Rahul Gandhi on tanning:ಪಾದಯಾತ್ರೆಯಿಂದ ಟ್ಯಾನ್​ ಆಗದಂತೆ ಏನು ಮಾಡ್ತೀರಿ ಎಂದು ಕೇಳಿದವರಿಗೆ ಹೀಗಿತ್ತು ರಾಹುಲ್​ ಗಾಂಧಿ ಉತ್ತರ

ಬಳ್ಳಾರಿ : Rahul Gandhi on tanning : ದೇಶದಲ್ಲಿ ಕಾಂಗ್ರೆಸ್​ ತನ್ನ ಅಸ್ತಿತ್ವವನ್ನು ಕಳೆದುಕೊಳ್ತಿದೆ ಎಂಬ ಕಹಿಸತ್ಯವನ್ನು ಅರಿತಿರುವ ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆಯ ಮೂಲಕ ಎಲ್ಲೆಡೆ ಪಾದಯಾತ್ರೆಯನ್ನು ಮಾಡಿ ಕಾಂಗ್ರೆಸ್​ ಪಕ್ಷದ ಬಗ್ಗೆ ಜನರಲ್ಲಿ ಮತ್ತೆ ವಿಶ್ವಾಸವನ್ನು ಮೂಡಿಸುವ ಪ್ರಯತ್ನವನ್ನು ಮಾಡ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯ ರಾಹುಲ್​ ಗಾಂಧಿ ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿದ್ದು ಭಾರತ್​ ಜೋಡೋ ಯಾತ್ರೆಯಲ್ಲಿ ಮುಂದಾಳತ್ವ ವಹಿಸಿದ್ದಾರೆ. ನಿನ್ನೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಭಾರತ್​ ಜೋಡೋ ಯಾತ್ರೆಗೆ ವಿರಾಮವನ್ನು ನೀಡಲಾಗಿತ್ತು. ಆದರೆ ಇಂದು ಈ ಭಾರತ್​ ಜೋಡೋ ಯಾತ್ರೆ ಮತ್ತೆ ಕಿಕ್​ಸ್ಟಾರ್ಟ್ ಪಡೆದುಕೊಂಡಿದೆ.

ಭಾರತ್​ ಜೋಡೋ ಯಾತ್ರೆ ಅಂದಮೇಲೆ ಬಿಸಿಲು ಗಾಳಿ ಎನ್ನದೇ ಪಾದಯಾತ್ರೆಯಲ್ಲಿ ಭಾಗಿಯಾಗಬೇಕು. ಇದೇ ರೀತಿ ಪಾದಯಾತ್ರೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಹುಲ್​ ಗಾಂಧಿಗೆ ಸ್ಥಳೀಯರು ನೀವು ಬಿಸಿಲಿನಿಂದ ಟ್ಯಾನ್​ ಆಗೋದನ್ನು ಹೇಗೆ ತಪ್ಪಿಸಿಕೊಳ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ರಾಹುಲ್​ ಗಾಂಧಿ ನಾನು ಯಾವುದೇ ರೀತಿಯ ಸನ್​ಸ್ಕ್ರೀನ್​ ಬಳಕೆ ಮಾಡುವುದಿಲ್ಲ. ನನ್ನ ತಾಯಿ ಪಾದಯಾತ್ರೆಗೆ ಹೊರಡುವ ಮುನ್ನ ನನಗೆ ಸನ್​ಸ್ಕ್ರೀನ್​ ನೀಡಿದ್ದರು. ಆದರೆ ಅವುಗಳನ್ನು ನಾನು ಬಳಸುತ್ತಿಲ್ಲ ಎಂದು ಹೇಳಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸ್ಥಳೀಯರೊಬ್ಬರು ನೀವು ಯಾವ ಸನ್​ಸ್ಕ್ರೀನ್​ ಬಳಸುತ್ತೀರಿ ಎಂದು ಕೇಳಿದರ ಜೊತೆಯಲ್ಲಿ ನಿಮ್ಮ ಮುಖ ಕೂಡ ಶೈನ್​ ಆಗಿದೆ ಎಂದು ಹೊಗಳುತ್ತಿರೋದನ್ನು ಕಾಣಬಹುದಾಗಿದೆ.


ರಾಹುಲ್​ ಗಾಂಧಿ ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್​ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿಯೇ ಇದ್ದ ರಾಹುಲ್​ ಗಾಂಧಿ ಬಳ್ಳಾರಿಯಲ್ಲಿ ಮತ ಚಲಾವಣೆ ಮಾಡಿದ್ದರು. ಬರೋಬ್ಬರಿ 24 ವರ್ಷಗಳ ಬಳಿಕ ಕಾಂಗ್ರೆಸ್​ ಪಕ್ಷಕ್ಕೆ ಗಾಂಧಿ ಕುಟುಂಬಕ್ಕೆ ಸೇರದ ಓರ್ವ ವ್ಯಕ್ತಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಇದನ್ನು ಓದಿ : child complaints about his mother : ನನ್ನ ತಾಯಿಯನ್ನ ಜೈಲಿಗೆ ಹಾಕಿ.. ಪೊಲೀಸರಿಗೆ 3 ವರ್ಷದ ಪುಟಾಣಿ ದೂರು.. ಕಂಪ್ಲೇಂಟ್ ಗೆ ಕಾರಣವೇನು ಗೊತ್ತಾ

ಇದನ್ನೂ ಓದಿ : Diwali Bonus For Central Govt Employees : ದೀಪಾವಳಿಯ ಗಿಫ್ಟ್ : ಸರಕಾರಿ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆ

My mother sent me sunscreen, but I don’t use it: Rahul Gandhi on tanning 

Comments are closed.