SC Says MLA Suspension not more than 6 months: ಒಂದು ವರ್ಷ ಶಾಸಕರ ಅಮಾನತು ಉಚ್ಚಾಟನೆಗಿಂತಲೂ ಕೆಟ್ಟದು ಎಂದ ಸುಪ್ರೀಂಕೋರ್ಟ್

ನವದೆಹಲಿ: ಮಹಾರಾಷ್ಟ್ರ(Maharashtra) ವಿಧಾನಸಭೆಯಿಂದ ಬಿಜೆಪಿಯ 12 ಶಾಸಕರನ್ನು ಒಂದು ವರ್ಷ ಕಾಲ ಅಮಾನತುಗೊಳಿಸಿ(Suspension)ರುವ ಕ್ರಮ ಉಚ್ಛಾಟನೆ(Expulsion)ಗಿಂತಲೂ ಕೆಟ್ಟದ್ದು. ಸಂವಿಧಾನದತ್ತವಾಗಿ ಚುನಾಯಿತ ಜನಪ್ರತಿನಿಧಿಗಳಿಗೆ ಇರುವ ಹಕ್ಕುಗಳನ್ನು ಸ್ಪೀಕರ್ ಮೊಟಕುಗೊಳಿಸಲು ಮಾಡಿರುವುದು ಸಾಂವಿಧಾನಾತ್ಮಕವಾಗಿ ಸಮರ್ಥನೀಯ ಕ್ರಮ ಅಲ್ಲ(SC Says MLA Suspension ) ಎಂದು ಸುಪ್ರೀಂಕೋರ್ಟ್ ಹೇಳಿದೆ.

ಶಾಸಕರು ವಿಧಾನಸಭೆಗೆ ಆರು ತಿಂಗಳು ಗೈರು ಹಾಜರಾದರೆ, ಅವರ ಸ್ಥಾನ ಖಾಲಿ ಇದೆ ಎಂದು ಪರಿಭಾವಿಸುವಾಗ, ಒಂದು ವರ್ಷ ಅಮಾನತನ್ನು ಯಾವ ಆಧಾರದಲ್ಲಿ ಮಾಡಲಾಗಿದೆ? ಯಾವುದೇ ವಿಧಾನಸಭಾ ಕ್ಷೇತ್ರ ಆರು ತಿಂಗಳಿಗಿಂತ ಹೆಚ್ಚು ಕಾಲ ಖಾಲಿ ಇರಬಾರದೆಂಬ ಕಾನೂನೇ ಇದೆ. ಹೀಗಿರುವಾಗ ನೀವು (ಸ್ಪೀಕರ್) ಶಾಸಕರನ್ನು ಒಂದು ವರ್ಷ ಅಮಾನತು ಮಾಡಿದ್ದು ಏಕೆ ಎಂದು ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವ ಪೀಠ ಮಂಗಳವಾರ ಪ್ರಶ್ನಿಸಿದೆ. 12 ಇರಲಿ 120 ಇರಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಸಮಾನ ಪ್ರಾತಿನಿಧ್ಯವಿದೆ ಎಂಬುದನ್ನು ಮರೆಯಬೇಡಿ ಎಂದು ಹೇಳಿ, ವಿಚಾರಣೆಯನ್ನು ಜ.18ಕ್ಕೆ ಮುಂದೂಡಿದೆ.

ಕಳೆದ ವರ್ಷ ಜುಲೈನಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿದ್ದಾಗ ಬಿಜೆಪಿ ಶಾಸಕರು ಅನುಚಿತವಾಗಿ ವರ್ತಿಸಿದರೆಂಬ ಆಪಾದನೆ ಮೇಲೆ ಮಂಡನೆಯಾದ ಶಿಸ್ತು ಕ್ರಮ ನಿಲುವಳಿ ಅಂಗೀಕಾರವಾಗಿ 12 ಶಾಸಕರನ್ನು ಒಂದು ವರ್ಷ ತನಕ ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅಶೀಶ್ ಶೇಲರ್ ನಾಯಕತ್ವದಲ್ಲಿ ಅಮಾನತುಗೊಂಡ ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ದೇಗುಲ ಸ್ವಚ್ಛದ ಆದೇಶ ವಾಪಸ್ ಪಡೆದ ಜಡ್ಜ್:
ಬಿಹಾರದ ಬಕ್ಸಾರ್ನ ಪ್ರವಾಸಿ ಮಂದಿರದ ಸುತ್ತಮುತ್ತ ಇರುವ ದೇವಸ್ಥಾನಗಳನ್ನು ಸ್ವಚ್ಛಗೊಳಿಸುವಂತೆ ಜ.6ರಂದು ಹೊರಡಿಸಿದ್ದ ವಿವಾದಾತ್ಮಕ ಆದೇಶವನ್ನು ಬಕ್ಸಾರ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ವಾಪಸ್ ಪಡೆದಿದ್ದಾರೆ. ಬಿಹಾರದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ನಿರ್ದೇಶನದ ಅನುಸಾರವಾಗಿ ಮಂದಿರ ಸ್ವಚ್ಛತೆ ಆದೇಶ ಹೊರಡಿಸಿದ್ದಾಗಿ ಜಿಲ್ಲಾ ಜಡ್ಜ್ ತಿಳಿಸಿದ್ದರು. ಆದರೆ, ಹೈಕೋರ್ಟ್‌ನಿಂದ ಇಂಥ ಯಾವುದೇ ಸುತ್ತೋಲೆ ಬಂದಿಲ್ಲ ಎಂದು ಸ್ಪಷ್ಟವಾಗುತ್ತಿದ್ದಂತೆ ಜ.5ರ ಆದೇಶವನ್ನು ಹಿಂಪಡೆದಿದ್ದಾರೆ. ಹಿಂದಿನ ನೋಟಿಸ್ ನೀಡುವಲ್ಲಿ ಕಿಡಿಗೇಡಿಗಳ ಕೈವಾಡವಿರಬಹುದು. ಈ ವಿಚಾರದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾ ಜಡ್ಜ್ ಹೇಳಿದ್ದಾರೆ. ಈ ಮಧ್ಯೆ, ಜಿಲ್ಲಾ ನ್ಯಾಯಾಧೀಶರ ಆದೇಶಾನುಸಾರ ಕೋರ್ಟ್ ಸಿಬ್ಬಂದಿ ಜ. 9ರಂದು ಪ್ರವಾಸಿ ಮಂದಿರ ಸಮೀಪದ ದೇವಸ್ಥಾನವೊಂದನ್ನು ಸ್ವಚ್ಛಗೊಳಿಸಿದ್ದರು.

ಇದನ್ನೂ ಓದಿ: SC On NEET-PG Admissions For 2021-22: ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿ: ಒಬಿಸಿ, ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿಹಿಡಿದ ಸುಪ್ರೀಂಕೋರ್ಟ್

(SC Says MLA Suspension not more than 6 months)

Comments are closed.