ಸೋಮವಾರ, ಏಪ್ರಿಲ್ 28, 2025
HomeNationalಗಡಿ ವಿಚಾರದಲ್ಲಿ ಚೀನಾ ಕ್ಯಾತೆ : ಭಾರತದ ಸಲಹೆಯನ್ನು ಒಪ್ಪದ ಕೆಂಪುರಾಷ್ಟ್ರ

ಗಡಿ ವಿಚಾರದಲ್ಲಿ ಚೀನಾ ಕ್ಯಾತೆ : ಭಾರತದ ಸಲಹೆಯನ್ನು ಒಪ್ಪದ ಕೆಂಪುರಾಷ್ಟ್ರ

- Advertisement -

ಲಡಾಖ್ : ಲಡಾಖ್ ನ ಪೂರ್ವಭಾಗದಲ್ಲಿ ವಾಸ್ತವಿಕ ನಿಯಂತ್ರಣ ಗಡಿಪ್ರದೇಶದಲ್ಲಿ (LAC) ಪದೇ ಪದೇ ನಡೆಡೆಯುತ್ತಿರುವ ವಾಗ್ವಾದ, ಗಲಾಟೆಯನ್ನು ಪರಿಹರಿಸಲು ಭಾರತ ಮತ್ತು ಚೀನಾ ಭಾನುವಾರ ಕಾರ್ಪ್ಸ್ ಕಮಾಂಡರ್ ಮಟ್ಟದ 13ನೇ ಸುತ್ತಿನ ಸಭೆ (Corps Commander-level meeting )ನಡೆಸಿದವು. ಈ ವಿಷಯವನ್ನು ಪರಿಹರಿಸಲು ಭಾರತದ ಕಡೆಯವರು ನೀಡಿದ ಸಲಹೆಗೆ ‘ಚೀನಾದ ಕಡೆಯವರು ಒಪ್ಪುವುದಿಲ್ಲ’ ಎಂದು ಭಾರತ ಹೇಳಿದೆ.

ಸೋಮವಾರ ಬಿಡುಗಡೆ ಮಾಡಿದ ಹೊಸ ಹೇಳಿಕೆಯಲ್ಲಿ, ಎಲ್ ಎಸಿ ಉದ್ದಕ್ಕೂ ಸಮಸ್ಯೆ ಪರಿಹರಿಸಲು ರಚನಾತ್ಮಕ ಸಲಹೆಗಳನ್ನು (constructive suggestions) ನೀಡಿದೆ, ಆದರೆ ಚೀನಾದ ಕಡೆಯವರು ಒಪ್ಪಲು ಸಾಧ್ಯವಿಲ್ಲ ಮತ್ತು LAC ಪರಿಸ್ಥಿತಿಯಲ್ಲಿ ಯಾವುದೇ ಪ್ರಗತಿ ಇಲ್ಲ ಎಂದು ಭಾರತ ಹೇಳಿದೆ.

ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್ ದಲ್ಲಿ ಉಗ್ರರ ದಾಳಿ : ಇಬ್ಬರು ಪೋಲಿಸರಿಗೆ ಗಾಯ

‘ಸಭೆಯು ಉಳಿದ ಪ್ರದೇಶಗಳ ಪರಿಹಾರಕ್ಕೆ ಕಾರಣವಾಗಲಿಲ್ಲ’ ಎಂದು ಹೇಳಿಕೆ ತಿಳಿಸಿದೆ. ಎರಡೂ ಕಡೆಯವರು ನೆಲದ ಮೇಲೆ ಸಂವಹನ ಮತ್ತು ಸ್ಥಿರತೆಯನ್ನು (communications and stability) ಕಾಪಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಉಳಿದ ಪ್ರದೇಶಗಳ ಪರಿಹಾರವು ದ್ವಿಪಕ್ಷೀಯ ಸಂಬಂಧಗಳಲ್ಲಿ ( bilateral relations.) ಪ್ರಗತಿಗೆ ಅನುವು ಮಾಡಿಕೊಡುತ್ತದೆ ಎಂದು ಭಾರತದ ಕಡೆಯವರು ಮತ್ತಷ್ಟು ಒತ್ತಿ ಹೇಳಿದರು.

ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಚೀನಾ ಕಡೆಯವರು ಗಣನೆಗೆ ತೆಗೆದುಕೊಳ್ಳುತ್ತಾರೆ ಮತ್ತು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳಿಗೆ ಸಂಪೂರ್ಣವಾಗಿ ಬದ್ಧರಾಗಿದ್ದು, ಉಳಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ಚೀನಾ ಪಡೆಗಳು ಅತಿಕ್ರಮಣಕ್ಕೆ ಪ್ರಯತ್ನಿಸಿದ ಎರಡು ಘಟನೆಗಳ ಹಿನ್ನೆಲೆಯಲ್ಲಿ ಭಾರತ-ಚೀನಾ ಮಿಲಿಟರಿ ಮಾತುಕತೆಗಳು ನಡೆದವು.

ಇದನ್ನೂ ಓದಿ: ಕೆಂಪು ರಾಷ್ಟ್ರದ 200 ಸೈನಿಕರನ್ನು ತಡೆದ ಭಾರತೀಯ ಯೋಧರು…!

(China disagrees with China’s embarrassing Indian advice on border issues)

RELATED ARTICLES

Most Popular