Pushpa-The Rise : ದೇಶ ಮಾತ್ರವಲ್ಲ ವಿದೇಶದಲ್ಲೂ ಪುಷ್ಪ ಹವಾ: ಒಂದೇ ವಾರಕ್ಕೆ 229 ಕೋಟಿ ಗಳಿಸಿದ ಸಿನಿಮಾ

ಸಾಕಷ್ಟು ಕುತೂಹಲ ಮೂಡಿಸಿದ್ದ ಟಾಲಿವುಡ್ ನ ಫ್ಯಾನ್ ಇಂಡಿಯಾ ಮೂವಿ ಪುಷ್ಪಾ (Pushpa-The Rise) ರಿಲೀಸ್ ಆಗಿದ್ದು ಭಾಕ್ಸಾಫೀಸ್ ನಲ್ಲಿ ಸದ್ದು ಮಾಡಿದೆ. ಐದು ಭಾಷೆಗಳಲ್ಲಿ ತೆರೆಕಂಡ ಸಿನಿಮಾ ದೇಶ ಮಾತ್ರವಲ್ಲ ವಿದೇಶದಲ್ಲೂ ಸಖತ್ ಫೇಮಸ್ ಆಗಿದ್ದು ಇದುವರೆಗೂ ಕೋಟ್ಯಾಂತರ ರೂಪಾಯಿ ಗಳಿಸಿ ಕೋಟಿ ಕ್ಲಬ್ ಸೇರಿದೆ. ಮೊದಲ ವಾರ ಮುಗಿಸಿ ಎರಡನೇ ವಾರಕ್ಕೆ ಕಾಲಿಡುತ್ತಿರುವ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

ಪುಷ್ಪ ಸಿನಿಮಾ ರಿಲೀಸ್ ಆದಾಗಿನಿಂದಲೂ ಬಾಕ್ಸಾಫೀಸ್ ನಲ್ಲಿ ಎಷ್ಟು ಗಳಿಸಬಹುದೆಂಬ ಚರ್ಚೆ ಜೋರಾಗಿತ್ತು. ಈಗ ಆ ಚರ್ಚೆಗೆ ಉತ್ತರ ಸಿಕ್ಕಿದ್ದು ಒಂದು ವಾರದಲ್ಲಿ ವಿಶ್ವದಾದ್ಯಂತ ಸಿನಿಮಾ ಬರೋಬ್ಬರಿ 229 ಕೋಟಿ ಗಳಿಕೆ ಕಂಡಿದೆ ಎಂದು ಪುಷ್ಪ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಪುಷ್ಪ ಸಿನಿಮಾದ ಅಧಿಕೃತ ಟ್ವಿಟರ್ ಖಾತೆಯಿಂದ 229 ಕೋಟಿ ಗಳಿಕೆಯ ಸುದ್ದಿ ಹೊರಬಿದ್ದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಅಮೇರಿಕಾದಲ್ಲೂ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ.

ಚಿತ್ರದ ನಿರ್ಮಾಪಕರು ಸಿನಿಮಾ ಅಮೆರಿಕಾದಲ್ಲಿ ಯಶಸ್ಸು ಪಡೆದ ಸಂಗತಿಯನ್ನು ಹಂಚಿಕೊಂಡಿದ್ದು ಸಿನಿಮಾ 2 ಮಿಲಿಯನ್ ಡಾಲರ್ ಕ್ಲಬ್ ಸೇರಿದೆ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ವಿಶೇಷ ಟ್ವೀಟ್ ಮಾಡಿರೋ ಚಿತ್ರತಂಡ, 2021 ರಲ್ಲಿ ಅಮೆರಿಕಾದಲ್ಲಿ 2 ಮಿಲಿಯನ್ ಡಾಲರ್ ಗಳಿಸಿದ ಮೊದಲ ಸೌತ್ ಇಂಡಿಯನ್ ಚಿತ್ರ ಎಂಬ ಖ್ಯಾತಿಗೂ ಪುಷ್ಪ ಪಾತ್ರವಾಗಿದೆ ಎಂದಿದ್ದಾರೆ.

