Tiger Deaths : ಭಾರತದಲ್ಲಿ ಹೆಚ್ಚಿದ ಹುಲಿಗಳ ಸಾವಿನ ಪ್ರಕರಣ : 2 ತಿಂಗಳಲ್ಲಿ 30 ಹುಲಿಗಳ ಸಾವು

ನವದೆಹಲಿ : ಭಾರತದ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿರುವ ಹುಲಿಗಳ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಭಾರತದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 30 ಹುಲಿಗಳು ಸಾವನ್ನಪ್ಪಿವೆ (Tiger Deaths ). ಹುಲಿ ಸಂರಕ್ಷಿತ ಅರಣ್ಯದಲ್ಲಿ ಸುಮಾರು ಅರ್ಧದಷ್ಟು ಸಾವುಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸಾವುಗಳು ಸಹಜವಾದ ಕಾರಣ ಭಯಪಡುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಪ್ರಕಾರ ಹುಲಿ ಸಾವು ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ್ ನಡುವೆ ಹೆಚ್ಚಾಗುತ್ತದೆ. ಹುಲಿ ಸಂರಕ್ಷಿತ ಪ್ರದೇಶಗಳಾದ ಕನ್ಹಾ, ಪನ್ನಾ, ರಣಥಂಬೋರ್, ಪೆಂಚ್, ಕಾರ್ಬೆಟ್, ಸಾತ್ಪುರ, ಒರಾಂಗ್, ಕಾಜಿರಂಗ ಮತ್ತು ಸತ್ಯಮಂಗಲಂ ಕಾಡುಗಳಲ್ಲಿ ಹುಲಿಗಳ ಸಾವಿನ ಪ್ರಮಾಣ (Tiger Deaths ) ಹೆಚ್ಚಳವಾಗಿದೆ. 30 ಹುಲಿಗಳ ಸಾವುಗಳ ಪೈಕಿ 16 ಹುಲಿಗಳು ಮಾತ್ರ ಮೀಸಲು ಹೊರಗೆ ವರದಿಯಾಗಿದೆ. ದೇಶದಲ್ಲಿಯೇ ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಹುಲಿಗಳು ಸಾವನ್ನಪ್ಪಿದ್ದು, ಬರೋಬ್ಬರಿ ಒಂಬತ್ತು ಹುಲಿಗಳು ಮಧ್ಯಪ್ರದೇಶ ಒಂದರಲ್ಲೇ ಸಾವನ್ನಪ್ಪಿವೆ ಎಂದು ವರದಿಗಳು ಹೇಳಿವೆ.

ಮಧ್ಯಪ್ರದೇಶದ ನಂತರದಲ್ಲಿ ಮಹಾರಾಷ್ಟ್ರ ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಏಳು ಹುಲಿಗಳು ಸಾವನ್ನಪ್ಪಿದ್ದು, ಮೂರು ವಯಸ್ಕ ಹಾಗೂ ಒಂದು ಮರಿ ಹುಲಿ ಸಾವನ್ನಪ್ಪಿದೆ. ಜನವರಿಯಿಂದ ಮಾರ್ಚ್ ನಡುವಿನಲ್ಲೇ ಅತೀ ಹೆಚ್ಚು ಹುಲಿಗಳು ಸಾವನ್ನಪ್ಪಿವೆ. ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಹುಲಿಗಳನ್ನು ಹೊಂದಿವೆ. ಆದರೆ ಹುಲಿಗಳ ಸಾವಿನ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಭಾರತದಲ್ಲಿ ವಾರ್ಷಿಕವಾಗಿ ಬರೋಬ್ಬರಿ 200ಕ್ಕೂ ಅಧಿಕ ಹುಲಿಗಳು ಸಾವನ್ನಪ್ಪುತ್ತಿವೆ.

ಒಂದೆಡೆ ಹುಲಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದರೂ ಕೂಡ ಇನ್ನೊಂದೆಡೆಯಲ್ಲಿ ಹುಲಿಗಳ ಸಂಖ್ಯೆಯಲ್ಲಿ 6% ರಷ್ಟು ಏರಿಕೆಯಾಗಿದೆ. ಹುಲಿಗಳ ಸರಾಸರಿ ಜೀವಿತಾವಧಿ 12 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಹುಲಿಗಳ ಸಾವಿನ ಸಂಖ್ಯೆ ಸಾಮಾನ್ಯ ಎನ್ನಲಾಗುತ್ತಿದೆ. ದೇಶದಲ್ಲಿ 2020ರಲ್ಲಿ ಏಳು, 2019ರಲ್ಲಿ 17 ಮತ್ತು 2018ರಲ್ಲಿ 34 ಬೇಟೆ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ : India New Covid cases: ಭಾರತದಲ್ಲಿ ಮತ್ತೆ 193 ಹೊಸ ಕೋವಿಡ್ ಕೇಸ್ ಗಳು ಪತ್ತೆ: ದೆಹಲಿಯಲ್ಲಿ ಒಂದು ಸಾವು

ಇದನ್ನೂ ಓದಿ : ಪಿಂಚಣಿದಾರರ ಗಮನಕ್ಕೆ : ಇಪಿಎಫ್‌ಒ ಹೆಚ್ಚಿನ ಪಿಂಚಣಿ ಆಯ್ಕೆಗೆ ಮೇ 3ಕ್ಕೆ ವಿಸ್ತರಣೆ

Comments are closed.