ವಾರಾಣಸಿ : Gyanvapi mosque ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಜ್ಞಾನವಾಪಿ ಮಸೀದಿ ವಿವಾದ ಸಂಬಂಧ ಇಂದು ಅಂತಿಮ ತೀರ್ಪು ಹೊರಬೀಳಲಿದೆ. ವಾರಾಣಸಿಯ ಜಿಲ್ಲಾ ಕೋರ್ಟ್ ನ ಜಡ್ಜ್ ಎ.ಕೆ.ವಿಶ್ವೇಶ ಅವರು ಇಂದು ತೀರ್ಪು ಪ್ರಕಟಿಸಲಿದ್ದಾರೆ. ಹೀಗಾಗಿ ವಾರಾಣಸಿಯ ಜ್ಞಾನವಾಪಿ ಮಸೀದಿ ಮತ್ತು ಕಾಶಿವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಕಳೆದ ಮೇ ನಲ್ಲಿ ಐವರು ಮಹಿಳೆಯರು ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿ ಇದೆ, ಆ ಗೌರಿ ಮೂರ್ತಿಯನ್ನ ಪೂಜೆಮಾಡಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು. ಇದ್ರ ಬೆನ್ನಲ್ಲೆ ಜ್ಞಾನವಾಪಿ ಮಸೀದಿ, ಮಸೀದಿಯೇ ಅಲ್ಲ ಅದು ಕಾಶಿ ವಿಶ್ವನಾಥನ ಮೂಲ ಮಂದಿರ, ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿದೆ ಅಂತಾ ಕೆಲವರು ವಾದಿಸಿದ್ರು. ಅಲ್ದೆ ಮಸೀದಿಯಲ್ಲಿ ವಿಡಿಯೋ ಸರ್ವೆ ಮಾಡಬೇಕೆಂದು ಅರ್ಜಿ ಸಲ್ಲಿಸಿದ್ರು.
ಸುಪ್ರೀಂಕೋರ್ಟ್ ಈ ಪ್ರಕರಣವನ್ನ ವಾರಾಣಸಿಯ ಜಿಲ್ಲಾ ಕೋರ್ಟ್ ಗೆ ವರ್ಗಾಯಿಸಿತ್ತು. ಕಳೆದ ಮೇ ಯಿಂದ ವಿಚಾರಣೆ ನಡೆಸಿದ್ದ ಜಿಲ್ಲಾ ಕೋರ್ಟ್ ನ ಜಡ್ಜ್ ವಿಶ್ವೇಶ ಅವರು, ಕಳೆದ ಆಗಸ್ಟ್ ನಲ್ಲಿ ಸೆಪ್ಟೆಂಬರ್ 12 ರಂದು ಅಂದ್ರೆ ಇಂದು ತಮ್ಮ ಆದೇಶವನ್ನ ಕಾಯ್ದಿರಿಸಿದ್ರು. ಇಂದು ಮಹಿಳೆಯರು ಸಲ್ಲಿಸಿದ್ದ ಅರ್ಜಿ ಅಂದ್ರೆ ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿಗೆ ಪೂಜೆ ಸಲ್ಲಿಸಬಹುದೇ ಅನ್ನೋ ವಿಚಾರವಾಗಿ ಕೋರ್ಟ್ ತನ್ನ ತೀರ್ಪು ನೀಡಲಿದೆ. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಸೀದಿ ಹಾಗೂ ಕಾಶಿ ವಿಶ್ವನಾಥನದ ದೇವಸ್ಥಾನದ ಸುತ್ತ ಬಿಗಿ ಭದ್ರತೆಯನ್ನ ನಿಯೋಜಿಸಲಾಗಿದೆ. ಭಾನುವಾರದಿಂದಲೇ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಏನಿದು ಪ್ರಕರಣ? ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಭಾಗವಾಗಿತ್ತು ಎಂಬುದು ಹಿಂದೂಗಳ ವಾದ. ಈ ಮಸೀದಿಯ ಹೊರ ಗೋಡೆಯಲ್ಲಿ ಶೃಂಗಾರ ಗೌರಿ ಸೇರಿದಂತೆ ಹಿಂದೂ ದೇವರ ವಿಗ್ರಹಗಳಿವೆ. ಇವುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಐವರು ಹಿಂದೂ ಮಹಿಳೆಯರು ಅರ್ಜಿ ಹಾಕಿದ್ದರು. ಜ್ಞಾನವಾಪಿ ಮಸೀದಿ ವಕ್ಫ್ ಆಸ್ತಿ ಆಗಿದೆ ಎಂದು ವಾದಿಸಿರುವ ಅಂಜುಮನ್ ಇಂತೇಜಾಮಿಯಾ ಮಸ್ಜಿದ್ ಕಮಿಟಿ, ಹಿಂದೂಗಳ ಮನವಿಯನ್ನ ಪ್ರಶ್ನಿಸಿದೆ. ಹಿಂದೂ ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಮಹಿಳಾ ಅರ್ಜಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ವಾದಿಸಿದ್ದರು. ಜಿಲ್ಲಾ ಕೋರ್ಟ್ ವಿಚಾರಣೆಗೆ ಮುನ್ನ ಕೆಳಗಿನ ನ್ಯಾಯಾಲಯವೊಂದು ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇಕ್ಷಣೆ ನಡೆಸಲು ಆದೇಶಿಸಿತ್ತು. ಕೆಲ ಅಡೆತಡೆಗಳ ನಂತರ ಮೇ 16ರಂದು ಸರ್ವೆ ಕೆಲಸ ಮುಗಿದು ಮೇ 19ರಂದು ವಿಡಿಯೋ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮಾಡಿರುವ ವಿಡಿಯೋ ರೆಕಾರ್ಡಿಂಗ್ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂಬುದು ಹಿಂದೂ ಅರ್ಜಿದಾರರ ಪರವಾಗಿರುವವರ ವಾದ. ಆದರೆ, ಅದು ಶಿವಲಿಂಗವಲ್ಲ ಅದು ನಮಾಜ್ ಮಾಡುವ ಮುನ್ನ ಕೈ ಕಾಲು ತೊಳೆದುಕೊಳ್ಳುವ ವುದು ಅನ್ನೋ ಸ್ಥಳ, ಮತ್ತು ಅದು ಕಾರಂಜಿ ವ್ಯವಸ್ಥೆ ಅಂತಾ ಪ್ರತಿವಾದ ಮಂಡಿಸಿತ್ತು. ಅಲ್ಲದೇ, ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿರುವ ವಿಡಿಯೋಗ್ರಫಿ ಸರ್ವೆಯ ಅಂಶಗಳು ಸೋರಿಕೆಯಾಗಿದ್ವು. ಇದನ್ನೂ ಮುಸ್ಲಿಂ ಅರ್ಜಿದಾರರು ಉಲ್ಲೇಖಿಸಿದ್ರು. ಇದೀಗ ವಾದ ಪ್ರತಿವಾದ ಮುಗಿದಿದ್ದು, ಇಂದು ಅಂತಿಮ ತೀರ್ಪು ಹೊರಬೀಳಲಿದೆ. ಹೀಗಾಗಿ ಎಲ್ಲರ ಚಿತ್ತ ವಾರಾಣಸಿ ಕೋರ್ಟ್ ಮೇಲಿದೆ.
Gyanvapi mosque-Key Decision On Gyanvapi Mosque Case In Varanasi Today