Advocate KSN : ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ : ವಕೀಲ ರಾಜೇಶ್‌ ಭಟ್‌ ಅಮಾನತ್ತು, ಮೂವರು ಅರೆಸ್ಟ್‌

ಮಂಗಳೂರು : ಇಂಟರ್ನ್‌ಶಿಪ್‌ ವಿದ್ಯಾರ್ಥಿನಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ ಕೆಎಸ್‌ಎನ್‌ ರಾಜೇಶ್‌ ಅವರನ್ನು ಬಾರ್‌ ಕೌನ್ಸಿಲ್‌ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಮುಂದಿನ ಆದೇಶದ ವರೆಗೂ ಪ್ರಾಕ್ಟಿಸ್‌ ಮಾಡದಂತೆ ಆದೇಶಿಸಿದೆ. ಇನ್ನೊಂದೆಡೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ.

ಮಂಗಳೂರಿನ ಖ್ಯಾತ ವಕೀಲ ಕೆಎಸ್‌ಎನ್‌ ರಾಜೇಶ್‌ ಭಟ್‌ ತನ್ನ ಬಳಿಯಲ್ಲಿ ಇಂಟರ್ನ್‌ಶಿಪ್‌ ಮಾಡಲು ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಅಲ್ಲದೇ ಈ ಕುರಿತು ಕೆಎಸ್‌ಎನ್‌ ರಾಜೇಶ್‌ ಭಟ್‌ ಸಂತ್ರಸ್ತ ವಿದ್ಯಾರ್ಥಿನಿಯ ಜೊತೆಗೆ ನಡೆಸಿದ್ದಾರೆನ್ನಲಾದ ಆಡಿಯೋ ವೈರಲ್‌ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿನಿ ಮಂಗಳೂರು ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡ ಬೆನ್ನಲ್ಲೇ ವಕೀಲ ರಾಜೇಶ್‌ ಭಟ್‌ ನಾಪತ್ತೆಯಾಗಿದ್ದಾರೆ.

ಇಂಟರ್ನ್ ಶಿಪ್‌ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸ್ಟೇಟ್‌ ಬಾರ್‌ ಕೌನ್ಸಿಲ್‌ ಹಾಗೂ ಕರ್ನಾಟಕ ಬಾರ್‌ ಅಸೋಸಿಯೇಷನ್‌ ರಾಜೇಶ್‌ ಭಟ್‌ ಅವರ ಸದಸ್ಯತ್ವವನ್ನು ರದ್ದು ಮಾಡಿದ್ದು, ಮುಂದಿನ ಆದೇಶದ ವರೆಗೂ ಯಾವುದೇ ಕಾರಣಕ್ಕೂ ಪ್ರಾಕ್ಟಿಸ್‌ ನಡೆಸದಂತೆ ಆದೇಶ ಹೊರಡಿಸಿದೆ.

ಇನ್ನೊಂದೆಡೆಯಲ್ಲಿ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಉರ್ವ ಪೊಲೀಸ್‌ ಠಾಣೆಗೆ ಕರೆಯಿಸಿಕೊಂಡು ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಮುಚ್ಚಳಿಕೆ ಬರೆಯಿಸಿ ಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಪವಿತ್ರಾ ಆಚಾರ್ಯ, ಸಂತ್ರಸ್ತೆಯ ಬಾಯ್‌ ಫ್ರೆಂಡ್‌ ಧ್ರುವ ಹಾಗೂ ಆತನ ತಾಯಿ ಮಹಾಲಕ್ಷ್ಮೀ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಸಂತ್ರಸ್ತ ವಿದ್ಯಾರ್ಥಿನಿ ನೀಡಿದ ದೂರನ್ನು ಸ್ವೀಕರಿಸಿ ನ್ಯಾಯ ಒದಗಿಸದೇ ಕರ್ತವ್ಯಲೋಪವೆಸಗಿದ ಉರ್ವ ಪೊಲೀಸ್‌ ಠಾಣೆಯ ಪಿಎಸ್‌ಐ ಶ್ರೀಕಲಾ, ಹೆಡ್‌ ಕಾನ್ಸ್ಟೇಬಲ್‌ ಪ್ರಮೋದ್‌ ಅವರನ್ನು ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಎನ್.‌ ಶಶಿಕುಮಾರ್‌ ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ :

ಇದನ್ನೂ ಓದಿ : ಇಂಟರ್ನ್‌ಶಿಪ್‌ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ : ಖ್ಯಾತ ವಕೀಲನ ವಿರುದ್ದ FIR

Mangalore Advocate KSN Rajesh Bhatt suspended, three Arrested

Comments are closed.