Husband seeks Amit Shah’s help:ತನ್ನ ಪತ್ನಿಗೆ ಹಣದ ಆಮಿಷ ನೀಡಿದ ದುಷ್ಕರ್ಮಿಗಳು ಆಕೆಯನ್ನು ಸೆಕ್ಸ್ ರಾಕೆಟ್ ಜಾಲದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ ಪತಿಯೊಬ್ಬ ನ್ಯಾಯ ಬೇಕೆಂದು ಗೃಹ ಸಚಿವ ಅಮಿತ್ ಶಾ ಬಳಿಯಲ್ಲಿ ಮನವಿ ಮಾಡಿದ ಘಟನೆಯು ಗ್ವಾಲಿಯರ್ನ ಮಧ್ವಗಂಜ್ ಪ್ರದೇಶದಲ್ಲಿ ನಡೆದಿದೆ.
ಪತ್ನಿ ಸೆಕ್ಸ್ ರಾಕೆಟ್ನಲ್ಲಿ ತೊಡಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನೂ ಈ ವ್ಯಕ್ತಿ ಹೊಂದಿದ್ದಾನೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಕೇಸು ದಾಖಲಿಸಿರುವ ವ್ಯಕ್ತಿಯು ನಾನು ಈ ಸಂಬಂಧ ಡಿಜಿಪಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾವರೆಗೂ ಪತ್ರ ಬರೆದಿರುವ ವ್ಯಕ್ತಿಯು ಸೆಕ್ಸ್ ರಾಕೆಟ್ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಈ ಸಂಬಂಧ ಮಾಹಿತಿ ನೀಡಿರುವ ವ್ಯಕ್ತಿಯು ಅವರಿಗೂ ಸೆಕ್ಸ್ ರಾಕೆಟ್ನಲ್ಲಿ ತನ್ನ ಪತ್ನಿ ತೊಡಗಿರುವ ಬಗ್ಗೆ ಸಾಕ್ಷ್ಯಾಧಾರಗನ್ನು ನೀಡಿದ್ದಾನೆ.
ನನ್ನ ಪತ್ನಿ ಮನೆಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದಳು. ಆದರೆ ನಮ್ಮ ಬಡತನದ ಲಾಭ ಪಡೆದ ಕೆಲ ದುಷ್ಕರ್ಮಿಗಳು ಪತ್ನಿಯ ಬಳಿ ಸೆಕ್ಸ್ ದಂಧೆಯಲ್ಲಿ ಭಾಗಿಯಾದರೆ ಕೈ ತುಂಬಾ ಹಣ ಸಿಗುತ್ತದೆ ಎಂದು ಆಮಿಷವೊಡ್ಡಿದ್ದಾರೆ. ಹಣದಾಸೆಗಾಗಿ ನನ್ನ ಪತ್ನಿ ಇದಕ್ಕೆ ಒಪ್ಪಿದ್ದಾಳೆ. ಪತ್ನಿ ಸೆಕ್ಸ್ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬಳಿಕ ನನಗೂ ಈ ವಿಚಾರ ತಿಳಿದಿದೆ. ಇದಾದ ಬಳಿಕ ನಾನು ಪತ್ನಿ ಬಳಿ ಈ ವಿಚಾರವಾಗಿ ಪ್ರಶ್ನೆ ಮಾಡಿದೆ ಎಂದು ವ್ಯಕ್ತಿಯು ಹೇಳಿದ್ದಾನೆ.
ಈ ಸೆಕ್ಸ್ ರಾಕೆಟ್ ದಂಧೆಯಲ್ಲಿ ಹತ್ತಿರದ ಏರಿಯಾದ ಕೆಲ ಕಿಡಿಗೇಡಿಗಳು ಹಾಗೂ ಸೈಬರ್ ಠಾಣೆ ಪೊಲೀಸರೂ ಭಾಗಿಯಾಗಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಇದೇ ಕಾರಣಕ್ಕಾಗಿಯೇ ಸೆಕ್ಸ್ ರಾಕೆಟ್ ಬಗ್ಗೆ ಇಷ್ಟೆಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪತಿಯ ಆರೋಪವಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರು ಎಎಸ್ಪಿ ರಾಜೇಶ್ ದಂಡೋಟಿಯಾ ಸೈಬರ್ ಸೆಲ್ ವತಿಯಿಂದ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತದೆ. ಈ ವ್ಯಕ್ತಿಯ ಆರೋಪಗಳು ಸತ್ಯವಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ : Pushpa-The Rise : ದೇಶ ಮಾತ್ರವಲ್ಲ ವಿದೇಶದಲ್ಲೂ ಪುಷ್ಪ ಹವಾ: ಒಂದೇ ವಾರಕ್ಕೆ 229 ಕೋಟಿ ಗಳಿಸಿದ ಸಿನಿಮಾ
ಇದನ್ನೂ ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ
Husband accuses wife of acting in porn movies, seeks Amit Shah’s help