Shirasi Marikamba Temple : ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇಗುಲದ ಪ್ರಸಾದಕ್ಕೆ ಬಿಹೆಚ್​ಒಜಿ ಪ್ರಮಾಣ ಪತ್ರ

ಉತ್ತರ ಕನ್ನಡ : Shirasi Marikamba Temple : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಎಂದರೆ ಸಾಕು ಮೊದಲು ನೆನಪಾಗುವುದೇ ಪುರಾಣ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯ. ದೇವಾಲಯಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ. ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದಕ್ಕೆ ಬಿಎಚ್​​ಒಜಿ ಪ್ರಮಾಣ ದೊರಕಿದ್ದು ದೇಗುಲದ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.


ದೇವಸ್ಥಾನಗಳಲ್ಲಿ ನೀಡಲಾಗುವ ಪ್ರಸಾದದಲ್ಲಿ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಕಾಯ್ದೆಯ ಅಡಿಯಲ್ಲಿ ದೇವಸ್ಥಾನಗಳಿಗೆ ನೀಡಲಾಗುವ ಆನಂದಮಯ ನೈರ್ಮಲ್ಯ ಕೊಡುಗೆ ದೇವರಿಗೆ ಪ್ರಮಾಣ ಪತ್ರವನ್ನು ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ನೀಡಲಾಗಿದೆ . ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಆಹಾರದ ಗುಣಮಟ್ಟ, ದೇವರಿಗೆ ಅರ್ಪಿಸಲಾಗುವ ನೈವೇದ್ಯದ ಗುಣಮಟ್ಟ , ಪ್ರಸಾದ ತಯಾರು ಮಾಡುವ ವಿಧಾನ, ಅಡುಗೆ ಮನೆಯಲ್ಲಿನ ನೈರ್ಮಲ್ಯ ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.


ಎಫ್ಎಸ್ಎಸ್ಎಐ ಪ್ರಮಾಣ ಪತ್ರವನ್ನು ನೀಡುವ ಮುನ್ನ ಗಣನೆಗೆ ತೆಗೆದುಕೊಳ್ಳಲಾಗುವ ಮಾನದಂಡಗಳನ್ನು ಆಧರಿಸಿ ದೇವಸ್ಥಾನಗಳಿಗೆ 116 ಅಂಕಗಳಲ್ಲಿ ಎಷ್ಟು ಅಂಕ ನೀಡುವುದು ಎಂದು ನಿರ್ಧರಿಸಲಾಗುತ್ತದೆ. ಬಿಹೆಚ್​್ಒಜಿ ಪ್ರಮಾಣ ಪತ್ರವನ್ನು ಪಡೆಯಬೇಕು ಅಂದರೆ ಗರಿಷ್ಟ 116 ಅಂಕಗಳಲ್ಲಿ ಕನಿಷ್ಟ 90 ಅಂಕಗಳನ್ನು ಪಡೆಯುವುದು ಅವಶ್ಯಕವಾಗಿದೆ. ಶಿರಸಿಯ ಶ್ರೀ ಮಾರಿಕಾಂಬಾ ದೇಗುಲಕ್ಕೆ 116ರಲ್ಲಿ 100 ಅಂಕಗಳು ದೊರಕಿರುವ ಹಿನ್ನೆಲೆಯಲ್ಲಿ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ.


ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ದೇವಿಯ ಜಾತ್ರೆಯು ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಈ ವರ್ಷ ಕೂಡ ಅತ್ಯಂತ ವಿಜೃಂಭಣೆಯಿಂದ ಮಾರಿಕಾಂಬಾ ದೇವಿಯ ಜಾತ್ರೆಯನ್ನು ನೆರವೇರಿಸಲಾಗಿದೆ. ಮಾರಿಕಾಂಬಾ ಜಾತ್ರೆ ನಡೆಯುವ ವರ್ಷದಲ್ಲಿ ಈ ಭಾಗದ ಜನತೆ ಹೋಳಿ ಹಬ್ಬವನ್ನು ಆಚರಿಸುವುದಿಲ್ಲ. ಅಲ್ಲದೇ ಈ ದೇವಸ್ಥಾನದಲ್ಲಿ ಕಳೆದ ಅನೇಕ ವರ್ಷಗಳಿಂದ ಪ್ರಾಣಿ ಬಲಿಯನ್ನು ಮಾಡದೇ ಮಾದರಿ ಎನಿಸಿಕೊಂಡಿದೆ.

ಇದನ್ನು ಓದಿ : KL Rahul to Lead India : ಘಾಟಿ ಸುಬ್ರಮಣ್ಯನ ಸನ್ನಿಧಿಗೆ ಹೋದ ಐದೇ ದಿನಗಳಲ್ಲಿ ಕ್ಯಾಪ್ಟನ್, ರಾಹುಲ್‌ಗೆ ಸಿಕ್ತು ದೈವಬಲ

ಇದನ್ನೂ ಓದಿ : Goddess Parvati Idol : 50 ವರ್ಷಗಳ ಹಿಂದೆ ಭಾರತದಿಂದ ಕಳುವಾಗಿದ್ದ ಪಾರ್ವತಿ ವಿಗ್ರಹ ನ್ಯೂಯಾರ್ಕ್​ನಲ್ಲಿ ಪತ್ತೆ : ₹1.6 ಕೋಟಿ ಮೌಲ್ಯ ಹೊಂದಿದೆ ಈ ಮೂರ್ತಿ

BHOG Certificate for Prasad of Shirasi Marikamba Temple

Comments are closed.