ಅಯೋಧ್ಯೆ ರಾಮ ಮಂದಿರ ಉದ್ಘಾಟನೆ : ಬಾಬರಿ ಮಸೀದಿ ಶಂಕುಸ್ಥಾಪನೆ ಮಾಡುವಂತೆ ನಮೋಗೆ ಮುಸ್ಲೀಮರ ಮನವಿ

ಅಯೋಧ್ಯೆಯಲ್ಲಿ ಶ್ರೀರಾಮ ಸುಂದರ ಮಂದಿರ ನಿರ್ಮಾಣಗೊಳ್ಳುತ್ತಿದೆ. ಮುಂದಿನ ಜನವರಿ ತಿಂಗಳಲ್ಲಿ ರಾಮಮಂದಿರ ಲೋಕಾರ್ಪಣೆ ಆಗಲಿದೆ. ಇನ್ನೊಂದೆಡೆಯಲ್ಲಿ ಬಾಬರಿ ಮಸೀದಿ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲೀಮರು ಮನವಿ ಮಾಡಿದ್ದಾರೆ.

ನವದೆಹಲಿ : ಅಯೋದ್ಯೆ ರಾಮಮಂದಿರ (Ayodhya Ram Mandir) ವಿವಾದ ಕೊನೆಗೂ ಬಗೆ ಹರಿದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಸುಂದರ ಮಂದಿರ ನಿರ್ಮಾಣಗೊಳ್ಳುತ್ತಿದೆ. ಮುಂದಿನ ಜನವರಿ ತಿಂಗಳಲ್ಲಿ ರಾಮಮಂದಿರ ಲೋಕಾರ್ಪಣೆ ಆಗಲಿದೆ. ಇನ್ನೊಂದೆಡೆಯಲ್ಲಿ ಬಾಬರಿ ಮಸೀದಿ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲೀಮರು ಮನವಿ ಮಾಡಿದ್ದಾರೆ.

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ 2019 ರಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 2.77 ಎಕರೆ ವಿವಾದಿತ ಸ್ಥಳದಲ್ಲಿ ರಾಮಮಂದಿರ ವನ್ನು ನಿರ್ಮಾಣ ಹಾಗೂ ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಪ್ರತ್ಯೇಕ ಐದು ಎಕರೆ ಜಾಗವನ್ನು ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ತಿಳಿಸಿತ್ತು.

Inauguration of Ayodhya Ram Mandir Muslims request Namo to lay foundation stone of Babri Masjid
Image Credit : india.com

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇದೀಗ ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಜನವರಿ ಆರಂಭದ ಒಳಗಾಗಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ : ಮಕರರ ಜ್ಯೋತಿ, ಮಂಡಲ ಪೂಜೆಗೆ ಹೊಸರೂಲ್ಸ್‌ : ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಕೇರಳ ಹೈಕೋರ್ಟ್‌ ಆದೇಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  ಈ ದಿನ ರಾಮನ ಮೂರ್ತಿಯನ್ನು ದೇವಾಲಯದೊಳಗೆ ಇರಿಸಲಾಗುತ್ತದೆ. ಅಯೋಧ್ಯೆಗೆ ಭೇಟಿ ನೀಡುವ ಮುನ್ನ ಮುಸ್ಲಿಮರು ಹೊಸ ಬಾಬರಿ ಮಸೀದಿಗೆ (Babri Masjid )  ಶಂಕುಸ್ಥಾಪನೆ ಮಾಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.

Inauguration of Ayodhya Ram Mandir Muslims request Namo to lay foundation stone of Babri Masjid
image Credit to india today

ಅಯೋಧ್ಯೆ ಭೂ ವಿವಾದದಲ್ಲಿ 2019 ರ ಐತಿಹಾಸಿಕ ತೀರ್ಪಿನಲ್ಲಿ, 2.77 ಎಕರೆ ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲಾಗುವುದು ಮತ್ತು ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಧನ್ನಿಪುರದಲ್ಲಿ ಪರ್ಯಾಯವಾಗಿ 5 ಎಕರೆ ಭೂಮಿಯನ್ನು ನೀಡಲಾಗುವುದು ಎಂದು ತೀರ್ಪು ಹೇಳಿದೆ.

ಇದರ ಬೆನ್ನಲ್ಲೇ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಚನೆ ಮಾಡಿ, ಮಂದಿರ ನಿರ್ಮಾಣದ ಮೇಲ್ವಿಚಾರಣೆ ಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿತ್ತು. ಕೇವಲ ಎರಡು ವರ್ಷಗಳ ಅವಧಿಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ.

