ಚಂಡೀಗಢ : ಹುಡುಗನೋರ್ವನ ಜೊತೆಗೆ ಮುಂಬೈನಿಂದ ಚಂಡೀಗಢಕ್ಕೆ ಪರಾರಿಯಾಗಿದ್ದ 14 ವರ್ಷದ ಬಾಲಕಿಯೋರ್ವಳ ಮೇಲೆ 13 ಮಂದಿ ಕಾಮುಕರು ಅತ್ಯಾಚಾರವೆಸಗಿದ ಘಟನೆ ಚಂಡೀಗಢದಲ್ಲಿ ನಡೆದಿದೆ.
ಪುಣೆ ಮೂಲದ ಸಂತ್ರಸ್ತ ಬಾಲಕಿಗೆ ಮುಂಬೈನಲ್ಲಿ ಹುಡುಗನೋರ್ವನ ಪರಿಚಯವಾಗಿತ್ತು. ನಂತರ ಆತನ ಮಾತಿನ ಮೇರೆಗೆ ಚಂಡೀಗಢಕ್ಕೆ ಹೊರಟಿದ್ದಾಳೆ. ಈ ವೇಳೆಯಲ್ಲಿ ಬಾಲಕಿ ಮುಂಬೈ ರೈಲ್ವೆ ನಿಲ್ದಾಣಕ್ಕೆ ಬಂದು ನಿಲ್ಲುತ್ತಿದ್ದಂತೆಯೇ ಆಟೋ ಚಾಲಕನೋರ್ವ ಬಾಲಕಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲದೇ ಆಕೆ ಮತ್ತು ಬರುವ ಪದಾರ್ಥ ನೀಡಿ ಅತ್ಯಾಚಾರವೆಸಗಿದ್ದಾನೆ.
ಇದನ್ನೂ ಓದಿ : ಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್?: ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್
ಆಟೋ ಚಾಲಕ ಮಾತ್ರವಲ್ಲದೇ ಉಳಿದ 12ಮಂದಿ ಕೂಡ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣಕ್ಕೆ ತಂದು ಬಿಟ್ಟು ಹೋಗಿದ್ದರಂತೆ, ಅಷ್ಟೇ ಯಾಕೆ ರೈಲ್ವೆ ಟಿಕೆಟ್ ಕೌಂಟರ್‌ನಲ್ಲಿದ್ದ ವ್ಯಕ್ತಿಯೂ ಕೂಡ ಅತ್ಯಾಚಾರವೆಸಗಿದ್ದಾನೆ ಅಂತಾ ಬಾಲಕಿ ಆರೋಪಿಸಿದ್ದಾಳೆ. ಇದೀಗ ಸ್ಥಳೀಯರ ದೂರಿನ ಮೇರೆಗೆ ಮಕ್ಕಳ ಸಹಾಯವಾಣಿ ಬಾಲಕಿಯನ್ನು ರಕ್ಷಣೆ ಮಾಡಿದೆ.
ನಂತರ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಅಂಡರ್‌ವೇರ್ ಜೇಬಿನಲ್ಲಿತ್ತು 9 ಕೆಜಿ ಚಿನ್ನ ! ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದ ಪೊಲೀಸರು
ಇದನ್ನೂ ಓದಿ : 5 ರೂಪಾಯಿ ನಾಣ್ಯ ನುಂಗಿದ ಬಾಲಕಿಯ ದುರಂತ ಅಂತ್ಯ
( Chandigarh city 13 people raped 14 year old minor Girl. arrested 8 persons )