ಮುಂಬೈ : ಹೆಲಿಕಾಪ್ಟರ್ ಪತನಗೊಂಡು ಓರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ನಲ್ಲಿ ನಡೆದಿದೆ. ಸತ್ಪುರ ಪರ್ವತ ಶ್ರೇಣಿಗಳ ಭಾಗವಾಗಿರುವ ಜೋಪ್ಡಾ ಪ್ರದೇಶ ವಾರ್ಡಿ ಗ್ರಾಮದ ಬಳಿಯಲ್ಲಿ ಸಂಜೆ 5: 15 ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಕೂಡಲೇ ಸ್ಥಳೀಯರ ಸಹಕಾರಿಂದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಈ ಪೈಕಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ : ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!
ಹೆಲಿಕಾಫ್ಟರ್‌ನಲ್ಲಿ ಒಟ್ಟು ಇಬ್ಬರು ಪ್ರಯಾಣಿಸುತ್ತಿದ್ದು ಈ ಪೈಕಿ ಓರ್ವ ಮಹಿಳೆಯಾಗಿದ್ದಾರೆ. ಆದರೆ ಯಾರು ಪೈಲೆಟ್ ಮಾಡ್ತಾ ಇದ್ದರು ಅನ್ನೋದು ಇನ್ನು ತಿಳಿದು ಬಂದಿಲ್ಲ. ಈ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.