ಡೆಹ್ರಾಡೂನ್: (helicopter crash Kedarnath) ಉತ್ತರಾಖಂಡದ ಗರುಡ್ಚಾಡಿಯ ಕೇದಾರನಾಥ ದೇಗುಲದ ಬಳಿಯಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು, ಕನಿಷ್ಠ 6 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಸದ್ಯಕ್ಕೆ ಮುಖ್ಯಮಂತ್ರಿಗಳ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ಅವರು ಆರು ಮಂದಿ ಸಾವನ್ನಪ್ಪಿರುವುದು ದೃಢಪಡಿಸಿದ್ದಾರೆ.
ಯಾತ್ರಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ಆರ್ಯನ್ ಹೆಲಿಕಾಪ್ಟರ್‌ನಲ್ಲಿ ಆರು ಜನರು, 2 ಪೈಲಟ್‌ಗಳು ಮತ್ತು 4 ಯಾತ್ರಿಕರು ಪ್ರಯಾಣಿಸುತ್ತಿದ್ದರು. ಗುಪ್ತಕಾಶಿಯಿಂದ ಹೊರಟು ಕೇದಾರನಾಥಕ್ಕೆ ಹೊರಟಿತ್ತು. 33 ಕಿ.ಮೀ ಕ್ರಮಿಸಲು ನಿರ್ಧರಿಸಲಾಗಿತ್ತು. ಆದರೆ ಕೇದಾನಾಥಕ್ಕೆ ಸಮೀಪದಲ್ಲಿಯೇ ಈ ದುರಂತ ಸಂಭವಿಸಿದೆ. ಇದನ್ನೂ ಓದಿ : Bipin Rawat : ಸೇನಾ ಹೆಲಿಕಾಫ್ಟರ್ ದುರಂತ : ಬಿಪಿನ್ ರಾವತ್, ಮಧುಲಿಕಾ ರಾವತ್ ಸೇರಿ 13 ಮಂದಿ ದುರ್ಮರಣ
The helicopter crash in Kedarnath is extremely unfortunate. We are in touch with the State government to ascertain the magnitude of the loss, and are constantly monitoring the situation.
— Jyotiraditya M. Scindia (@JM_Scindia) October 18, 2022
ವಿಮಾನಯಾನ ಸಚಿವ ಜ್ಯೋತಿರಾದಿಯ ಸಿಂಧಿಯಾ, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. “ಕೇದಾರನಾಥದಲ್ಲಿ ಹೆಲಿಕಾಪ್ಟರ್ ಅಪಘಾತವು ಅತ್ಯಂತ ದುರದೃಷ್ಟಕರವಾಗಿದೆ. ನಷ್ಟದ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು ನಾವು ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ : child complaints about his mother : ನನ್ನ ತಾಯಿಯನ್ನ ಜೈಲಿಗೆ ಹಾಕಿ.. ಪೊಲೀಸರಿಗೆ 3 ವರ್ಷದ ಪುಟಾಣಿ ದೂರು.. ಕಂಪ್ಲೇಂಟ್ ಗೆ ಕಾರಣವೇನು ಗೊತ್ತಾ
#WATCH | Uttarakhand: A helicopter carrying Kedarnath pilgrims from Phata crashes, casualties feared; administration team left for the spot for relief and rescue work. Further details awaited pic.twitter.com/sDf4x1udlJ
— ANI (@ANI) October 18, 2022
ವರದಿಗಳ ಪ್ರಕಾರ ಹೆಲಿಕಾಪ್ಟರ್ ಗರುಡ ಚಟ್ಟಿ ಮೇಲೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಕೇದಾರನಾಥದಲ್ಲಿ ಹವಾಮಾನವು ತುಂಬಾ ಅನಿರೀಕ್ಷಿತವಾಗಿದೆ. ಪ್ರದೇಶದಲ್ಲಿ ಗೋಚರತೆ ತೀರಾ ಕಡಿಮೆ ಇರುವುದರಿಂದ ಕೆಟ್ಟ ಹವಾಮಾನವೂ ಈ ಕುಸಿತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಕೇದಾರನಾಥದಿಂದ 2 ಕಿ.ಮೀ. ದೂರದಲ್ಲಿ ಈ ದುರಂತ ಸಂಭವಿಸಿದ್ದು, ಆರು ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಹೆಲಿಕಾಫ್ಟರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದೆ. ಇದನ್ನೂ ಓದಿ : Deepika Padukone :ವಿಶ್ವದ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ
ಇದನ್ನೂ ಓದಿ : Diwali Bonus For Central Govt Employees : ದೀಪಾವಳಿಯ ಗಿಫ್ಟ್ : ಸರಕಾರಿ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆ
helicopter crash 6 killed in near Kedarnath