ತೆಲಂಗಾಣ : Hyderabad’s name will be change : ಬಿಜೆಪಿ ಆಡಳಿತವಿರುವ ದೇಶದ ಬಹುತೇಕ ರಾಜ್ಯಗಳಲ್ಲಿ ಊರಿನ ಹೆಸರುಗಳನ್ನು ಹಾಗೂ ಹಣ್ಣಿನ ಹೆಸರುಗಳನ್ನು ಬದಲಾಯಿಸುತ್ತಿರುವ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಡ್ರ್ಯಾಗನ್ ಫ್ರೂಟ್ನ ಹೆಸರು ಬದಲಾಯಿಸಿದ್ದು, ಉತ್ತರ ಪ್ರದೇಶದಲ್ಲಿ ಸಾಕಷ್ಟು ನಗರಗಳಿಗೆ ಮರುನಾಮಕರಣ ಮಾಡಿದ್ದು ಹೀಗೆ ಸಾಕಷ್ಟು ಕೆಲಸಗಳನ್ನು ಬಿಜೆಪಿ ಮಾಡುತ್ತಲೇ ಇರುತ್ತದೆ. ಇದೀಗ ಬಿಜೆಪಿಯ ಕಣ್ಣು ಹೈದರಬಾದ್ ಮೇಲೆ ಬಿದ್ದಿದ್ದು ಇದರ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸಲು ಪ್ಲಾನ್ ಮಾಡಿದಂತೆ ತೋರುತ್ತಿದೆ.
ಹೈದರಾಬಾದ್ನ ಚಾರ್ಮಿನಾರ್ ಭಾಗ್ಯಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಜಾರ್ಖಂಡ್ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ರಘುಬರ್ ದಾಸ್ ಹೈದರಾಬಾದ್ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸುತ್ತೇವೆ ಎಂಬ ಸುಳಿವನ್ನು ನೀಡಿದ್ದಾರೆ. ಒಂದು ವೇಳೆ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಯಶಸ್ವಿಯಾದರೆ ಹೈದರಾಬಾದ್ ಮರು ನಾಮಕರಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣದಲ್ಲಿರುವ ಟಿಆರ್ಎಸ್ ಸರ್ಕಾರದ ಬಗ್ಗೆ ಶ್ರೀ ಸಾಮಾನ್ಯರಿಗಾಗಲಿ ಅಥವಾ ದೊಡ್ಡ ಉದ್ಯಮಿಗಳಿಗಾಗಲಿ ಯಾರಿಗೂ ಸಮಾಧಾನವಿರುವಂತೆ ತೋರುತ್ತಿಲ್ಲ. ಈ ಸರ್ಕಾರಕ್ಕೆ ಸಾರ್ವಜನಿಕರ ಹಿತಕ್ಕಿಂತ ಕುಟುಂಬ ರಾಜಕಾರಣವೇ ದೊಡ್ಡದಾಗಿ ತೋರುತ್ತಿದೆ. ಈ ಸರ್ಕಾರವು ಜನರ ಕಾಳಜಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಇಲ್ಲಿನ ಜನರು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಪ್ರಧಾನಿ ಮೋದಿ ಇಲ್ಲಿ ಎಂಟ್ರಿ ನೀಡುತ್ತಾರ ಎಂದು ಹೇಳಿದರು.
ಉದಯಪುರದಲ್ಲಿ ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು , ಕನ್ಹಯ್ಯಲಾಲ್ ಒಬ್ಬ ಬಡ ಕುಟುಂಬದ ವ್ಯಕ್ತಿಯಾಗಿದ್ದು ಈತನನ್ನು ಐಸಿಸ್ ಹಾಗೂ ಪಾಕಿಸ್ತಾನದ ಜೊತೆಯಲ್ಲಿ ಲಿಂಕ್ ಹೊಂದಿದ್ದ ಕೊಲೆಗಾರರು ಕೊಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಸಮಗ್ರ ತನಿಖೆಗೆ ಸೂಚನೆ ನೀಡಿದ್ದಾರೆ. ಸಹೋದರತ್ವವನ್ನು ಬಿಜೆಪಿ ಎಂದಿಗೂ ಪಾಲಿಸುತ್ತದೆ ಎಂದು ಹೇಳಿದರು.
ಜಾರ್ಖಂಡ್ನ ಜನತೆ ಹಾಗೂ ಇಲ್ಲಿನ ಮುಸ್ಲಿಂ ಸಮುದಾಯವೇ ಒವೈಸಿಯನ್ನು ತಿರಸ್ಕರಿಸಿದ್ದಾರೆ. ಜಾರ್ಖಂಡ್ನಲ್ಲಿ ಒಂದು ಸೀಟು ಗೆಲ್ಲಲ್ಲು ಸಹ ಒವೈಸಿಗೆ ಸಾಧ್ಯವಾಗಲಿಲ್ಲ. ಜನರನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳಿಗೆ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಭಾರತದ ರಾಜಕೀಯದಲ್ಲಿ ಸ್ಥಾನವಿಲ್ಲ ಎಂದು ಅವರು ಹೇಳಿದರು.
ಇದನ್ನು ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !
ಇದನ್ನೂ ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ
Hyderabad’s name will be changed to Bhagyanagar if BJP comes to power: Raghubar Das