Viral News : ಶಾಲೆಗೆ ತೆರಳುವ ರಸ್ತೆ ದುರಸ್ಥಿ ಮಾಡಿದ ಪುಟಾಣಿಗಳು

ಮಂಗಳೂರು : ಶಾಲೆಗೆ ತೆರಳುವ ರಸ್ತೆ ಮಳೆ ನೀರು ಸೇರಿ ಸಂಪೂರ್ಣವಾಗಿ ಕೆಸರುಮಯವಾಗಿತ್ತು. ಶಾಲಾ ಸಮವಸ್ತ್ರ ಧರಿಸಿ ರಸ್ತೆಯಲ್ಲಿ ತೆರಳಿದ್ರೆ ಕಾಲಿನ ಜೊತೆಗೆ ಸಮವಸ್ತ್ರಕ್ಕೂ ಕೆಸರು ತಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಪುಟಾಣಿ ಮಕ್ಕಳಿಬ್ಬರು ರಸ್ತೆಯನ್ನು ದುರಸ್ಥಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ ಎಂಬಲ್ಲಿ ನಡೆದಿದೆ.

ಇಂದಿನಿಂದ ರಾಜ್ಯದಾದ್ಯಂತ ಕಿರಿಯ ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ. ಆದರೆ ಬೆಳ್ಳಾರೆ ರಸ್ತೆಯ ಮಂಡೇವು ಎಂಬಲ್ಲಿನ ಮಣ್ಣಿನ ರಸ್ತೆ ಸಂಪೂರ್ಣವಾಗಿ ಕೆಸರು ಮಯ ವಾಗಿತ್ತು. ಯಾರೇ ಆದ್ರೂ ನಡೆದುಕೊಂಡು ಹೋಗುವುದಕ್ಕೂ ಕೂಡ ಕಷ್ಟಸಾಧ್ಯವೆಂಬ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯ ಪ್ರಾಥಮಿಕ ಶಾಲೆಯ ವಲ್ಲೀಶ ರಾಮ ಮತ್ತು ತನ್ವಿ ಎಂಬ ವಿದ್ಯಾರ್ಥಿಗಳು ರಸ್ತೆಯನ್ನು ದುರಸ್ಥಿ ಮಾಡಿದ್ದಾರೆ.

ಇದನ್ನೂ ಓದಿ : ಭಾನುವಾರ ಶಾಲೆಗೆ ಶಿಕ್ಷಕರ ವಿರೋಧ : ಸಂಡೇ ನೋ ಕ್ಲಾಸ್‌ ಎಂದ ಶಿಕ್ಷಣ ಸಚಿವರು

ಇದನ್ನೂ ಓದಿ : ಶಿಕ್ಷಕರಿಗೆ ಬಿಗ್‌ ಶಾಕ್‌ ಕೊಟ್ಟ ರಾಜ್ಯ ಸರಕಾರ

ಶಾಲೆಗೆ ತೆರಳೋ ಸಲುವಾಗಿ ಮಕ್ಕಳು ಮಾಡಿದ ಕಾರ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗಾಮೀಣ ಭಾಗದ ಬಹುತೇಕ ಕಡೆಗಳಲ್ಲಿನ ವಿದ್ಯಾರ್ಥಿಗಳು ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರಾಜ್ಯದಾದ್ಯಂತ ಶಾಲೆಗಳು ಆರಂಭವಾಗಿದ್ದರೂ ಕೂಡ ಶಾಲೆಗೆ ತೆರಳಲು ರಸ್ತೆ ಸಂಪರ್ಕವಿಲ್ಲದೇ ಜನರು ಪರದಾಡುತ್ತಿದ್ದಾರೆ. ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ.

School students who make road repairs to school

Comments are closed.