ಬಿಹಾರ : ಜೋಳ ಹುರಿಯುವ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿಬಿದ್ದು, 6 ಮಕ್ಕಳು ಸಜೀವವಾಗಿ ದಹನವಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.
ಹಸನ್ ಆಲಿ, ತಬ್ರೇಜ್, ಗುಲ್ನಾಜ್, ಹುಸ್ನಾರಾ, ಅಶ್ರಫ್, ದಿಲ್ಬಾರ್ ಎಂಬವರೇ ಮೃತ ದುರ್ದೈವಿಗಳು. ಮಕ್ಕಳು ಗುಡಿಸಲು ಮನೆಯಲ್ಲಿ ಜೋಳ ಹುರಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಸಂಪೂರ್ಣವಾಗಿ ಗುಡಿಸಲಿಗೆ ಆವರಿಸಿದ್ದು, ಕೂಡಲೇ ಸ್ಥಳೀಯರು ಬೆಂಕಿನಂದಿಸಲು ಮುಂದಾಗಿದ್ದಾರೆ. ಆದರೆ ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ 6 ಮಕ್ಕಳು ಸಜೀವವಾಗಿ ದಹನವಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಭೇಟಿನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.