KGF-200M :ಬಿಡುಗಡೆಗೂ ಮುನ್ನವೇ ಮತ್ತೊಂದು ದಾಖಲೆ ಬರೆದ ಕೆಜಿಎಫ್-2 …! 200 ಮಿಲಿಯನ್ ವೀವ್ಸ್ ಪಡೆದ ಟೀಸರ್…!!

ಸ್ಯಾಂಡಲ್ ವುಡ್ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ತಂದುಕೊಟ್ಟ ಚಿತ್ರ ಕೆಜಿಎಫ್. ಕೆಜಿಎಫ್-2 ಕೂಡ ಈ ಗೌರವವನ್ನು ಎತ್ತಿಹಿಡಿಯುವ ಹಾದಿಯಲ್ಲಿದ್ದು, ಬಿಡುಗಡೆಗೂ ಮುನ್ನವೇ ಹಲವು ದಾಖಲೆ ಬರೆದಿದ್ದು, ಇದೀಗ ಕೆಜಿಎಫ್-2 ಟೀಸರ್ 200 ಮಿಲಿಯನ್ ವೀವ್ಸ್ ಪಡೆದುಕೊಂಡು ದಾಖಲೆ ಸೃಷ್ಟಿಸಿದೆ.

ಕೆಜಿಎಫ್ -2 ನಾಯಕ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜನವರಿ 8 ರಂದು ಕೆಜಿಎಫ್-2 ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು.  ರಿಲೀಸ್ ಆಗುತ್ತಿದ್ದಂತೆ ದಾಖಲೆಯ ವೀವ್ಸ್ ಪಡೆದುಕೊಂಡಿದ್ದ ಕೆಜಿಎಫ್-2 ಟೀಸರ್ ಬಳಿಕ ವಿಶ್ವದ ಅತ್ಯಂತ ಹೆಚ್ಚು ವೀಕ್ಷಣೆಗೊಳಗಾದ ಟೀಸರ್ ಎಂಬ ದಾಖಲೆ  ಬರೆದಿತ್ತು.

ಈಗ ಚಿತ್ರದ ಟೀಸರ್ ರಿಲೀಸ್ 7 ತಿಂಗಳ ಬಳಿಕ ಬರೋಬ್ಬರಿ 200 ಮಿಲಿಯನ್  ಅಂದ್ರೆ ಅಂದಾಜು 20 ಕೋಟಿ ವಿವ್ಸ್ ಪಡೆದುಕೊಂಡಿದೆ. ಇದರೊಂದಿಗೆ ಕೆಜಿಎಫ್-2 ಟೀಸರ್ ಉಳಿದ ಹಲವು ವಿಚಾರಗಳಲ್ಲೂ ರೆಕಾರ್ಡ್ ಬ್ರೇಕ್ ಮಾಡಿದೆ.

ಒಟ್ಟು 8.4 ಮಿಲಿಯನ್ಸ್ ಗೂ ಅಧಿಕ ಲೈಕ್ಸ್, 1.1 ಮಿಲಿಯನ್ ಕಮೆಂಟ್ ಹಾಗೂ 1 ಬಿಲಿಯನ್ ಇಂಪ್ರೆಸನ್ಸ್ ಗಳಿಸಿರೋ ಟೀಸರ್ ಎಂಬ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಖುಷಿ ಹಾಗೂ ಸಂಭ್ರಮದ ವಿಚಾರವನ್ನು ಕೆಜಿಎಫ್-2 ಸಿನಿಮಾ ತಂಡ ಹಂಚಿಕೊಂಡಿದ್ದು, ಈ  ದಾಖಲೆಯೇ ಚಿತ್ರದ ಮೇಲಿರುವ ನೀರಿಕ್ಷೆಯನ್ನು ಸಾಬೀತುಪಡಿಸುತ್ತಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.  

Comments are closed.