ನವದೆಹಲಿ : ಲಾಕ್ ಡೌನ್ (India Lockdown) ಸದ್ಯ ಈ ಹೆಸರು ಕೇಳಿದ್ರೆ ಸಾಕು ಜನರು ಬೆಚ್ಚಿ ಬೀಳುತ್ತಾರೆ. ಇದೀಗ ಟ್ವೀಟರ್ ನಲ್ಲಿ ಭಾರತ ಲಾಕ್ ಡೌನ್ ವಿಷಯ ಟ್ರೆಂಡಿಂಗ್ ಆಗುತ್ತಿದೆ. ಸಾಕಷ್ಟು ಜನರು ಟ್ವೀಟರ್ ನಲ್ಲಿನ ಲಾಕ್ ಡೌನ್ ಟ್ಯಾಗ್ ಪರಿಶೀಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನೂ ಹಲವರು ಕೊರೊನಾ ಜಾಸ್ತಿಯಾಯ್ತಾ, ಲಾಕ್ ಡೌನ್ ಭಾರತದಲ್ಲಿ ಜಾರಿಯಾಗುತ್ತಾ, ವರ್ಕ್ ಪ್ರಂ ಹೋಮ್ ಸಿಗುತ್ತಾ ಎಂಬೆಲ್ಲಾ ಯೋಚನೆಗಳು ಹಲವರಲ್ಲಿ ಹೊಳೆದಿತ್ತು. ಅಷ್ಟಕ್ಕೂ ಅಸಲಿ ವಿಚಾರವೇ ಬೇರೆ.
ಟ್ವೀಟರ್ ನಲ್ಲಿ ಇಂಡಿಯಾ ಲಾಕ್ ಡೌನ್ ಟ್ಯಾಗ್ ಟ್ರೆಂಡ್ ಆಗ್ತಿರೋದು ಸಿನಿಮಾವೊಂದರ ವಿಚಾರಕ್ಕಾಗಿ. ಹೌದು, ಮಧುರ್ ಭಂಡಾರ್ಕರ್ ಅವರ ನಿರ್ದೇಶನದ ಇಂಡಿಯಾ ಲಾಕ್ ಡೌನ್ ಸಿನಿಮಾ ಶ್ವೇತಾ ಬಸು ಪ್ರಸಾದ್, ಆಹಾನಾ ಕುಮ್ರಾ ಮತ್ತು ಪ್ರತೀಕ್ ಬಬ್ಬರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
After watching #IndiaLockdown Trending on twitter.. pic.twitter.com/xImnm1ciQl
— Burhanuddin Saifee (@BurhanuddinSa15) November 8, 2022
ಅಮಿತ್ ಜೋಶಿ, ಆರಾಧನಾ ಸಾಹ್ ಮತ್ತು ಮಧುರ್ ಭಂಡಾರ್ಕರ್ ಬರೆದಿರುವ ಇಂಡಿಯಾ ಲಾಕ್‌ಡೌನ್, ಕೊರೊನಾ ಸಾಂಕ್ರಾಮಿಕ ರೋಗ ತಂಡ ಪರಿಣಾಮವನ್ನು ಜನರ ಮುಂದೆ ತೆರೆದಿಡಲಿದೆ. ಕೊರೊನಾ ಕಾರಣದಿಂದ ಬೇರ್ಪಟ್ಟ ತಂದೆ ಮಗಳ ಜೋಡಿ, ಲೈಂಗಿಕ ಕಾರ್ಯಕರ್ತೆ ಮತ್ತು ಲಾಕ್‌ಡೌನ್ ಅವಳ ವೈಯಕ್ತಿಕ ತೊಂದರೆ, ವಲಸೆ ಕಾರ್ಮಿಕರ ಭವಣೆ, ಗಗನ ಸಖಿಯ ಬದುಕನ್ನು ಈ ಸಿನಿಮಾ ಅನಾವರಣಗೊಳಿಸಲಿದೆ.
ಪಿಇಎನ್ ಸ್ಟುಡಿಯೋಸ್, ಮಧುರ್ ಭಂಡಾರ್ಕರ್ ಅವರ ಭಂಡಾರ್ಕರ್ ಎಂಟರ್‌ಟೈನ್‌ಮೆಂಟ್ ಮತ್ತು ಪ್ರಣವ್ ಜೈನ್ ಅವರ ಪಿಜೆ ಮೋಷನ್ಸ್ ಪಿಕ್ಚರ್ಸ್‌ನ ಡಾ.ಜಯಂತಿಲಾಲ್ ಗಡ ನಿರ್ಮಿಸಿರುವ ‘ಇಂಡಿಯಾ ಲಾಕ್‌ಡೌನ್’ ಕೋವಿಡ್ ಸಾಂಕ್ರಾಮಿಕ ರೋಗದ ಮೊದಲ ಭಾರತೀಯ ಚಲನಚಿತ್ರವಾಗಿದೆ ಮತ್ತು ಶ್ವೇತಾ ಬಸು ಪ್ರಸಾದ್, ಆಹಾನಾ ಕುಮ್ರಾ, ಪ್ರತೀಕ್ ಬಬ್ಬರ್, ಪ್ರತೀಕ್ ಬಬ್ಬರ್‌ಕರ್ ನಟಿಸಿದ್ದಾರೆ. ಮತ್ತು ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಭಾರತ ಲಾಕ್‌ಡೌನ್’ ಡಿಸೆಂಬರ್ 2 ರಂದು ಪ್ರತ್ಯೇಕವಾಗಿ ZEE5 ನಲ್ಲಿ ಪ್ರೀಮಿಯರ್ ಆಗಲಿದೆ.
ಇದನ್ನೂ ಓದಿ : Nick Jonas: ದೇಸಿಗರ್ಲ್ ಪ್ರಿಯಾಂಕಾ ಪತಿ ನಿಕ್ ಜೋನಸ್ ಹಳೆ ಲವ್ ಸ್ಟೋರಿಗೆ ಮರುಜೀವ; ಬ್ರೇಕಪ್ ಬಗ್ಗೆ ಮೌನಮುರಿದ ಮಾಡೆಲ್
ಇದನ್ನೂ ಓದಿ : Earthquake : ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, 6 ಮಂದಿ ಸಾವು :ದೆಹಲಿ, ನೋಯ್ಡಾ, ಗಾಜಿಯಾಬಾದ್ ನಲ್ಲಿ ಭೂಕಂಪನ
India Lockdown Trending in twitter movie Teaser Released