ಇದನ್ನೂ ಓದಿ : ಸರಕಾರಿ ನೌಕರರಿಗೆ ದೀಪಾವಳಿ ಬೋನಸ್‌ ಘೋಷಣೆ : ಆದ್ರೆ ಈ ನೌಕರರಿಗೆ ಮಾತ್ರವೇ ಅವಕಾಶ

ರಾಮಮಂದಿರ ಒಟ್ಟು ಮೂರು ಅಂತಸ್ತುಗಳನ್ನು ಒಳಗೊಂಡಿದ್ದು, ಈ ಪೈಕಿ ನೆಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದೆ. ಜನವರಿ 14 ರ ಮಕರ ಸಂಕ್ರಾಂತಿಯ ದಿನದಂದು ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ.

Inauguration of Ayodhya Ram Mandir Muslims request Namo to lay foundation stone of Babri Masjid
Image credit : X (twitter)

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ ರಾಮಮಂದಿರ ನಿರ್ಮಾಣಗೊಂಡಿದ್ರೆ ಬಾಬರಿ ಮಸೀದಿ ಇನ್ನೂ ನಿರ್ಮಾಣವಾಗಿಲ್ಲ. ಬಾಬರಿ ಮಸೀದಿ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಸಲುವಾಗಿ ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ರಚಿಸಲಾಗಿತ್ತು. ಆದ್ರೀಗ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ನ ಟ್ರಸ್ಟಿಗಳನ್ನು ಬದಲಾಯಿಸಬೇಕೆಂದು ಮುಸ್ಲಿಮರು ಒತ್ತಾಯಿಸಿದ್ದಾರೆ.

ಅದ್ರಲ್ಲೂ ಬಾಬರಿ ಮಸೀದಿ ನಿರ್ಮಾಣದ ವೇಗದ ಬಗ್ಗೆ ಮುಸ್ಲೀಮರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನವರಿಯಲ್ಲಿ ಶ್ರೀರಾಮನ ವಿಗ್ರಹವನ್ನು ದೇವಾಲಯದಲ್ಲಿ ಇರಿಸಲಾಗುವುದು, ಆದರೆ ಇದುವರೆಗೂ ಮಸೀದಿಯ ಅಡಿಪಾಯವನ್ನು ಇನ್ನೂ ಹಾಕಿಲ್ಲ. ಇದೀಗ ಮುಸ್ಲೀಂ ಧರ್ಮಗುರುಗಳು ಮಸೀದಿಯ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ತಿಂಗಳಿನಲ್ಲಿ ರಾಮಮಂದಿರದ ಉದ್ಗಾಟನೆಗಾಗಿ ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಈವೇಳೆಯಲ್ಲಿ ಅವರು ಬಾಬರಿ ಮಸೀದಿಗೆ ಶಂಕುಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದಾ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಸಂದರ್ಭದಲ್ಲಿ ಅಯೋಧ್ಯೆಗೆ ಬರುತ್ತಿದ್ದಾರೆ. ಮಸೀದಿಯ ಕಾಮಗಾರಿಯನ್ನು ಸಹ ಪ್ರಾರಂಭಿಸಲು ನಾವು ಅವರಲ್ಲಿ ವಿನಂತಿಸುತ್ತೇವೆ. ಇದು ನಮ್ಮ ಹೃತ್ಪೂರ್ವಕ ಹಾರೈಕೆ” ಎಂದು ಇಂಡಿಯನ್ ಮುಸ್ಲಿಂ ಲೀಗ್ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಅನ್ಸಾರಿ ಇಂಡಿಯಾ ಟುಡೆ ಜೊತೆ ಮಾತನಾಡಿದ್ದಾರೆ.

Inauguration of Ayodhya Ram Mandir Muslims request Namo to lay foundation stone of Babri Masjid
Image Credit to Original Source

ಬಾಬರಿ ಮಸೀದಿ-ರಾಮ ಮಂದಿರ ವಿವಾದದ ಪ್ರಮುಖ ಅರ್ಜಿದಾರರಲ್ಲಿ ಒಬ್ಬರಾಗಿದ್ದ ಇಕ್ಬಾಲ್ ಅನ್ಸಾರಿ, ಮಸೀದಿ ನಿರ್ಮಾಣ ವಿಳಂಬಕ್ಕೆ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಸದಸ್ಯರೇ ಕಾರಣ ಎಂದಿದ್ದಾರೆ. ಇನ್ನು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಬೋರ್ಡ್. ಟ್ರಸ್ಟಿಗಳು ಸರಿಯಾಗಿದ್ದರೆ ಇಷ್ಟೊತ್ತಿಗೆ ಒಂದಷ್ಟು ಕೆಲಸಗಳು ಆರಂಭವಾಗುತ್ತಿತ್ತು. ಆದರೆ ಈ ಕಾರ್ಯ ಇನ್ನೂ ನಡೆದಿಲ್ಲ, ಮಸೀದಿ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಹಕಾರ ನೀಡಬೇಕು. ಟ್ರಸ್ಟಿಗಳನ್ನು ಬದಲಾಯಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

Inauguration of Ayodhya Ram Mandir Muslims request Namo to lay foundation stone of Babri Masjid

Comments are closed.