Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಗೂಗಲ್‌ (Google) ಎಂಬುದೊಂದು ಇಲ್ಲದಿದ್ದರೆ ಈ ಜಗತ್ತೇ ಇರುತ್ತಿರಲಿಲ್ಲ ಎಂಬಷ್ಟರ ಮಟ್ಟಿಗೆ ದೈತ್ಯ ತಂತ್ರಜ್ಞಾನ ಕಂಪನಿ ಗೂಗಲ್ ನಮ್ಮ ಬದುಕನ್ನು ಆವರಿಸಿಕೊಂಡುಬಿಟ್ಟಿದೆ. ಒಂದು ಪದದ ಅರ್ಥ ಗೊತ್ತಾಗದಿದ್ದರೆ, ಯಾವುದೋ ಹೊಸ ವಿಷಯವೊಂದನ್ನು ತಿಳಿಯಬೇಕಿದ್ದರೆ..ಹೀಗೆ ಏನೇ ಬೇಕಿದ್ದರೆ ಗುಗಲ್ ಸರ್ಚ್ ಮಾಡುವ ವಾಡಿಕೆ ನಮ್ಮಲ್ಲಿದೆ. ಆದರೆ ಒಮ್ಮೊಮ್ಮೆ ಎಷ್ಟೇ ಸರ್ಚ್ ಮಾಡಿದರೂ ಗೂಗಲ್‌ನಲ್ಲಿ ನಮಗೆ ಬೇಕಾದ ಖಚಿತ ಮಾಹಿತಿ ಸಿಗುತ್ತಲೇ ಇಲ್ಲ ಎಂದು ಹುಡುಕಿ ಹುಡುಕಿ ಸುಸ್ತಾದ ಉದಾಹರಣೆಗಳೂ ಇವೆ. ನಿಮಗೂ ಹೀಗಾಗಿದ್ದಲ್ಲಿ ಕೆಲವು ಸರಳ ವಿಧಾನಗಳ ಮೂಲಕ ಇನ್ನಷ್ಟು ಆರಾಮವಾಗಿ ಸರ್ಚ್ ಮಾಡಿ ನಿಮಗೆ ಬೇಕಾದ ಮಾಹಿತಿಯನ್ನೇ ಗೂಗಲ್‌ನಿಂದ ಪಡೆಯಬಹುದು. ಅದು ಹೇಗೆ ಎಂದಿರಾ? ಈ ಸ್ಟೋರಿ ಓದಿ. (Google Search Simple Tips and tricks in Kannada)

ನೀವು ಯಾವುದೋ ಒಂದು ಸ್ಥಳದ ಕುರಿತು ಸರ್ಚ್ ಮಾಡಬೇಕಿದೆ.  ಉದಾ: ಕಾಮತ್ ಹೋಟೆಲ್. ಹೋಟೆಲ್‌ನ ಹೆಸರು ಟೈಪಿಸಿ ಸರ್ಚ್ ಕೊಡುತ್ತೀರಿ, ಆಗ ನಾನಾ ಸರ್ಚ್ ರಿಸಲ್ಟ್‌ಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ಅದಕ್ಕಿಂತ ಕಾಮತ್ ಹೋಟೆಲ್ ಉಡುಪಿ ಎಂದು ಟೈಪಿಸಿ ಅಲ್ಲೇ ಕೆಳಗೆ ಕಾಣಿಸುವ ಮ್ಯಾಪ್‌ನ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಪಕ್ಕಾ ಆ ಹೋಟೆಲ್‌ನ ಲೊಕೇಶನ್‌ ಮಾತ್ರ ಸರ್ಚ್ ರಿಸಲ್ಟ್‌ನಲ್ಲಿ ತೋರಿಸುತ್ತದೆ. ನೀವು ಸರ್ಚ್ ಮಾಡುವ ವಿಷಯ ಯಾವುದರ ಕುರಿತಾದದ್ದು ಎಂದು ಅದನ್ನೇ ಆಯ್ಕೆ ಮಾಡಿಕೊಂಡರೆ ನಿಮಗೆ ದೊರೆಯುವ ಉತ್ತರವೂ ಖಚಿತವಾಗಿರುತ್ತದೆ. ಬಿಪಿನ್ ರಾವತ್ (Bipin Rawat) ಅವರ ಸುದ್ದಿ ತಿಳಿಯಲು ಬಿಪಿನ್ ರಾವತ್ ಎಂದು ಟೈಪ್ ಮಾಡಿ ‘ನ್ಯೂಸ್’ ಕೆಟಗೆರಿ ಆಯ್ಕೆ ಮಾಡಿಕೊಂಡರೆ ಅವರ ಕುರಿತ ತಾಜಾ ಸುದ್ದಿಯೆ ನಿಮಗೆ ದೊರೆಯುತ್ತದೆ.

