ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ , ಅವರ ಸಿಬ್ಬಂದಿ ಹಾಗೂ ಕೆಲ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್(IAF’s Mi-17V-5 helicopter crash) ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತಕ್ಕೊಳಗಾದ Mi-17V-5ನ್ನು ಮಧ್ಯಮ ಲಿಫ್ಟರ್ ಚಾಪರ್ ಎಂದು ಗುರುತಿಸಲಾಗಿದೆ. ಇದು ವಿಶ್ವದ ಅತ್ಯಂತ ಸುಧಾರಿತ ಹಾಗೂ ಬಹುಮುಖ್ಯ ಹೆಲಿಕಾಪ್ಟರ್ಗಳಲ್ಲಿ ಒಂದಾಗಿದೆ. ಆದರೂ ಸಹ ಈ ಹಿಂದೆ ಕೂಡ ಎಂಐ ಸರಣಿಯ ಕೆಲ ಹೆಲಿಕಾಪ್ಟರ್ಗಳು ದುರಂತಕ್ಕೆ ಈಡಾಗಿದ್ದವು. ವಿಶ್ವದ ಇತರೆ ಕಾರ್ಗೊ ಹೆಲಿಕಾಪ್ಟರ್ಗಳಿಗೆ ಹೋಲಿಕೆ ಮಾಡಿದರೆ ಈ ಹೆಲಿಕಾಪ್ಟರ್ನ ಸುರಕ್ಷತಾ ದಾಖಲೆಯು ಉತ್ತಮವಾಗಿದೆ. Mi-17V-5 ಹೆಲಿಕಾಪ್ಟರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು ಇಲ್ಲಿವೆ ನೋಡಿ.
Mi-17V-5 ಇತಿಹಾಸ :
Mi-17V-5 ಹೆಲಿಕಾಪ್ಟರ್ Mi-8/17 ಸರಣಿಗೆ ಸೇರಿದ ಮಿಲಿಟರಿ ಸಾರಿಗೆ ರೂಪಾಂತರವಾಗಿದೆ. ಇದು ವರ್ಸಟೈಲ್, ವಿಶ್ವಾಸಾರ್ಹ ಹಾಗೂ ಮೌಲ್ಯಯುತ ಎಂಬ ಕಾರಣಕ್ಕೆ ಜಾಗತಿಕವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈ ಹೆಲಿಕಾಪ್ಟರ್ಗಳನ್ನು ರಷ್ಯಾದ ಕಜಾನ್ನಲ್ಲಿರುವ ರಷ್ಯಾದ ಹೆಲಿಕಾಪ್ಟರ್ ಅಂಗಸಂಸ್ಥೆಯಾದ ಕಜನ್ ಹೆಲಿಕಾಪ್ಟರ್ಗಳು ಉತ್ಪಾದಿಸುತ್ತವೆ. ಈ ಹೆಲಿಕಾಪ್ಟರ್ಗಳನ್ನು ಸೈನ್ಯ, ಶಸ್ತ್ರಾಸ್ತ್ರ ಸಾರಿಗೆ, ಅಗ್ನಿಶಾಮಕ ವಿಭಾಗ, ಬೆಂಗಾವಲು ಪಡೆ, ಪಾರುಗಾಣಿಕಾ ಪಡೆ , ಗಸ್ತು ಕಾರ್ಯಾಚರಣೆ ಸೇರಿದಂತೆ ವಿವಿಧ ರೀತಿಯ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಕೆ ಮಾಡಬಹುದಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯವು 2008ರ ಡಿಸೆಂಬರ್ ತಿಂಗಳಲ್ಲಿ ರಷ್ಯಾದ ಬಳಿ 80 ಹೆಲಿಕಾಪ್ಟರ್ ಬೇಕೆಂದು ಹೇಳಿತ್ತು. 2011ರಲ್ಲಿ ಹೆಲಿಕಾಪ್ಟರ್ ಪೂರೈಕೆ ಆರಂಭಿಸಿದ ರಷ್ಯಾ 2018ರಲ್ಲಿ ಕೊನೆಯ ಹೆಲಿಕಾಪ್ಟರ್ನ್ನು ಹಸ್ತಾಂತರಿಸಿದೆ.
