ನವದೆಹಲಿ : ಕೊರೊನಾ ಆರ್ಥಿಕ ಸಂಕಷ್ಟದ ನಡುವಲ್ಲೇ ಭಾರತ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಹೊಸ ದಾಖಲೆಯನ್ನು ಬರೆದಿದ್ದು, ಅಗಸ್ಟ್ ತಿಂಗಳಲ್ಲಿ 1.12 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ ಮಾಡಿದೆ. ವರ್ಷದ ಹಿಂದೆ ಇದೇ ತಿಂಗಳಲ್ಲಿ ಸಂಗ್ರಹಿಸಿದ್ದಕ್ಕಿಂತ ಜಿಎಸ್‌ಟಿಗಿಂತ ಈ ಬಾರಿ 30% ಹೆಚ್ಚಿನ ಮೊತ್ತ ಸರಕಾರದ ಬೊಕ್ಕಸ ತುಂಬಿದೆ.
ಸಂಗ್ರಹವಾದ 1.12 ಲಕ್ಷ ಕೋಟಿ ರೂಪಾಯಿಗಳಲ್ಲಿ ಕೇಂದ್ರ ಜಿಎಸ್‌ಟಿ 20,522 ಕೋಟಿ ರೂ.ಗಳಿದ್ದರೆ, ರಾಜ್ಯಗಳ ಪಾಲಿಗೆ 26,605 ಕೋಟಿ ರೂ.ಗಳು ಹಾಗೂ ಸಮಗ್ರ ಜಿಎಸ್‌ಟಿ 56,247 ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 26,884 ಕೋಟಿ ರೂಪಾಯಿಗಳೂ ಸೇರಿವೆ. ಸೆಸ್ ರೂಪದಲ್ಲಿ 8,646 ಕೋಟಿ ರೂ.ಗಳು ಸಂಗ್ರಹವಾಗಿವೆ ಎಂದು ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಗೋಮಾಂಸ ಸೇವನೆ ಮೂಲಭೂತ ಹಕ್ಕಲ್ಲ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಅಲಹಾಬಾದ್ ಹೈಕೋರ್ಟ್
ಜುಲೈ 2021ರಲ್ಲಿ ಜಿಎಸ್‌ಟಿಯ ಕಲೆಕ್ಷನ್ 1.16 ಲಕ್ಷ ಕೋಟಿ ರೂ. ಇತ್ತು. 2020ರ ಆಗಸ್ಟ್‌ನಲ್ಲಿ 86,449 ಕೋಟಿ ರೂ. ಗಳಷ್ಟಿದ್ದ ಜಿಎಸ್‌ಟಿ ಸಂಗ್ರಹ 2019ರ ಇದೇ ತಿಂಗಳಲ್ಲಿ 98,202 ಕೋಟಿ ರೂ. ಗಳಷ್ಟಿತ್ತು. ಸತತ ಒಂಬತ್ತು ತಿಂಗಳು ಲಕ್ಷ ಕೋಟಿಗೂ ಅಧಿಕ ಸಂಗ್ರಹ ಕಂಡ ಜಿಎಸ್‌ಟಿ ಕಲೆಕ್ಷನ್ ಜೂನ್ ತಿಂಗಳಲ್ಲಿ ಕೋವಿಡ್ ಎರಡನೇ ಅಲೆಯ ಕಾರಣ ಕುಸಿತ ಕಂಡಿತ್ತು.
ಇದನ್ನೂ ಓದಿ: ಇಂದಿನಿಂದ ಜಾರಿಯಾಯ್ತು ಹೊಸ ನಿಯಮ ; ಏನೆಲ್ಲಾ ಬದಲಾವಣೆಯಾಗಲಿದೆ ಗೊತ್ತಾ ?
ಆರ್ಥಿಕ ಪ್ರಗತಿಯೊಂದಿಗೆ, ತೆರಿಗೆ ವಂಚನೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ, ಅದರಲ್ಲೂ ನಕಲಿ ಬಿಲ್ ಸೃಷ್ಟಿಕರ್ತರ ಮೇಲೆ ತೀವ್ರವಾದ ಕ್ರಮಗಳಿಂದಾಗಿ ಜಿಎಸ್‌ಟಿ ಸಂಗ್ರಹದಲ್ಲಿ ವೃದ್ಧಿಯಾಗಿದೆ. ಬರುವ ತಿಂಗಳುಗಳಲ್ಲೂ ಸಹ ಜಿಎಸ್‌ಟಿ ಕಲೆಕ್ಷನ್ ಜೋರಾಗಿರುವ ನಿರೀಕ್ಷೆಯಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
( India's GST collection: 1.12 trillion GST in August )