” ಚಿಹ್ನೆ ಬಳಸಿ
ನೀವು ಯಾವುದೋ ವಿಷಯವೊಂದರ ಕುರಿತು ಸರ್ಚ್ ಮಾಡಬೇಕಿದೆ. ಆದರೆ ಆ ವಿಷಯದ ಸುತ್ತಮುತ್ತಲಿನ ಹಲವು ಮಾಹಿತಿಗಳು ಸರ್ಚ್ ರಿಸಲ್ಟ್ ಆಗಿ ಬರುತ್ತಿವೆ. ನಿಮಗೆ ಬೇಕಾದ ಖಚಿತ ಮಾಹಿತಿ ದೊರೆಯುತ್ತಿಲ್ಲ. ಆಗ ನೀವು ಮಾಡಬೇಕಿರುವುದು ಇಷ್ಟೇ, “ ”  ಚಿಹ್ನೆ ಬಳಸಿ. ಅಂದರೆ ನೀವು ಸರ್ಚ್ ಮಾಡುವ ಪದಕ್ಕೆ “ ” ಈ ಚಿಹ್ನೆ ಬಳಸಿ ಸರ್ಚ್ ಮಾಡಿ. ನಿಮಗೆ ಬೇಕಾದ ಮಾಹಿತಿಯೇ ದೊರೆಯುತ್ತದೆ.

: ಚಿಹ್ನೆ ಬಳಸಿ
ಅರೇ ಇದೇನಿದು ಅಂದಿರಾ? : ಚಿಹ್ನೆ ಅಥವಾ ಕಾಲನ್ ಬಳಸುವ ಮೂಲಕ ನೀವು ಇನ್ನಷ್ಟು ಖಚಿತವಾಗಿ ಸರ್ಚ್ ಮಾಡಬಹುದು.  News next live Kannada: news next live kannada ಎಂದು ಟೈಪಿಸಿದರೆ ನಿಮಗೆ ನೀವು ಸುದ್ದಿ ಓದುತ್ತಿರುವ ಜಾಲತಾಣವೇ ಸಿಗುತ್ತದೆ.

ಗೂಗಲ್ ಪ್ರಪಂಚದಾದ್ಯಂತದ ಮಾಹಿತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ನೀವು ಯಾವುದೇ ಊರಿನ ಸಮಯ ಅಥವಾ ಸೂರ್ಯೋದಯ, ಸೂರ್ಯಾಸ್ತದ ಮಾಹಿತಿ ತಿಳಿಯಬೇಕಿದ್ದಲ್ಲಿ ಆಯಾ ಊರಿನ ಹೆಸರು ಮತ್ತು ಸೂರ್ಯೋದಯ ಅಂತ ಟೈಪಿಸಿ. ಖಚಿತ ಮಾಹಿತಿ ನಿಮ್ಮ ಕಣ್ಣೆದುರು ಕಾಣಿಸುತ್ತದೆ. ಉದಾ Udupi Sunset

ನೀವು ವಿಷಯವೊಂದರ ಪಿಡಿಎಫ್‌ ಒಂದನ್ನು ಹುಡುಕಬೇಕಿದೆ. ಪಿಡಿಎಫ್, ಚಿತ್ರಗಳು, ಆಡಿಯೋ, ವಿಡಿಯೋ ಸೇರಿ ಹತ್ತು ಹಲವು ಬಗೆಯ ಸರ್ಚ್ ರಿಸಲ್ಟ್ ದೊರೆಯುತ್ತಿದೆ. ಆಗ ನಿಮಗೆ ಬೇಕಾದ ಪಿಡಿಎಫ್ ಮಾಹಿತಿಯನ್ನೇ ಪಡೆಯುವುದಾದರೆ ಮಾಡಬೇಕಿರುವುದು ಇಷ್ಟೇ.  “(your file name) filetype:pdf” – ಹೀಗೆ ಸರ್ಚ್ ಮಾಡುವ ಮೂಲಕ ನೀವು ನಿಮಗೆ ಬೇಕಾದ ಪಿಡಿಎಫ್ ಕಡತವನ್ನೇ ಪಡೆಯಬಹುದು.  Pdf ಅಂತ ಇರುವಲ್ಲಿ jpeg ಎಂದು ನಮೂದಿಸಿದರೆ jpeg ಫೈಲ್‌ಗಳೇ ನಿಮಗೆ ದೊರೆಯುತ್ತವೆ.

ಇದನ್ನೂ ಓದಿ: Jobs: ಮನೆಯಲ್ಲೇ ಕುಳಿತು ಇಂಗ್ಲಿಷ್ ಕಲಿಯಿರಿ ಮತ್ತು ಉದ್ಯೋಗ ಪಡೆಯಿರಿ

(Google Search Tricks : Simple Tips and tricks in Kannada)

Comments are closed.