West Bengal CM Mamata Banerjee : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ಟ್ವಿಟರ್ನಲ್ಲಿ ರಾಜ್ಯಪಾಲ ಜಗದೀಪ್ ಧನಕರ್ರನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಭಾನುವಾರದಂದು ರಾಜ್ಯದಲ್ಲಿ ಪ್ರಜಾಪ್ರಭುತ್ವವವು ಗ್ಯಾಸ್ ಛೇಂಬರ್ ಆಗಿದೆ ಎಂದು ಟ್ವೀಟಾಯಿಸಿದ್ದರು. ಇದರಿಂದ ಕೋಪಗೊಂಡಿರುವ ಮಮತಾ ಬ್ಯಾನರ್ಜಿ ಇಂದು ರಾಜ್ಯಾಪಾಲ ಜಗದೀಪ್ ಧನಕರ್ರ ಟ್ವಿಟರ್ ಖಾತೆಯನ್ನು ನಿರ್ಬಂಧಿಸಿದ್ದಾರೆ.
ರಾಜ್ಯಪಾಲ ಜಗದೀಪ್ ಧನಕರ್ ಪ್ರತಿದಿನ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳನ್ನು ನಿಂದಿಸಲು ಏನಾದರೊಂದು ಟ್ವೀಟ್ ಮಾಡುತ್ತಲೇ ಬರ್ತಿದ್ದಾರೆ. ಸಂವಿಧಾನ ವಿರೋಧಿ, ಅನೈತಿಕ ವಿಚಾರಗಳನ್ನೇ ಟ್ವೀಟ್ ಮಾಡುತ್ತಾರೆ. ರಾಜ್ಯಪಾಲರಾಗಿ ಅವರು ಸರ್ಕಾರಕ್ಕೆ ಯಾವುದೇ ಸಲಹೆ ನೀಡುತ್ತಿಲ್ಲ. ಆದರೆ ಚುನಾಯಿತ ಸರ್ಕಾರವನ್ನು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಕಾರ್ಮಿಕರಂತೆ ನಡೆಸಿಕೊಳ್ತಿದ್ದಾರೆ. ಅವರ ವರ್ತನೆಯಿಂದ ರೋಸಿ ಹೋಗಿರುವ ನಾನು ಧನಕರ್ರನ್ನು ಟ್ವಿಟರ್ನಿಂದ ಬ್ಲಾಕ್ ಮಾಡಿದ್ದೇನೆ ಎಂದು ಸುದ್ದಿಗೋಷ್ಠಿ ನಡೆಸಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ರಾಜ್ಯಪಾಲರನ್ನು ಧನ್ಕರ್ರನ್ನು ಪದಚ್ಯುತಿಗೊಳಿಸುವಂತೆ ಒತ್ತಾಯಿಸಿ ನಾನು ಪ್ರಧಾನಿ ಮೋದಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಆದರೆ ಇದುವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾತ್ಮ ಗಾಂಧಿಯ ಪುಣ್ಯತಿಥಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಧನಕರ್ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಟ್ವಿಟರ್ನಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಜಾಪ್ರಭುತ್ವದ ಕೊಲೆಗಾರ ಎಂದು ಜರಿದಿದ್ದರು. ಬಂಗಾಳದ ಪವಿತ್ರ ಭೂಮಿಯಲ್ಲಿ ಹಿಂಸಾಚಾರ ಹಾಗೂ ಮಾನವ ಹಕ್ಕುಗಳ ಮೇಲೆ ತುಳಿದ ಪ್ರಯೋಗಾಲಯವನ್ನು ನಾನು ನೋಡಲು ಬಯಸುವುದಿಲ್ಲ. ರಾಜ್ಯವು ಪ್ರಜಾಪ್ರಭುತ್ವದ ಗ್ಯಾಸ್ ಛೇಂಬರ್ ಆಗಿ ಬದಲಾಗುತ್ತಿದೆ ಎಂದು ಜನರೇ ಹೇಳುತ್ತಾರೆ ಎಂದು ಟ್ವೀಟಾಸ್ತ್ರ ಪ್ರಯೋಗಿಸಿದ್ದರು.
Have blocked Governor Jagdeep Dhankhar’s Twitter account, says West Bengal CM Mamata Banerjee
ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್ ಗುಂಗುನ್ ಉಪಾಧ್ಯಾಯ ಆತ್ಮಹತ್ಯೆ ಯತ್ನ
ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್