ಕೊನೆಗೂ ಕುತೂಹಲಕ್ಕೆ ಸಿಗಲಿದೆ ಉತ್ತರ : ನಾಳೆ ಜ್ಯೂನಿಯರ್ ಚಿರು ಹೆಸರು ರಿವೀಲ್

ಸ್ಯಾಂಡಲ್ ವುಡ್ ನ ಕ್ಯೂಟ್ ಸೆಲಿಬ್ರೆಟಿ ಜ್ಯೂನಿಯರ್ ಚಿರು. ಹುಟ್ಟುತ್ತಲೇ ಅಭಿಮಾನಿಗಳ ಪ್ರೀತಿಗೆ ಪಾತ್ರವಾದ ಜ್ಯೂನಿಯರ್ ಗೆ ಚಿರು, ಸಿಂಬಾ, ಚಿಂಟು, ಶಿಷ್ಯ, ಸಿಂಗಾ, ಬಟಾಣಿ ಅಂತೆಲ್ಲ ಕರೆಯುತ್ತಾರಂತೆ ಸರ್ಜಾ ಕುಟುಂಬಸ್ಥರು.

ಹೀಗಾಗಿ ಅಭಿಮಾನಿಗಳು ಸದಾಕಾಲ ಜ್ಯೂನಿಯರ್ ಚಿರು ಅಸಲಿ ಹೆಸರೇನು ? ನಾಮಕರಣ ಯಾವಾಗ ಅಂತ ನಟಿ ಮೇಘನಾ ರಾಜ್ ಗೆ ಕೇಳುತ್ತಲೇ ಬಂದಿದ್ದರು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು ನಾಳೆ ಮೇಘನಾ ರಾಜ್ ಪುತ್ರನ ಹೆಸರು ರಿವೀಲ್ ಮಾಡಲಿದ್ದಾರಂತೆ.

ನಾಳೆ ಜ್ಯೂನಿಯರ್ ಚಿರು ನಾಮಕರಣ ಕ್ರಿಶ್ಚಿಯನ್ ಸಂಪ್ರದಾಯದಂತೆ ಬೆಂಗಳೂರಿನ ಸೆಂಟ್ ಆಂಟ್ಯನಿ ಚರ್ಚ್ ನಲ್ಲಿ ನಡೆಯಲಿದೆ. ಬಳಿಕ ಸರ್ಜಾ ನಿವಾಸದಲ್ಲಿ ಹಿಂದೂ ಸಂಪ್ರದಾಯ ದಂತೆ ನಾಮಕರಣ ಇನ್ನೊಂದು ದಿನ ನಡೆಯಲಿದೆಯಂತೆ. ಪುತ್ರನ ನಾಮಕರಣ ಹಾಗೂ ಹೆಸರಿನ ಬಗ್ಗೆ ಮೇಘನಾ ರಾಜ್ ಅಪ್ಡೇಟ್ ಮಾಹಿತಿ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಇಂಟರ್ ಸ್ಟಿಂಗ್ ಪೋಸ್ಟ್ ಹಾಕಿದ್ದಾರೆ.

ಪ್ಯಾರಡೈಸ್ ಗೇಟ್ ಒಫನ್ ಮಾಡೋಣ.ನಮ್ಮ ಲಿಟಲ್ ಪ್ರಿನ್ಸ್ ಗೆ ಈಗ ಹೆಸರು ಆಯ್ಕೆ ಮಾಡಲಾಗಿದೆ. ಪ್ರತಿ ಸಲ ಜ್ಯೂನಿಯರ್ ಸಿ ಬಗ್ಗೆ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳು ಏನ್ ಹೆಸರು ಜ್ಯೂನಿಯರ್ ದು ಅಂತ. ಈಗ ಕಿಂಗ್ ತಮ್ಮ ಪ್ರಿನ್ಸ್ ಹೆಸರು ಸೆಲೆಕ್ಟ್ ಮಾಡಿದ್ದಾರೆ. ಸಪ್ಟೆಂಬರ್ ೩ ರಂದು ಹೆಸರು ರಿವೀಲ್‌ಮಾಡುತ್ತಿರುವೆ ಎಂದು ಬರೆದಿದ್ದಾರೆ.

ಜ್ಯೂನಿಯರ್ ಚಿರು ಹೆಸರು ಟೀಸರ್ ರೂಪದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಪೂರ್ವಭಾವಿಯಾಗಿ ಮೇಘನಾ ಸ್ಪೆಶಲ್ ವಿಡಿಯೋ ಬಿಟ್ಟಿದ್ದಾರೆ. ಅದರಲ್ಲಿ ಜ್ಯೂನಿಯರ್ ಹುಟ್ಟಿದ ದಿನಾಂಕ, ಮೇಘನಾ ಚಿರು ಎಂಗೇಜ್ ಮೆಂಟ್ , ಮದುವೆ ದೃಶ್ಯ, ಮದುವೆಯ ಸ್ಪೆಶಲ್ ಉಡುಪುಗಳನ್ನು ತೋರಿಸಲಾಗಿದೆ.

ಬಳಿಕ ಜ್ಯೂನಿಯರ್ ಗೆ ಕರೆಯಲಾಗುವ ಸಿಂಬಾ, ಚಿಂಟು,ಬರ್ಫಿ, ಚಿರು ಬಚ್ಚಾ, ಮರಿಸಿಂಗಾ ಎಂಬ ಹೆಸರುಗಳನ್ನು ತೋರಿಸಲಾಗಿದೆ‌. ಹೀಗಾಗಿ ಜ್ಯೂನಿಯರ್ ಚಿರು ಗೆ ನಾಳೆ ಯಾವ ಹೆಸರು ಇಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

(Finally, the curious answer, Tomorrow’s Junior Cheer Name Reveal )

Comments are closed.