Hardik Pandya To Retire : ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಿವೃತ್ತಿ : ಶೀಘ್ರದಲ್ಲೇ ಅಧಿಕೃತ ಘೋಷಣೆ

ಟೀಂ ಇಂಡಿಯಾ ಖ್ಯಾತ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನಿಂದ ನಿವೃತ್ತರಾಗಲಿದ್ದಾರೆ. ಕಳೆದ ಹಲವು ಸಮಯಗಳಿಂದಲೂ ಬೆನ್ನು ನೋವಿಗೆ ತುತ್ಳತಾಗಿರುವ ಪಾಂಡ್ಯ ಆಲ್‌ರೌಂಡರ್‌ ಆಗಿದ್ದರೂ ಕೂಡ ಬೌಲಿಂಗ್‌ ಮಾಡುತ್ತಿಲ್ಲ. ಚುಟುಕು ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವ ಸಲುವಾಗಿ ಹಾರ್ದಿಕ್‌ ಪಾಂಡ್ಯ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ (Hardik Pandya To Retire cricket ) ಹೇಳಲಿದ್ದಾರೆ.

ಹಾರ್ದಿಕ್ ಪಾಂಡ್ಯ ಕೊನೆಯ ಬಾರಿಗೆ ಈ ಬಾರಿ ನಡೆದ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು. ಸುದೀರ್ಘ ಅವಧಿಯ ನಂತರ ಬೌಲಿಂಗ್ ಮಾಡಿದರು ಆದರೆ ಅವರ ಫಿಟ್‌ನೆಸ್ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ. ಪಾಂಡ್ಯ ಕೇವಲ ಎರಡು T20 ವಿಶ್ವಕಪ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ ಮತ್ತು ಅವರ ಫಿಟ್ನೆಸ್ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ನೀಡದ ಕಾರಣ ಅಬ್ಬರದ ಆಟಗಾರರನ್ನು ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಭಾರತದ T20 ತಂಡದಿಂದ ಕೈಬಿಡಲಾಯಿತು.

ಕಳೆದ ಕೆಲವು ತಿಂಗಳಿನಿಂದಲೂ ಗಾಯದಿಂದ ಬಳಲುತ್ತಿರುವ ಹಾರ್ದಿಕ್‌ ಪಾಂಡ್ಯ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಯೋಚಿಸುತ್ತಿದ್ದಾರೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತನ್ನ ಗಮನವನ್ನು ಇರಿಸಿಕೊಳ್ಳಲು ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಬೌಲಿಂಗ್‌ ಮಾಡದ ಹಿನ್ನೆಲೆಯಲ್ಲಿ ಹಾರ್ದಿಕ್‌ ಪಾಂಡ್ಯವನ್ನು ಟೆಸ್ಟ್‌ ತಂಡದಿಂದ ದೂರವಿಡಲಾಗಿದೆ. ಹಾರ್ದಿಕ್‌ ಪಾಂಡ್ಯ ಅವರು ತಂಡದಲ್ಲಿ ಇಲ್ಲದಿರುವುದು ನಮಗೆ ದೊಡ್ಡ ನಷ್ಟವಾಗಲಿದೆ. ನಾನು ಅವರಿಗೆ ಬ್ಯಾಕ್‌ಅಪ್‌ ಸಿದ್ದಪಡಿಸಬೇಕಾಗಿದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೋರ್ವರು ತಿಳಿಸಿರುವ ಕುರಿತು ಇನ್‌ಸೈಡ್‌ ಸ್ಪೋರ್ಟ್‌ ವರದಿ ಮಾಡಿದೆ.

ಹಾರ್ದಿಕ್ 2018 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು ಮತ್ತು ಅಂದಿನಿಂದ ಅವರು ಭಾರತದ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಹಾರ್ದಿಕ್‌ಗೆ ಎನ್‌ಸಿಎಗೆ ವರದಿ ಸಲ್ಲಿಸುವಂತೆ ಮತ್ತು ಅವರ ಫಿಟ್‌ನೆಸ್ ಕಾರ್ಯಕ್ರಮವನ್ನು ಪೂರ್ಣಗೊಳಿಸುವಂತೆ ಕೇಳಿಕೊಂಡಿತ್ತು. ಬೆನ್ನಿನ ಗಾಯದ ಹೊರತಾಗಿಯೂ ಆಟವನ್ನು ಮುಂದುವರೆಸಿದರು. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹಾರ್ದಿಕ್ ಕೂಡ ಆಯ್ಕೆಯಾಗುವುದು ಅನುಮಾನ. ಡಿಸೆಂಬರ್ 26 ರಿಂದ ಬಾಕ್ಸಿಂಗ್ ಡೇ ಟೆಸ್ಟ್‌ನೊಂದಿಗೆ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೂರು ಟೆಸ್ಟ್ ಮತ್ತು ಮೂರು ODI ಪಂದ್ಯಗಳನ್ನು ಆಡಲಿದೆ.

IPL ಹರಾಜು 2022 ರ ಮೊದಲು ಮುಂಬೈ ಇಂಡಿಯನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಳ್ಳದಿರುವುದು ದೊಡ್ಡ ಆಘಾತಕಾರಿಯಾಗಿದೆ. ಆದಾಗ್ಯೂ, ಅವರು ತಂಡಕ್ಕೆ ಹೆಚ್ಚಿನ ಪ್ರಭಾವ ಬೀರುವ ಆಟಗಾರನನ್ನು ಪರಿಗಣಿಸಿ, ಮೆಗಾ ಹರಾಜಿನ ಮೂಲಕ ಅವರನ್ನು MI ಮತ್ತೆ ಖರೀದಿಸುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡುವುದು ಖಚಿತ ವಾದಲ್ಲಿ ಇನ್ನಷ್ಟು ತಂಡಗಳು ಅವರನ್ನು ಖರೀದಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : RCB in IPL 2022 : ವೆಸ್ಟ್ ಇಂಡೀಸ್ ನ ಈ ಆಟಗಾರನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ

ಇದನ್ನೂ ಓದಿ : David Warner Playing RCB : IPL 2022 ಆರ್‌ಸಿಬಿ ತಂಡದಲ್ಲಿ ಆಡುವುದನ್ನು ಖಚಿತ ಪಡಿಸಿದ ಡೇವಿಡ್‌ ವಾರ್ನರ್‌

( Hardik Pandya to retire from cricket, official announcement soon )

Comments are closed.