ಸೋಮವಾರ, ಏಪ್ರಿಲ್ 28, 2025
HomeNationalGoogle CEO Sundar Pichai : ಗೂಗಲ್‌ ಭಾರತದಲ್ಲಿ 10 ಬಿಲಿಯನ್ ಹೂಡಿಕೆ : ಸಿಇಒ...

Google CEO Sundar Pichai : ಗೂಗಲ್‌ ಭಾರತದಲ್ಲಿ 10 ಬಿಲಿಯನ್ ಹೂಡಿಕೆ : ಸಿಇಒ ಸುಂದರ್‌ ಪಿಚ್ಚೈ

- Advertisement -

ವಾಷಿಂಗ್ಟನ್: (Google CEO Sundar Pichai) ಅಮೇರಿಕಾ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವಿಚಾರಗಳ ಕುರಿತು ಚರ್ಚೆ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ಗೂಗಲ್‌ ಮತ್ತು ಅಲ್ಫಾಬೆಟ್‌ ಸಿಇಒ ಸುಂದರ್‌ ಪಿಚ್ಚೈ ಅವರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಭಾರತದ ಡಿಜಿಟಲೀಕರಣ ನಿಧಿಯಲ್ಲಿ 10 ಬಿಲಿಯನ್ ಯುಎಸ್‌ಡಿ ಹೂಡಿಕೆ ಮಾಡಲಿದೆ ಮತ್ತು ಗುಜರಾತ್‌ನಲ್ಲಿ ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವುದಾಗಿ ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಘೋಷಿಸಿದ್ದಾರೆ.

ಡಿಜಿಟಲ್‌ ಇಂಡಿಯಾ ಕುರಿತು ಪ್ರಧಾನಿ ನರೇಂದ್ರ ಮೋದಿ ಅರ ದೂರದೃಷ್ಟಿಯನ್ನ ಪಿಚ್ಚೈ ಶ್ಲಾಘಿಸಿದ್ದಾರೆ. ಇಂದಿನ ಸಮಯಕ್ಕಿಂತಲೂ ಮೋದಿ ಅವರ ದೂರದೃಷ್ಟಿ ಮುಂದಿದೆ. ಅಲ್ಲದೇ ಇತರ ದೇಶಗಳು ಕೂಡ ಭಾರತವನ್ನು ಅನುಸರಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಭೇಟಿಯ ವೇಳೆಯಲ್ಲಿ ಅವರನ್ನು ಭೇಟಿಯಾಗಿರುವುದು ಗೌರವದ ವಿಚಾರವಾಗಿದೆ. ಭಾರತದ ಡಿಜಿಟಲೀಕರಣ ನಿಧಿಯಲ್ಲಿ Google USD 10 ಶತಕೋಟಿ ಹೂಡಿಕೆ ಮಾಡುತ್ತಿದೆ. ಈ ವಿಚಾರವನ್ನು ಈಗಾಗಲೇ ಪ್ರಧಾನ ಮಂತ್ರಿಗಳ ಜೊತೆಗೆ ಹಂಚಿಕೊಂಡಿದ್ದೇವೆ. ಅಲ್ಲದೇ ನಮ್ಮ ಜಾಗತಿಕ ಫಿನ್‌ಟೆಕ್‌ ಕೇಂದ್ರವನ್ನು ಗುಜರಾತ್‌ ನಲ್ಲಿ ತೆರೆಯಲಿದ್ದೇವೆ ಎಂದು ಘೋಷಿಸಿದ್ದಾರೆ.

ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿಯು ಭಾರತದ ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ‌ ನಿರ್ಮಾಣವಾಗಲಿದೆ. ವಿಶೇಷವಾಗಿ ಡಿಜಿಟಲ್ ಇಂಡಿಯಾದ ದೃಷ್ಟಿ ಮತ್ತು ಆರ್ಥಿಕ ಅವಕಾಶದ ಸುತ್ತ ದೇಶವು ಸಾಧಿಸಿರುವ ಪ್ರಗತಿಯನ್ನು ನೋಡಲು ಉತ್ಸುಕವಾಗಿದೆ. ನಾನು ಡಿಸೆಂಬರ್‌ನಲ್ಲಿ ಪ್ರಧಾನಿಯನ್ನು ಭೇಟಿಯಾಗಿ ಡಿಜಿಟಲ್‌ ಇಂಡಿಯಾ ಕುರಿತು ಹಲವು ವಿಚಾರಗಳನ್ನು ಚರ್ಚಿಸಿದ್ದೇವೆ. ಗೂಗಲ್‌ ಹೂಡಿಕೆಯ ಜೊತೆಗೆ ಕೃತಕ ಬುದ್ಧಿಮತ್ತೆಯಲ್ಲಿ ಕೆಲಸ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲಿದ್ದೇವೆ. ಈಗಾಗಲೇ ನಾವು 100-ಭಾಷೆಯ ಉಪಕ್ರಮವನ್ನು ಹೊಂದಿದ್ದೇವೆ. ಅಲ್ಲದೇ ಶೀಘ್ರದಲ್ಲೇ ಹೆಚ್ಚಿನ ಭಾರತೀಯ ಭಾಷೆಗಳಿಗೆ ಬೋಟ್ ಅನ್ನು ತರುತ್ತಿದ್ದೇವೆ ಎಂದು ಪಿಚೈ ಹೇಳಿದರು.

ಭಾರತ ಮೂಲದ ಸುಂದರ್‌ ಪಿಚ್ಚೈ ಅವರು 2004ರಲ್ಲಿ ಗೂಗಲ್‌ಗೆ ಸೇರಿದ್ದು, 2015ರಲ್ಲಿ ಗೂಗಲ್‌ ಕಂಪನಿಯ ಸಿಇಒ ಆಗಿ ನೇಮಕವಾಗಿದ್ದರು. ಈ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದರು. ಅಲ್ಲದೇ ಕಳೆದ ವರ್ಷ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಕಳೆದ ವರ್ಷ ಭಾರತ ಭೇಟಿಯ ಸಂದರ್ಭದಲ್ಲಿ, ಪಿಚೈ ಅವರು ಗೂಗಲ್ ಫಾರ್ ಇಂಡಿಯಾ ಈವೆಂಟ್‌ನ 8 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು, ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವ ಅಶ್ವಿನಿ ವೈಷ್ಣವ್ ಅವರು ಹಾಜರಿದ್ದರು.

ಇದನ್ನೂ ಓದಿ : Samsung Galaxy Price : 20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗುತ್ತೆ ಸ್ಯಾಮ್ ಸಂಗ್ ನ ಈ ಸ್ಮಾರ್ಟ್ ಪೋನ್

ಇದನ್ನೂ ಓದಿ : Instagram Reels : ರೀಲ್ಸ್‌ ಅಭಿಮಾನಿಗಳಿಗೆ ಹೊಸ ವೈಶಿಷ್ಟ ಪರಿಚಯಸಿದ ಇನ್‌ಸ್ಟಾಗ್ರಾಮ್‌

ಕೃತಕ ಬುದ್ಧಿಮತ್ತೆ, ಫಿನ್‌ಟೆಕ್ ಮತ್ತು ಸೈಬರ್‌ ಸೆಕ್ಯುರಿಟಿ ಉತ್ಪನ್ನಗಳು ಮತ್ತು ಸೇವೆಗಳು ಮತ್ತು ಭಾರತದಲ್ಲಿ ಮೊಬೈಲ್ ಸಾಧನ ತಯಾರಿಕೆಯ ಡೊಮೇನ್‌ಗಳಲ್ಲಿ ಸಹಯೋಗದ ಹೆಚ್ಚಿನ ಮಾರ್ಗಗಳನ್ನು ಅನ್ವೇಷಿಸಲು ಪ್ರಧಾನಿ ಮೋದಿ ಪಿಚೈ ಅವರನ್ನು ಆಹ್ವಾನಿಸಿದ್ದರು.

Google CEO Sundar Pichai : 10 billion investment in Google India: CEO Sundar Pichai

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular