Rs 1.6 Crore