Sachin Kayaking : ಪ್ಯಾಡ್ ಬಿಟ್ಟು ಪ್ಯಾಡಲ್ಸ್ ಹಿಡಿದ ಸಚಿನ್ : ಥಾಯ್ಲೆಂಡ್’ನಲ್ಲಿ ಕಯಾಕಿಂಗ್ ಪಾಠ ಕಲಿತ ಮಾಸ್ಟರ್ ಬ್ಲಾಸ್ಟರ್

ಬ್ಯಾಂಕಾಂಕ್ : ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ (Sachin Tendulkar) ಕ್ರಿಕೆಟ್’ನಿಂದ ನಿವೃತ್ತಿಯಾಗಿ 9 ವರ್ಷಗಳೇ ಕಳೆದಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿರುವ ಸಚಿನ್ ತೆಂಡೂಲ್ಕರ್, ಜಮ್ಮ ಜೀವನದ ಅಪ್’ಡೇಟ್ಸ್’ಗಳನ್ನು ಸೋಷಿಯಲ್ ಮೀಡಿಯಾ (Sachin Kayaking) ಮೂಲಕ ತಮ್ಮ ಅಭಿಮಾನಿಗಳಿಗೆ ನೀಡುತ್ತಲೇ ಇರುತ್ತಾರೆ.

ಸದ್ಯ ಪತ್ನಿ ಅಂಜಲಿ ತೆಂಡೂಲ್ಕರ್ ಜೊತೆ ಥಾಯ್ಲೆಂಡ್ ಪ್ರವಾಸದಲ್ಲಿರುವ ಮಾಸ್ಟರ್ ಬ್ಲಾಸ್ಟರ್, ವಿಶೇಷ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾ ಪ್ಲಾಟ್’ಫಾರ್ಮ್ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಥಾಯ್ಲೆಂಡ್’ನಲ್ಲಿ ವೃತ್ತಿಪರ ಕಯಾಕಿಂಗ್ ಪಟುವೊಬ್ಬರಿಂದ ಕಯಾಕಿಂಗ್ ಕಲಿಯುತ್ತಿರುವ ವಿಡಿಯೋವನ್ನು ಸಚಿನ್ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ (Sachin Tendulkar learning kayaking skills). ತಾವು ಇದೇ ಮೊದಲ ಬಾರಿ ಕಯಾಕಿಂಗ್ ನಡೆಸುತ್ತಿರುವುದಾಗಿ ಸಚಿನ್ ಬರೆದುಕೊಂಡಿದ್ದಾರೆ. ಸಚಿನ್ ಅವರ ಈ ವೀಡಿಯೊ ಇನ್’ಸ್ಟಾಗ್ರಾಂನಲ್ಲಿ 19 ಮಿಲಿಯನ್ ಲೈಕ್ಸ್’ಗಳನ್ನು ಪಡೆದಿದೆ.

“ಇದೊಂದು ರೀತಿಯಲ್ಲಿ ರಿವರ್ಸ್ ಸ್ವಿಂಗ್ ಇದ್ದಂತೆ. ಕ್ರಿಕೆಟ್’ನಲ್ಲಿ ಪ್ಯಾಡ್ ಅಪ್ ಆಗುವ ಬದಲು ಇಲ್ಲಿ ಪ್ಯಾಡಲ್ ಹಿಡಿದಿದ್ದೇನೆ” ಎಂದು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ ಸಚಿನ್,

https://www.instagram.com/reel/CmtmCeugVJy/?utm_source=ig_web_copy_link

ಸಚಿನ್ ತೆಂಡೂಲ್ಕರ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಚಿನ್’ಗೆ ಕಯಾಕಿಂಗ್ ಕಲಿಸುತ್ತಿರುವ ವ್ಯಕ್ತಿಯನ್ನುದ್ದೇಶಿಸಿ, “ನೀನು ಯಾರಿಗೆ ಕಯಾಕಿಂಗ್ ಹೇಳಿ ಕೊಡುತ್ತಿದ್ದೀಯಾ ಎಂಬುದು ನಿನಗೆ ಗೊತ್ತಾ? ನೀನು ಕ್ರಿಕೆಟ್ ದೇವರಿಗೆ ಪಾಠ ಹೇಳಿ ಕೊಡುತ್ತಿರುವೆ” ಎಂದು ಸಚಿನ್ ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.
ಸಚಿನ್ ಅವರ ಕಯಾಕಿಂಗ್ ವೀಡಿಯೊ ಬಗ್ಗೆ ಇನ್’ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸಚಿನ್ ಅವರ ದೀರ್ಘಕಾಲದ ಕ್ರಿಕೆಟ್ ಒಡನಾಡಿ ಸೌರವ್ ಗಂಗೂಲಿ “ಸಚ್, ನೀನು ಫುಲೇ ಬೇನಲ್ಲಿದ್ದೀಯಾ” ಎಂದಿದ್ದಾರೆ.

ಇದನ್ನೂ ಓದಿ : Rishabh Pant car accident: ಕಾರು ಅಪಘಾತದಲ್ಲಿ ಗಂಭೀರ ಗಾಯ; ರಿಷಭ್ ಪಂತ್ ಚೇತರಿಕೆಗೆ ಕ್ರಿಕೆಟ್ ದಿಗ್ಗಜರ ಹಾರೈಕೆ

ಇದನ್ನೂ ಓದಿ : 2022 lucky for 5 legends : ಪಂಚಪಾಂಡವರಿಗೆ ಅದೃಷ್ಟ ತಂದ 2022.. ಯಾರು ಆ ಪಂಚಪಾಂಡವರು, ಏನು ಆ ಅದೃಷ್ಟ?

ಇದನ್ನೂ ಓದಿ : Rishabh Pant injured : ಡಿವೈಡರ್ ಗೆ ಕಾರು ಢಿಕ್ಕಿ : ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಗೆ ಗಂಭೀರ ಗಾಯ

49 ವರ್ಷದ ಸಚಿನ್ ತೆಂಡೂಲ್ಕರ್ 2013ರ ನವೆಂಬರ್ 16ರಂದು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ತಮ್ಮ ಕಟ್ಟ ಕಡೆಯ ಪಂದ್ಯವಾಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಹಲವಾರು ವಿಶ್ವದಾಖಲೆಗಳ ಸರದಾರನಾಗಿರುವ ಸಚಿನ್, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಹಾಗೂ 100 ಶತಕಗಳ ವಿಶ್ವದಾಖಲೆ ಹೊಂದಿದ್ದಾರೆ.

Sachin Kayaking: Sachin left the pad and took up paddles: Master blaster learned kayaking in Thailand

Comments are closed.