ಹೈದ್ರಾಬಾದ್ : ಮೃಗಾಲಯದಲ್ಲಿ ಆಫ್ರಿಕನ್ ಸಿಂಹದ ಬಾಯಿಗೆ ಸಿಲುಕುತ್ತಿದ್ದ ಯುವಕನೋರ್ವನನ್ನು ರಕ್ಷಣೆ ಮಾಡಿರುವ ಘಟನೆ ಹೈದ್ರಾಬಾದ್‌ನ ನೆಹರೂ ಝೂಲಾಜಿಕಲ್ ಪಾರ್ಕ್‌ನಲ್ಲಿ ನಡೆದಿದೆ. ಸಿಂಹದ ಕಂದಕ ಪ್ರದೇಶದಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಜಿ. ಸಾಯಿಕುಮಾರ್ ಎಂಬಾತನೇ ಇದೀಗ ಬಂಧನಕ್ಕೆ ಒಳಗಾದವನು. ಮೃಗಾಲಯದಲ್ಲಿನ ಬಂಡೆಯ ಮೇಲೆ ಕುಳಿತು ಕಂದಕದಲ್ಲಿ ಇದ್ದ ಸಿಂಹವನ್ನು ವೀಕ್ಷಿಸುತ್ತಿದ್ದ. ಯುವಕ ಒಂದೊಮ್ಮೆ ಕೊಂಚ ಯಾಮಾರಿದ್ರೂ ಕೂಡ ಸಿಂಹದ ಕಂದಕಕ್ಕೆ ಉರುಳಿ ಬೀಳುತ್ತಿದ್ದ. ಯುವಕನ ಕಡೆಗೆ ಸಿಂಹ ದಿಟ್ಟಿಸಿ ನೋಡುತ್ತಿದ್ದ, ಜನರು ಆತನ ರಕ್ಷಣೆಗಾಗಿ ಕೂಗುತ್ತಿದ್ದರು. ಆದರೂ ಯುವಕ ತನ್ನ ಆಟವನ್ನು ಮುಂದುವರಿಸಿದ್ದಾನೆ.
ಜಿ. ಸಾಯಿಕುಮಾರ್ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸ್ಥಳದಲ್ಲಿ ಪ್ರವೇಶ ಮಾಡಿದ್ದು, ಸಿಂಹದ ಆವರಣದ ಒಳಗೆ ಪ್ರವೇಶ ಮಾಡಿದ್ದಾನೆ. ಈ ಝೂಲಾಜಿಕಲ್ ಪಾರ್ಕ್‌ನಲ್ಲಿ ಸಿಂಹಗಳನ್ನು ನಿಷೇಧಿತ ಪ್ರದೇಶ ಒಳಗೆ ಬಿಡಲಾಗುತ್ತಿತ್ತು. ಆದರೆ ಸಿಬ್ಬಂದಿಗಳ ಕಾರ್ಯಾಚರಣೆಯಿಂದಾಗಿ ಯುವಕನನ್ನು ರಕ್ಷಣೆ ಮಾಡಲಾಗಿದೆ ಎಂದು ನೆಹರು ಝೂಲಾಜಿಕಲ್ ಪಾರ್ಕ್ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದೀಗ ಯುವಕನ ವಿರುದ್ದ ಬಹದ್ದೂರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Guinness Records : ಸೋಡಾ ಕುಡಿದು ಗಿನ್ನೆಸ್ ರೆಕಾರ್ಡ್ ಬರೆದ ಭೂಪ ..!!
ಇದನ್ನೂ ಓದಿ : Viral Video : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್ ಶಾಕ್ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !
(Viral Video : Man rescued from lion Enclosure At Hyderabad zoo)