Tomato Price Hike : ಜನಸಾಮಾನ್ಯರಿಗೆ ಬಿಗ್‌ ಶಾಕ್‌ ಕೊಟ್ಟ ಟೊಮ್ಯಾಟೋ : ಕೆ.ಜಿಗೆ 200 ರೂ. ಸಾರ್ವಕಾಲಿಕ ದಾಖಲೆ

ಬೆಂಗಳೂರು : ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆ ನೆಲಕಚ್ಚಿದೆ. ಇದರಿಂದಾಗಿ ತರಕಾರಿಯ ಬೆಲೆಗಳು ಗಗನಕ್ಕೇರಿದೆ. ಅದ್ರಲ್ಲೂ ಟೊಮ್ಯಾಟೋ (Tomato Price Hike) ಜನಸಾಮಾನ್ಯರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 200 ರೂಪಾಯಿಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮತ್ತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಕಳೆದ ಕೆಲವು ದಿನಗಳಿಂದಲೂ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮ್ಯಾಟೋ ಬೆಲೆ ನೆಲಕಚ್ಚಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಮ್ಯೋಟೋ ಬೆಲೆ ದಿನೇ ದಿನೇ ಏರಿಕೆಯನ್ನು ಕಾಣುತ್ತಲೇ ಇದೆ. ನೆರೆಯ ಕೇರಳದಲ್ಲಿ ಟೊಮ್ಯಾಟೋ ಕೆ.ಜಿ.ಗೆ 120 ರೂಪಾಯಿ ಇದ್ರೆ, ಚೆನ್ನೈನಲ್ಲಿ 160 ರೂಪಾಯಿಗೆ ಮಾರಾಟವಾಗುತ್ತಿದೆ.

ಕರ್ನಾಟಕದ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ. ಟೊಮ್ಯಾಟೋ ಬಾಕ್ಸ್‌ 3000 ರೂಪಾಯಿಗೆ ಹರಾಜಾಗಿದೆ. ಈ ಮೂಲಕ ಟೊಮ್ಯಾಟೋ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಕಳೆದ ವಾರ 15 ಕೆ.ಜಿ. ಬಾಕ್ಸ್‌ 2000 ರೂಪಾಯಿಗೆ ಮಾರಾಟವಾಗಿತ್ತು. ಇದೀಗ ವಾರ ಕಳೆಯುವಷ್ಟರಲ್ಲಿಯೇ ಟೊಮ್ಯಾಟೋ ಬೆಲೆ ದಾಖಲೆ ಬರೆಯುತ್ತಿದೆ.

ಹಿಂದಿನ ವರ್ಷಗಳಲ್ಲಿ ಟೊಮ್ಯಾಟೋ ಕನಿಷ್ಠ ಬೆಲೆಗೆ ಮಾರಾಟವಾಗುತ್ತಿದ್ದು, ಬಹುತೇಕ ಕಡೆಗಳಲ್ಲಿನ ರೈತರು ಬೆಳೆದ ಬೆಳೆಯನ್ನು ರಸ್ತೆಗೆ ಎಸೆಯುತ್ತಿದ್ದ ಚಿತ್ರಣ ಕಂಡು ಬರುತ್ತಿತ್ತು. ಆದರೆ ಈ ಬಾರಿ ಟೊಮ್ಯಾಟೊಗೆ ಬಂಪರ್‌ ಬೆಲೆ ಬಂದಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳಿಗೆ `ACB’ ಬಿಗ್ ಶಾಕ್ : ಏಕಕಾಲಕ್ಕೆ ರಾಜ್ಯದ 60 ರೇಡ್‌

ಇದನ್ನೂ ಓದಿ : ಹೊಸ ಲಾಕ್‌ಡೌನ್‌ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರಕಾರ

(Tomato Price Hike : Big Shock tomatoes to the masses: Rs. All-time record)

Comments are closed.