African Swine Fever : ಆಫ್ರಿಕನ್ ಜ್ವರ 85 ಹಂದಿಗಳ ಸಾವು : ಮಂಗಳೂರಲ್ಲಿ ಅಲರ್ಟ್‌

ಭೋಪಾಲ್: ಹಂದಿಗಳಿಗೆ ಇದೀಗ ಆಫ್ರಿಕನ್ ಜ್ವರದ (African Swine Fever) ಭೀತಿ ಶುರುವಾಗಿದೆ. ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ 85 ಹಂದಿಗಳು ಸಾವನ್ನಪ್ಪಿವೆ.ಅಲ್ಲದೇ ಕನಿಷ್ಠ 115 ಹಂದಿಗಳು ಆಫ್ರಿಕನ್ ಜ್ವರದಿಂದ ಸೋಂಕಿಗೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ಹಂದಿಗಳ ಮಾದರಿಯನ್ನು ಭೊಪಾಲ್ ನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಸರಕಾರಿ ಪಶುವೈದ್ಯ ಡಾ.ಆರ್.ಕೆ.ಸೋನಿ ತಿಳಿಸಿದ್ದಾರೆ.

ಆಫ್ರಿಕನ್ ಹಂದಿ ಜ್ವರವು ಹಂದಿಗಳ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ವೈರಲ್ ರೋಗ. ಪ್ರಾಣಿಗಳಲ್ಲಿ ಕಂಡು ಬರುವ ಈ ಜ್ವರ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ಹಂದಿ ಸಾಕಾಣಿಕೆದಾರರು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಂದು ಸೂಚನೆಯನ್ನು ನೀಡಿದ್ದಾರೆ. ಕಟ್ನಿ ಮಹಾನಗರ ಪಾಲಿಕೆಯ ವಾರ್ಡ್ ನಂ.30 ಭಟ್ಟ ಮೊಹಲ್ಲಾ, ವಾರ್ಡ್ ನಂ.18 ತಿಲಕ್ ಕಾಲೇಜು ರಸ್ತೆಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟ ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಪ್ರಭಾರ ಜಿಲ್ಲಾಧಿಕಾರಿ ಶಿಶಿರ್ ಗೆಮಾವತ್ ಅವರು ಸೋಂಕಿತ ವಲಯ, ಕಣ್ಗಾವಲು ವಲಯ, ಮುಕ್ತ ವಲಯಕ್ಕೆ ಕಾರ್ಯಪಡೆಯನ್ನು ರಚನೆ ಮಾಡಿದ್ದರು.

ಸೋಂಕಿತ ವಲಯದಲ್ಲಿ ಹಂದಿಗಳನ್ನು ಹಿಡಿಯುವುದು, ಹಂದಿಗಳನ್ನು ತಡೆಯುವುದು, ಹಂದಿಗಳ ಮಾನವೀಯ ಹತ್ಯೆ, ಸೋಂಕಿತ ಪ್ರದೇಶದಲ್ಲಿ ಬರುವ ಮತ್ತು ಹೋಗುವ ಎಲ್ಲಾ ವಾಹನಗಳಿಗೆ ಕ್ರಿಮಿನಾಶಕ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪಶುಸಂಗೋಪನೆ, ಹೈನುಗಾರಿಕೆ ಇಲಾಖೆ ಹಾಗೂ ನಗರಸಭೆಗೆ ಪ್ರಭಾರಿ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.

ಮಂಗಳೂರಲ್ಲೂ ಆಫ್ರಿನ್ ಹಂದಿಜ್ವರ (African Swine Fever) ಪತ್ತೆ

ಮಂಗಳೂರು ನಗರದ ಹೊರವಲಯದಲ್ಲಿರುವ ನೀರುಮಾರ್ಗ ಗ್ರಾಮದ ಕೆಲರಾಯಿ ಪ್ರದೇಶದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರವೊಂದರ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಹಂದಿಗಳಿಗೆ ಆಫ್ರಿನ್ ಜ್ವರ ಪತ್ತೆಯಾದ ಪ್ರದೇಶದ 1ಕಿ.ಮೀ. ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ.

ರೋಗಪೀಡಿತ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಆ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಲು ಹಾಗೂ ಅಲ್ಲಿಗೆ ಸಾರ್ವಜನಿಕರು ಭೇಟಿ ನೀಡದಂತೆ ನಾಮಫಲಕ ಅಳವಡಿಸುವಂತೆ ಸೂಚಿಸಲಾಗಿದೆ. ಅಪರಿಚಿತರಿಂದ ಹಂದಿ ಮರಿಗಳನ್ನು ಮತ್ತು ಮಾಂಸವನ್ನು ಖರೀದಿಸಬಾರದು. ಹಂದಿ ಸಾಕಾಣಿಕಾ ಕೇಂದ್ರಗಳನ್ನು ಬಿಸಿ ನೀರಿನಿಂದ ತೊಳೆದು, ಕ್ರಿಮಿ ನಾಶಕಗಳನ್ನು ಸಿಂಪಡಿಸುತ್ತಿರಬೇಕು. ಹಂದಿಗಳಿಗೆ ನೀಡಲಾಗುವ ಹೊಟೇಲ್ ತ್ಯಾಜ್ಯಗಳನ್ನು ನೀಡದಿರುವುದು ಒಳಿತು, ಅನಿವಾರ್ಯ ಸಂದರ್ಭ ಚೆನ್ನಾಗಿ ಬೇಯಿಸಿ ನೀಡಬೇಕು ಎಂದು ಡಿಸಿ ಸೂಚಿಸಿದ್ದಾರೆ. ಆಫ್ರಿಕನ್ ಹಂದಿ ಜ್ವರವು ಹಂದಿಗಳಿಂದ ಅಥವಾ ಮಾಂಸ ಸೇವಿಸುವುದರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ಹಂದಿ ಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಹಂದಿ ಪಾಲಕರು ಸೂಕ್ತ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ಎಂ.ಆರ್. ಸೂಚನೆಯನ್ನು ನೀಡಿದ್ದರು.

ಇದನ್ನೂ ಓದಿ : India Lockdown : ಮತ್ತೆ ಲಾಕ್ ಆಗುತ್ತಾ ಭಾರತ : ಇಂಡಿಯಾ ಲಾಕ್‌ಡೌನ್ ಟ್ರೆಂಡಿಂಗ್ ಗೆ ಬೆಚ್ಚಿಬಿದ್ದ ಜನ : ಅಷ್ಟಕ್ಕೂ ಏನಿದು ?

ಇದನ್ನೂ ಓದಿ : Deadly virus: ಅಂದು ಕೊರೋನಾ.. ಈ ಬಾರಿ ಮತ್ತಷ್ಟು ಡೇಂಜರಸ್ ವೈರಸ್; ರಾವಲ್ಪಿಂಡಿಯಲ್ಲಿ ಕತ್ತಿ ಮಸೆಯುತ್ತಿವೆಯಂತೆ ಪಾಕ್, ಚೀನಾ ರಾಷ್ಟ್ರಗಳು

African Swine Fever (ASF) 85 Pig Death in Bhopal

Comments are closed.