ಮಂಗಳವಾರ, ಏಪ್ರಿಲ್ 29, 2025
HomeNationalSaina Nehwal : ನಟ ಸಿದ್ಧಾರ್ಥ್​ ಬಹಿರಂಗ ಕ್ಷಮೆಯನ್ನು ಸ್ವೀಕರಿಸಿದ ಸೈನಾ ನೆಹ್ವಾಲ್

Saina Nehwal : ನಟ ಸಿದ್ಧಾರ್ಥ್​ ಬಹಿರಂಗ ಕ್ಷಮೆಯನ್ನು ಸ್ವೀಕರಿಸಿದ ಸೈನಾ ನೆಹ್ವಾಲ್

- Advertisement -

Saina Nehwal :ಪಂಜಾಬ್​ನಲ್ಲಿ ಪ್ರಧಾನಿ ಮೋದಿಗೆ ಬೆಂಗಾವಲು ವಾಹನವನ್ನು ಅಡ್ಡಗಟ್ಟುವ ಮೂಲಕ ಉಂಟಾದ ಭದ್ರತಾ ಲೋಪವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಈ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಮಾಡಿದ ಟ್ವೀಟ್​ಗೆ ನಟ ಸಿದ್ಧಾರ್ಥ್​ ನೀಡಿದ ಪ್ರತಿಕ್ರಿಯೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿಶ್ವ ಮಟ್ಟದ ಬ್ಯಾಡ್ಮಿಂಟನ್​ ಆಟಗಾರ್ತಿಗೆ ಲೈಂಗಿಕ ಅಶ್ಲೀಲ ಪದ ಬಳಕೆ ಮಾಡಿದ್ದಕ್ಕೆ ನಟ ಸಿದ್ಧಾರ್ಥ್​ ಕ್ಷಮೆಯಾಚಿಸಬೇಕು ಎಂದು ಎಲ್ಲೆಡೆಯಿಂದ ಕೂಗು ಕೇಳಿ ಬಂದಿತ್ತು. ಮಹಿಳಾ ಆಯೋಗ ಕೂಡ ಸಿದ್ದಾರ್ಥ್ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಸಿದ್ಧಾರ್ಥ್​ ಬಹಿರಂಗ ಪತ್ರದ ಮೂಲಕ ಕ್ಷಮೆಯಾಚಿಸಿದ್ದರು. ಈ ಕ್ಷಮಾ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸೈನಾ ನೆಹ್ವಾಲ್​ ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ.


ನಿನ್ನೆ ತಡರಾತ್ರಿ ಟ್ವೀಟ್​ ಮಾಡಿದ್ದ ನಟ ಸಿದ್ದಾರ್ಥ್​, ಆತ್ಮೀಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್​ಗೆ ಪ್ರತಿಯಾಗಿ ನಾನು ಮಾಡಿದ ಕೆಟ್ಟ ಜೋಕ್​ಗೆ ಕ್ಷಮೆಯಾಚಿಸುತ್ತಿದ್ದೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸುತ್ತೇನೆ. ಆದರೆ ನಾನು ಬಳಕೆ ಮಾಡಿದ ಪದವನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ತಮಾಷೆಯನ್ನು ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದಾದ ಮೇಲೆ ಅದು ಒಳ್ಳೆಯ ಜೋಕ್​ ಅಲ್ಲ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.


ಇನ್ನು ಈ ವಿಚಾರವಾಗಿ ಮಾತನಾಡಿದ ಸೈನಾ ನೆಹ್ವಾಲ್​, ಇದನ್ನೆಲ್ಲ ಅವರೇ ಹೇಳಿದ್ದಾರೆ. ಈಗ ಅವರೇ ಕ್ಷಮೆ ಕೇಳಿದ್ದಾರೆ. ಅಂದು ನಾನು ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿರೋದನ್ನು ಕಂಡು ನನಗೆ ಆಶ್ಚರ್ಯವಾಯ್ತು. ನಾನು ಸಿದ್ಧಾರ್ಥ್​ ಬಳಿ ಎಂದಿಗೂ ಮಾತನಾಡಿಲ್ಲ. ಈಗ ಅವರೆ ಕ್ಷಮೆಯಾಚಿಸಿದ್ದಾರೆ ಖುಷಿಯಾಗಿದೆ. ಮಹಿಳೆಯರ ಘನತೆಗೆ ಎಂದಿಗೂ ಧಕ್ಕೆ ತರಬಾರದು. ಇಂತಹ ವಿಚಾರಗಳು ನನ್ನ ವಿಚಲಿತರನ್ನಾಗಿಸುವುದಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಖುಷಿಯಾಗಿಯೆ ಇದ್ದೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.

Happy in my space, god bless him, Saina Nehwal says as she accepts actor Siddharth’s apology

ಇದನ್ನು ಓದಿ : Bangalore Lockdown : ಬೆಂಗಳೂರಿನಲ್ಲಿ ಕರೋನಾ ರೌದ್ರ ನರ್ತನ : ಸೋಂಕಿನ ಪ್ರಮಾಣ ನಿಯಂತ್ರಿಸಲು ಅನಿವಾರ್ಯವಾಗುತ್ತಾ ಲಾಕ್ ಡೌನ್ ?

ಇದನ್ನೂ ಓದಿ : Bombay High Court : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್

RELATED ARTICLES

Most Popular