ಮಂಗಳವಾರ, ಏಪ್ರಿಲ್ 29, 2025
HomeNationalSnowfall death : ಹಿಮಪಾತದಿಂದ 3 ಚಾರಣಿಗರ ಸಾವು : ಚಾರಣಕ್ಕೆ ತೆರಳುವ ಮುನ್ನ ಇರಲಿ...

Snowfall death : ಹಿಮಪಾತದಿಂದ 3 ಚಾರಣಿಗರ ಸಾವು : ಚಾರಣಕ್ಕೆ ತೆರಳುವ ಮುನ್ನ ಇರಲಿ ಎಚ್ಚರ

- Advertisement -

ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಆಗಾಗ ಹಿಮಪಾತ ಸಂಭವಿಸುತ್ತದೆ. ಆದರೆ ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಈ ಘಟನೆಯಲ್ಲಿ ಮಹರಾಷ್ಟದ ಮೂರು ಮಂದಿ ಚಾರಣಿಗರು ಸಾವನ್ನಪ್ಪಿದ್ದಾರೆ. ಅಲ್ಲದೇ 10 ಮಂದಿಯನ್ನುಹಿಮಪಾತದಿಂದ ರಕ್ಷಿಸಲಾಗಿದೆ.

ಮಹಾರಾಷ್ಟ್ರದಿಂದ 12 ಮಂದಿ ಹಾಗೂ ಪಚ್ಚಿಮ ಬಂಗಾಳದಿಂದ ಒಬ್ಬರು ಸೇರಿದಂತೆ ಒಟ್ಟು 13 ಮಂದಿ ಚಾರಣಿಗರ ಗುಂಪು ಅಕ್ಟೋಬರ್‌ 17 ರಂದು ರೋಹ್ರುನಿಂದ ಕಿನ್ನೌರ್‌ ಪಯಣ ಆರಂಭಿಸಿದ್ದವು. ಭಾರಿ ಹಿಮಪಾತದಿಂದ ಬುರುವಾ ಕಾಂಡಾ ಎಂಬ ಪ್ರದೇಶದಲ್ಲಿ ಈ ಚಾರಣಿಗರು ಸಿಕ್ಕಿ ಹಾಕಿ ಕೊಂಡಿದ್ದರು.

ಇದನ್ನೂ ಓದಿ: Modi Mann Ki Baat : 100 ಕೋಟಿ ಲಸಿಕೆ ದಾಟಿದ ಮೇಲೆ ದೇಶ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ : ಮೋದಿ

ಸಾವಿಗೀಡಾದವರನ್ನು ರಾಜೇಂದ್ರ ಪಾಠಕ್‌, ಅಶೋಕ್‌ ಭಲೇರಾವ್‌ ಹಾಗೂ ದೀಪಕ್‌ ರಾವ್‌ ಎಂದು ಗುರುತಿಸಲಾಗಿದೆ. ಹಾಗೂ 10 ಮಂದಿಯನ್ನು ಇಂಡೋ ಟಿಬೆಟಿಯನ್‌ ಗಡಿಯ ಪೋಲಿಸರು ರಕ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಮೃತಪಟ್ಟ 3 ಜನರ ಮೃತದೇಹವನ್ನು 4 ಅಡಿ ಹಿಮದ ಕೆಳಗೆ ಹೂಳಲಾಗಿದೆ ಎಂದು ಕಿನ್ನೌರ್‌ ಅಪರ ಆಯುಕ್ತ ಅಪೂರ್ವ ದೇವಗನ್‌ ತಿಳಿಸಿದ್ದಾರೆ.

ಇದನ್ನೂ ಓದಿ: Amit Shah : ಕಾಶ್ಮೀರದಲ್ಲಿ ಅಭಿವೃದ್ದಿ ಯೋಜನೆಗೆ ಚಾಲನೆ : ಕಾಶ್ಮೀರಿ ಪಂಡಿತರ ಬೇಟಿ ಮಾಡಲಿರುವ ಅಮಿತ್‌ ಶಾ

(3 trekkers killed by avalanche: Beware before going trekking)

RELATED ARTICLES

Most Popular