ನವದೆಹಲಿ : ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿ ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಭಾಷೆ, ಸಂಸ್ಕೃತಿ ಎಂಬುವುದು ಇದೆ. ಹೀಗಾಗಿ ಯಾವುದೋ ಒಂದು ಭಾಷೆಯನ್ನು ಸಂಪೂರ್ಣವಾಗಿ ದೇಶದ ಭಾಷೆ ಎಂದು ಒಪ್ಪಲು ಎಲ್ಲರಿಂದಲೂ ಸಾಧ್ಯವಿಲ್ಲ. ಸಂಸತ್ತಿನಲ್ಲೂ ಕೂಡ ಇಂತಹದ್ದೇ ಒಂದು ಘಟನೆ ನಡೆದಿದೆ. ಹಿಂದಿ ಶಬ್ದ ಬಳಕೆ ಮಾಡಲು ತಡಕಾಡಿದ ತಮಿಳುನಾಡಿನ ಸಂಸದೆಯೊಬ್ಬರು ತಮಿಳು ಭಾಷೆಯಲ್ಲಿಯೇ ( Atmanirbhar DMK MP Kanimozhi ) ಮಾತನಾಡಿದ್ದಾರೆ.
ಹವಾಮಾನ ಬದಲಾವಣೆ ವಿಚಾರದ ಕುರಿತು ಸಂಸತ್ತಿನಲ್ಲಿ ಮಾತನಾಡುತ್ತಿದ್ದ ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದೆ ಕನಿಮೋಜಿ ಆತ್ಮನಿರ್ಭರ್ ಭಾರತ್ ಎಂದು ಹೇಳಲು ಕಷ್ಟಪಟ್ಟಿದ್ದಾರೆ. ಈ ಪದದ ಉಚ್ಚಾರಣೆ ಮಾಡಲು ಕನಿಮೋಜಿ ಕಷ್ಟ ಪಡುತ್ತಿದ್ದ ವೇಳೆ ಕೆಲ ಸಂಸದರು ಜೋರಾಗಿ ನಕ್ಕರೆ ಇನ್ನೂ ಕೆಲವರು ಆತ್ಮನಿರ್ಭರ್ ಭಾರತ್ ಎಂದು ಜೋರಾಗಿ ಹೇಳಿದ್ದಾರೆ.
ಈ ವೇಳೆ ನಗುತ್ತಲೇ ತಮ್ಮ ಮಾತನ್ನು ಮುಂದುವರಿಸಿದ ಕನಿಮೋಜಿ ನೀವು ಇಂತಹ ಹೆಸರುಗಳನ್ನು ಇಂಗ್ಲೀಷ್ನಲ್ಲಿ ಇಡಬೇಕು. ಇಲ್ಲವಾದಲ್ಲಿ ಪ್ರಾದೇಶಿಕ ಭಾಷೆಗಳನ್ನೂ ಬಳಕೆ ಮಾಡುವಂತೆ ಮಾಡಬೇಕು. ಆಗ ಮಾತ್ರ ನಮಗೆ ಉಚ್ಛರಣೆ ಸುಲಭವಾಗುತ್ತೆ ಎಂದು ಹೇಳಿದ್ದಾರೆ.
அப்படி போடு pic.twitter.com/x6pcfI5g6O
— RadhakrishnanRK (@RKRadhakrishn) December 9, 2021
ಅಲ್ಲದೇ ಸಂಸತ್ತಿನಲ್ಲಿ ನಕ್ಕ ಸದಸ್ಯರಿಗೆ ನಾನು ತಮಿಳಿನಲ್ಲಿ ಮಾತನಾಡಿದರೆ ನೀವು ಅರ್ಥ ಮಾಡಿಕೊಳ್ಳುತ್ತೀರೇ ಎಂದು ನಗುತ್ತಾ ತಮಿಳಿನಲ್ಲಿ ಮಾತನಾಡಿದ್ದಾರೆ. ಸಂಸತ್ತಿನಲ್ಲಿ ಈ ರೀತಿ ಪ್ರಾದೇಶಿಕ ಭಾಷೆಗಳ ಮಹತ್ವ ಸಾರಿದ ಡಿಎಂಕೆ ಸಂಸದೆ ಕನಿಮೋಝಿ ಅವರ ಈ ನಡೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಇದೀಗ ಕನಿಮೋಝಿ ಅವರು ಸಂಸತ್‌ನಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಕನಿಮೋಝಿ ಅವರ ಹೇಳಿಕೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : CDS General Bipin Rawat : ಶತ್ರುರಾಷ್ಟ್ರ ಚೀನಾದ ಬಗ್ಗೆ ಕೊನೆಯ ಬಾರಿಗೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹೇಳಿದ್ದೇನು ಗೊತ್ತೇ..?
ಇದನ್ನೂ ಓದಿ : Egg Controversy : ಬೊಮ್ಮಾಯಿಗೆ ಮೊಟ್ಟೆ ಸಂಕಟ: ಲಿಂಗಾಯತರಿಂದಲೇ ಸರ್ಕಾರ ಪತನ ಎಂದ ಸ್ವಾಮೀಜಿ
Atmanirbhar DMK MP Kanimozhi Speaks in Tamil in Parliament After Facing Difficulty in Pronouncing Aatmanirbhar