ಜಮುಯಿ : ಅಂತ್ಯಕ್ರೀಯೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಎಸ್‌ಯವಿ ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ಅಫಘಾತದಲ್ಲಿ 6 ಮಂದಿ ಸಾವನ್ನಪ್ಪಿರುವ (6 People Died) ಭೀಕರ ಘಟನೆ ಬಿಹಾರದ ಜಮುಯಿಯ ಸಿಕಂದ್ರಾ -ಶೇಖ್‌ಪುರ ಮುಖ್ಯರಸ್ತೆಯಲ್ಲಿ ನಡೆದಿದೆ.
ಮೃತಪಟ್ಟವರ ಪೈಕಿ 5 ಮಂದಿ ಜಮುಯಿಯ ಖೈರಾ ಬ್ಲಾಕ್‌ನ ನಿವಾಸಿಗಳಾಗಿದ್ದಾರೆ. ಎಲ್ಲರೂ ಜಮುಯಿ ಖೈರಾದಿಂದ ಪಾಟ್ನಾಕ್ಕೆ ಅಂತ್ಯಕ್ರಿಯೆಗಾಗಿ ತೆರಳಿದ್ದರು. ಅಲ್ಲಿಂದ ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಟ್ಟು 6 ಮಂದಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 4 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದ ತೀವ್ರತೆಗೆ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಹಲ್ಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ಇದನ್ನೂ ಓದಿ : Moral police : ಮಂಗಳೂರಲ್ಲಿ ಕಾಲೇಜು ಯುವಕ, ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ
ಇದನ್ನೂ ಓದಿ : Rashmika : ಶರ್ಟ್ ಬಿಚ್ಚೋದ್ಯಾಕೆ ಹುಡುಗರು ? ರಶ್ಮಿಕಾ ಪ್ರಶ್ನೆಗೆ ಬೆಚ್ಚಿದ ಪಡ್ಡೆ ಹೈಕಳು
( 6 People Died in Road Accident At Bihar )