ಗುಜರಾತ್: (Heeraben funeral) ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಶತಾಯುಷಿ ಹೀರಾಬೆನ್ ಮೋದಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಅಂತ್ಯಕ್ರೀಯೆ ಗುಜರಾತ್ ನ ಗಾಂಧಿನಗರದ ಚಿತಾಗಾರದಲ್ಲಿ ನೆರೆವೇರಿದೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಪ್ರಧಾನಿ ಮೋದಿ ಅವರ ತಾಯಿಯ ಅಂತ್ಯಕ್ರೀಯೆ ನೆರವೇರಿದೆ.
ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಮೋದಿ ಅವರ ತಾಯಿ ನಿಧನವಾಗಿರುವ ವಿಷಯ ತಿಳಿದಿದ್ದು, 9:30 ರ ಹೊತ್ತಿಗೆ ನಡೆಯಬೇಕಾಗಿದ್ದ ಎಲ್ಲಾ ವಿಧಿವಿಧಾನಗಳು (Heeraben funeral) ನೆರವೇರಿದೆ. ಕೇವಲ ಮೂರು ವರೆ ಗಂಟೆಯ ಒಳಗೆ ಮೋದಿ ಅವರ ತಾಯಿಯ ಅಂತಿಮ ಕ್ರೀಯೆ ನೆರವೇರಿದ್ದು, ಯಾವುದೇ ಆಡಂಬರವಿಲ್ಲದೇ ಸರಳವಾಗಿ ನೆರವೇರಿಸಿದ್ದು, ಎಲ್ಲರ ಜನಮನ್ನಣೆಗೆ ಮೋದಿಜಿ ಅವರು ಪಾತ್ರರಾಗಿದ್ದಾರೆ.
ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ಮುಗಿದೋಯ್ತು. ಕೇವಲ ಮೂರೇ ಮೂರು ಗಂಟೆಯಲ್ಲಿ ಅಂತ್ಯಕ್ರೀಯೆ ನಡೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಯಾವುದೇ ಮಾಧ್ಯಮಗಳ ಲೈವ್ ವರದಿಗಳು ಇಲ್ಲ, ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ. ಯಾವುದೇ ಆಡಂಭರದಲ್ಲಿ ಶವಯಾತ್ರೆ ನಡೆಯಲಿಲ್ಲ, ಶವಗಳನ್ನು ಹೊತ್ತು ಸಾಗುವಾಗ ರಸ್ತೆ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ನಡೆಸಿಲ್ಲ. ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಲಿಲ್ಲ. ಶತಾಯುಷಿ ತಾಯಿಯ ಹೆಮ್ಮೆಯ ಪುತ್ರನ ಅಭಿಮಾನಿಗಳ ಘೋಷಣೆಗಳಿಲ್ಲ. ಅಷ್ಟೇ ಯಾಕೇ ಅಂತ್ಯ ಸಂಸ್ಕಾರಕ್ಕೆಂದು ಎಕರೆ ಗಟ್ಟಲೇ ಜಾಗವನ್ನು ನೆಲಸಮ ಕೂಡ ಮಾಡಲಿಲ್ಲ. ದೇಶದ ಪ್ರಧಾನಿಯ ತಾಯಿಯಾದರೂ ಕೂಡ ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಹಾಕಲಿಲ್ಲ. ಅಗ್ನಿಸ್ಪರ್ಶ ಮಾಡುವಾಗ ಶ್ರೀಗಂಧದ ಕಟ್ಟಿಗೆಗಳನ್ನು ಬಳಸಲಿಲ್ಲ. ಬದಲಾಗಿ ಸಾಮಾನ್ಯ ವ್ಯಕ್ತಿಗಳಂತೆ ಸಿಕ್ಕ ಕಟ್ಟಿಗೆಯಲ್ಲೇ, ಜನಸಾಮಾನ್ಯರು ಅಂತ್ಯಕ್ರೀಯೆ ನಡೆಸುವ ಚಿತಾಗಾರದಲ್ಲಿಯೇ ತನ್ನ ತಾಯಿಯ ಅಂತ್ಯಕ್ರೀಯೆ(Heeraben funeral)ಯನ್ನು ಅತ್ಯಂತ ಸರಳವಾಗಿ ನಡೆಸಿಕೊಟ್ಟರು.
ಇದನ್ನೂ ಓದಿ : Modi’s mother Heeraben passed away : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ : ಸಂತಾಪ ಸೂಚಿಸಿದ ಬಾಲಿವುಡ್ ದಿಗ್ಗಜರು
ಹೀರಾಬೆನ್ ಅವರು ತನ್ನ ಜೀವನದುದ್ದಕ್ಕೂ ಸರಳವಾಗಿಯೇ ಬದುಕಿಕೊಂಡು ಬಂದವರು. ಅವರ ಹೆಮ್ಮೆಯ ಪುತ್ರ ಪ್ರಧಾನಿ ಮೋದಿ ಅವರು ಕೂಡ ಅವರಂತೆಯೇ ಸರಳ ಜೀವಿಯಾಗಿದ್ದರು. ಇಡೀ ಭಾರತವನ್ನೇ ಆಳುವ ದೊರೆಯಾದರೂ ಕೂಡ ಯಾವುದೇ ಅಹಂಕಾರವಿಲ್ಲದೇ, ವ್ಯಾಮೋಹವಿಲ್ಲದೇ ಸದಾ ಜನರಿಗಾಗಿ ಕಾರ್ಯಗಳಲ್ಲಿ ತಲ್ಲೀನರಾಗುವ ಮೋದಿ ಇಂದು ತಮ್ಮ ತಾಯಿಯ ಅಂತ್ಯಕ್ರೀಯೆಯಲ್ಲೂ ಕೂಡ ತಮ್ಮ ಸರಳತೆಯನ್ನು ತೋರಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇವರ ಇಂತಹ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
Against this backdrop, his cremation took place at the crematorium in Gandhinagar, Gujarat. Prime Minister Modi’s mother’s last rites have been performed like ordinary people.