ಈ ಹಿಂದೆಯೂ ಅಲ್ಲು ಅರ್ಜುನ್ ನಟನೆಯ ಅಲಾ ವೆಂಕಟಾಪುರಮುಲೋ ಸಿನಿಮಾ ಅಮೇರಿಕಾದಲ್ಲಿ ತೆರೆಕಂಡಿದ್ದಲ್ಲದೇ 2 ಮಿಲಿಯನ್ ಗಳಿಸಿತ್ತು. ಇನ್ನು ಶುಕ್ರವಾರದ ವರದಿ ಪ್ರಕಾರ ಅಮೇರಿಕಾದಲ್ಲಿ ಪುಷ್ಪ ಸಿನಿಮಾ 15 ಕೋಟಿ ರೂಪಾಯಿಗಳಿಸಿದೆ. ದೇಶದಲ್ಲೂ ಪುಷ್ಪ ಸಿನಿಮಾ ಯಶಸ್ವಿ ಮೊದಲ ವಾರ ಮುಗಿಸಿ ಎರಡನೇ ವಾರಕ್ಕೆ ಕಾಲಿರಿಸಿದೆ. ರಿಲೀಸ್ ಗೂ ಮುನ್ನ ಸಾಕಷ್ಟು ಕುತೂಹಲ ಮೂಡಿಸಿದ್ದ ಸಿನಿಮಾ ರಿಲೀಸ್ ಬಳಿಕವೂ ಊ ಅಂಟಾವಾ ಮಾವಾ ಉಹೂ ಅಂಟಾವಾ ಮಾವಾ ಹಾಡಿನ ಕಾರಣಕ್ಕೆ ಸಖತ್ ಫೇಮಸ್ ಆಗಿತ್ತು.

ಮಾತ್ರವಲ್ಲ ಅಲ್ಲೂ ಅರ್ಜುನ್ ರಗಡ್ ಲುಕ್, ರಶ್ಮಿಕಾ ಡಿ ಗ್ಯಾಮ್ಲರ್ ಅವತಾರ, ಹಾಡುಗಳು ಹಾಗೂ ಡಾಲಿ ಧನಂಜಯ ವಿಲನ್ ರೋಲ್‌ನಿಂದಲೂ ಸಿನಿಮಾ ಅಭಿಮಾನಿಗಳ ಮನಗೆದ್ದಿದೆ‌. ಇದಲ್ಲದೇ ಸಿನಿಮಾದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಐಟಂ ಸಾಂಗ್ ನನಗೆ ದೇವರ ಹಾಡಿದ್ದಂತೆ ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದರೇ, ಐಟಂ ಸಾಂಗ್ ಗೆ ಮೈಬಳುಕಿಸಿದ ಸಮಂತಾ ವಿರುದ್ಧ ಪುರುಷರನ್ನು ಕೆರಳಿದ ಆರೋಪದ ಮೇರೆಗೆ ಎಫ್ ಆಯ್ ಆರ್ ಕೂಡ ದಾಖಲಾಗಿದೆ.

ಇದನ್ನೂ ಓದಿ : ಪುಷ್ಪ’ ಚಿತ್ರದ ಫಸ್ಟ್ ಲುಕ್ ರಿಲೀಸ್ ; ಅಲ್ಲು ಅರ್ಜುನ್ ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದ ‘ಪುಷ್ಪಾ’ : ಕೆಜಿಎಫ್​ ಕಲೆಕ್ಷನ್​ ಮುರಿದ ಅಲ್ಲು ಅರ್ಜುನ್​

(Pushpa-The Rise: Allu Arjun s film successfully enters into its second week; earns Rs 229 crore collection box office)

Comments are closed.