Mi-17V-5 ಇಂಜಿನ್ ಸಾಮರ್ಥ್ಯ :
Mi-17V-5 ಹೆಲಿಕಾಪ್ಟರ್ಗಳನ್ನು Klimov TV3-117VM ಅಥವಾ VK-2500 ಟರ್ಬೊ-ಶಾಫ್ಟ್ ಎಂಜಿನ್‌ನ ಸಹಾಯದಿಂದ ನಿಯಂತ್ರಿಸಲಾಗುತ್ತದೆ. TV3-117VM ಗರಿಷ್ಟ 2100 ಹೆಚ್ಪಿ ಶಕ್ತಿಯನ್ನು ಅಭಿವೃದ್ಧಿ ಪಡಿಸಿದರೆ VK-2500 2700 ಹೆಚ್ಪಿ ವಿದ್ಯುತ್ ಉತ್ಪಾದನೆಯನ್ನು ಒದಗಿಸುತ್ತದೆ. ಹೊಸ ಜನರೇಷನ್ ಹೆಲಿಕಾಪ್ಟರ್ಗಳು VK-2500 ಇಂಜಿನ್ಗಳನ್ನು ಹೊಂದಿವೆ. ಇದು 250 kmph ವೇಗವನ್ನು ಹೊಂದಿದೆ. 580ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಎರಡು ಸಹಾಯಕ ಇಂಧನ ಟ್ಯಾಂಕ್ಗಳನ್ನು ಅಳವಡಿಸಿದ ಸಂದರ್ಭದಲ್ಲಿ ಇದನ್ನು 1065 ಕಿಲೋಮೀಟರ್ಗೆ ವಿಸ್ತರಿಸಬಹುದು.ಹೆಲಿಕಾಪ್ಟರ್ಗಳು ಗರಿಷ್ಟ 6000 ಮೀಟರ್ ಎತ್ತರದಲ್ಲಿ ಹಾರಬಲ್ಲ ಸಾಮರ್ಥ್ಯವನ್ನು ಹೊಂದಿವೆ.
ಸೌಲಭ್ಯಗಳು :
ಎಂಐ 17 ಸಾರಿಗೆ ಹೆಲಿಕಾಪ್ಟರ್ ಪ್ರಯಾಣಿಕರಿಗೆ ಸ್ಟಾಂಡರ್ಡ್ ಪೋರ್ಟ್ಸೈಡ್ ಬಾಗಿಲಿನ ಜೊತೆಯಲ್ಲಿ ದೊಡ್ಡ ಕ್ಯಾಬಿನ್ನ್ನು ನೀಡುತ್ತದೆ. ಸರಕು ಸಾಗಣೆ ಮಾಡುವ ಸಲುವಾಗಿ ಹಿಂಭಾಗದಲ್ಲಿ ರ್ಯಾಂಪ್ ಇಡಲಾಗಿದೆ. ಈ ಹೆಲಿಕಾಪ್ಟರ್ಗಳು ಗರಿಷ್ಠ 13 ಸಾವಿರ ಕೆಜಿಯನ್ನು ಟೇಕಾಫ್ ಮಾಡಬಲ್ಲವು. 36 ಶಸ್ತ್ರಸಜ್ಜಿತ ಸೈನಿಕರು ಅಥವಾ 4500 ಕೆಜಿ ಭಾರವನ್ನು ಸ್ಲಿಂಗ್ ಮೇಲೆ ಸಾಗಿಸಬಹುದು. ಉಷ್ಣ ವಲಯ, ಕರಾವಳಿ ಭಾಗ ಹಾಗೂ ಮರಭೂಮಿ ಹವಾಮಾನಗಳನ್ನು ಆಧರಿಸಿ ಈ ಹೆಲಿಕಾಪ್ಟರ್ಗಳನ್ನು ಬಳಕೆ ಮಾಡಬೇಕು.
ಇದನ್ನು ಓದಿ : Bipin Rawat : Army Helicopter Crash: ತುರ್ತು ಸಚಿವ ಸಂಪುಟ ಸಭೆ ಕರೆದ ಮೋದಿ, ದುರಂತ ಸ್ಥಳಕ್ಕೆ ಹೊರಟ ರಾಜನಾಥ್ ಸಿಂಗ್
ಇದನ್ನೂ ಓದಿ : Army chopper crashes : ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಪತನ : ಬಿಪಿಎನ್ ರಾವತ್ ಪ್ರಯಾಣಿಸುತ್ತಿದ್ದ ವಿಮಾನ !
IAF’s Mi-17V-5 helicopter crash: All you need to know about Russia-made chopper – Safety, weapons & more