ಮಂಗಳವಾರ, ಏಪ್ರಿಲ್ 29, 2025
HomeNational8 Death : ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ 8 ಮಂದಿ ಸಾವು

8 Death : ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ 8 ಮಂದಿ ಸಾವು

- Advertisement -

ಫಿರೋಜಾಬಾದ್ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಟ್ರಕ್‌ ಢಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬದ್ಲಿ ಮತ್ತು ಫಾರುಖ್ ನಗರದ ನಡುವಿನ ಕೆಎಂಪಿ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ. ಮೂವರು ಮಹಿಳೆಯರು ಹಾಗೂ ಮಗು ಸೇರಿದಂತೆ ಒಟ್ಟು 8 ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಈ ಅಪಘಾತದಲ್ಲಿ ಮೃತಪಟ್ಟವರು ಉತ್ತರ ಪ್ರದೇಶದ ಫಿರೋಜಾಬಾದ್ ನ ನಗ್ಲಾ ಅನೂಪ್ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಅಲ್ಲದೇ ಈ 8 ಜನ ರಾಜಸ್ಥಾನದ ಹನುಮಾನ್ ಘರ್ ಜಿಲ್ಲೆಯ ಗೊಗಮೆಡಿಯಿಂದ ಮನೆಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: PM Narendra Modi : 100 ಕೋಟಿ ಕೊರೊನಾ ಲಸಿಕೆ : ಇದು ಹೊಸ ಅಧ್ಯಾಯದ ಆರಂಭ, ಹೊಸ ಭಾರತ ಎಂದ ಪ್ರಧಾನಿ ನರೇಂದ್ರ ಮೋದಿ

ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ ನ ಹಿಂದೆ ಕಾರಿನ ಚಾಲಕ ಕಾರನ್ನು ನಿಲ್ಲಿಸಿದ್ದ. ಹಿಂದಿನಿಂದ ಅವರ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದಿದೆ ಹಾಗೂ ಕಾರು ಎರಡು ಟ್ರಕ್ ಗಳ ನಡುವೆ ನಜ್ಜುಗುಜ್ಜಾಗಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಹದ್ದೂರ್ ಘರ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಅಪಘಾತದ ನಂತರ ಆರೋಪಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಮತ್ತು ತಲೆಮರೆಸಿಕೊಂಡಿರುವ ಟ್ರಕ್‌ ಚಾಲಕನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತನಿಖಾ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: ADMK- PALANISWAMI : ತಮಿಳುನಾಡು ಮಾಜಿ ಸಿಎಂ ಪಳನಿ ಸ್ವಾಮಿ ಆಸ್ಪತ್ರೆಗೆ ದಾಖಲು

(8 members of same family killed in fatal road accident)

RELATED ARTICLES

Most Popular