ಮಂಗಳವಾರ, ಏಪ್ರಿಲ್ 29, 2025
HomeCrimeWomen Jump Auto : ಆಟೋ ಚಾಲಕನಿಂದ ಕಿಡ್ನಾಪ್‌ ಯತ್ನ : ಚಲಿಸುತ್ತಿದ್ದ ಆಟೋದಿಂದ ಜಿಗಿದ...

Women Jump Auto : ಆಟೋ ಚಾಲಕನಿಂದ ಕಿಡ್ನಾಪ್‌ ಯತ್ನ : ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

- Advertisement -

ಚಂಡೀಗಢ : ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರನ್ನು ಆಟೋ ಚಾಲಕನೇ ಕಿಡ್ನಾಪ್‌ ಮಾಡಲು ( Auto Driver Attempt to Kidnaping ) ಯತ್ನಿಸಿದ್ದಾನೆ. ಈ ವೇಳೆಯಲ್ಲಿ ಮಹಿಳೆ ಆಟೋದಿಂದ ಜಿಗಿದು (Women Jump Auto) ತನ್ನ ಪ್ರಾಣವನ್ನು ಉಳಿಸಿಕೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಇದೀಗ ಮಹಿಳೆ ತನ್ನ ನೋವನ್ನು ಟ್ವೀಟ್‌ ಮಾಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಯಾಣದ ವೇಳೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲಾ ಅನ್ನೋ ಮಾತು ಪದೇ ಪದೇ ಕೇಳಿಬರುತ್ತಿದೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಮಹಿಳೆಯ ತನಗಾಗಿರುವ ನೋವನ್ನು, ತೊಂದರೆಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯೋರ್ವರು ಗುರ್‌ಗಾವ್‌ ತೆರಳಲು ಆಟೋ ಹತ್ತಿದ್ದಾರೆ. ಮನೆಯಿಂದ ನಗರಕ್ಕೆ ಕೇವಲ ಏಳು ನಿಮಿಷಗಳ ದಾರಿ. ತನ್ನ ಬಳಿಯಲ್ಲಿ ಹಣವಿಲ್ಲ, ಹೀಗಾಗಿ ನಾನು ಪೇಟಿಯಂ ಮಾಡುತ್ತೇನೆ ಅಂತಾ ಮಹಿಳೆ ಆಟೋ ಹತ್ತುವಾಗಲೇ ತಿಳಿಸಿದ್ದರು.

ಆಟೋ ಚಾಲಕ ಒಪ್ಪಿ, ಗುರಗಾವ್‌ ಕಡೆಗೆ ಆಟೋವನ್ನು ಚಲಾಯಿಸುವುದಕ್ಕೆ ಶುರು ಮಾಡಿದ್ದಾನೆ. ಆಟೋ ಚಾಲಕ ನಗರದ ಕಡೆಗೆ ಚಲಿಸುವ ಬದಲು ಬೇರೆ ಮಾರ್ಗದಲ್ಲಿ ತನ್ನನ್ನ ಕರೆದೊಯ್ಯಲು ಮುಂದಾಗಿದ್ದಾನೆ. ಕೂಡಲೇ ತಾನು ಎಚ್ಚೆತ್ತುಕೊಂಡು ಆಟೋ ಚಾಲಕನ ಬಳಿಯಲ್ಲಿ ಪ್ರಶ್ನೆ ಮಾಡಿದ್ದೆ. ಆದರೆ ಆಟೋ ಚಾಲಕ ಯಾವುದೇ ಉತ್ತರವನ್ನೂ ನೀಡದೆ ವೇಗವಾಗಿ ಆಟೋವನ್ನು ಓಡಿಸೋದಕ್ಕೆ ಶುರು ಮಾಡಿದ್ದಾನೆ. ಈ ವೇಳೆಯಲ್ಲಿ ನಾನು ಭಯಗೊಂಡಿದ್ದೆ.

ನಾನು ಕಿಡ್ನಾಪ್‌ ಆಗುತ್ತೇನೆ ಅಂತಾ ಅಂದುಕೊಂಡು ಭಯಗೊಂಡಿದ್ದೆ. ಆಟೋ ಸುಮಾರು 40 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ದಾರಿ ಕಾಣದೇ ಆಟೋದಿಂದ ಜಿಗಿದು (Women Jump Auto) ಪ್ರಾಣ ಉಳಿಸಿಕೊಂಡಿದ್ದೇನೆ. ಆ ಘಟನೆಯನ್ನು ನೆನಪಿಸಿಕೊಂಡ್ರೆ ಈಗಲೂ ಭಯವಾಗುತ್ತೆ ಅಂತಾ ಮಹಿಳೆ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆಟೋ ಚಾಲಕನನ್ನು ನೋಡಿದ್ರೆ ಆತ ಊಬರ್‌ ಆಟೋ ಚಾಲಕನಾಗಿರಬಹುದು ಎಂದು ಮಹಿಳೆ ತಿಳಿಸಿದ್ದಾರೆ. ನನ್ನ ಜೀವನದ ಅತ್ಯಂತ ಭಯಾನಕವಾದ ದಿನ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಘಟನೆಯ ಬೆನ್ನಲ್ಲೇ ಗುರಗಾವ್‌ ಪೊಲೀಸರು ಅಲರ್ಟ್‌ ಆಗಿದ್ದು, ಆಟೋ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ಮಹಿಳೆಯರು ಸಂಚಾರ ಮಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಮೊಬೈಲ್​ ಆಸೆಗಾಗಿ ಮಹಿಳೆ ಮೇಲೆ ದೌರ್ಜನ್ಯ..! ನಡುರಸ್ತೆಯಲ್ಲಿ ಮಹಿಳೆಯನ್ನು ಎಳೆದಾಡಿದ ಪಾಪಿಗಳು..!

ಇದನ್ನೂ ಓದಿ : horse Price : ಅಬ್ಬಬ್ಬಾ..ಎರಡು ಬೆಂಜ್​​ ಕಾರಿನ ಮೌಲ್ಯಕ್ಕೆ ಸಮ ಈ ಕುದುರೆಯ ಬೆಲೆ..!

( Women Jump Auto : Gurgaon Woman Shares Auto Driver Attempt to Kidnaping Jump Out Of the Moving Vehicle )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular