ವಿದ್ಯಾರ್ಥಿ’ಗಳಿಗೆ ಭರ್ಜರಿ ಗುಡ್ ನ್ಯೂಸ್ : ಅ.21ರಿಂದ ‘ಮಧ್ಯಾಹ್ನದ ಬಿಸಿಯೂಟ’ ಪುನರಾರಂಭ

ಬೆಂಗಳೂರು: ಸೆಪ್ಟೆಂಬರ್ 2021ರಲ್ಲಿ ನಡೆದಿದ್ದಂತ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ( Karnataka SSLC Supplementary Exam Results ) ಫಲಿತಾಂಶ ಇಂದು ಘೋಷಣೆಯಾಗಿದೆ. ಈ ಪರೀಕ್ಷೆಗೆ ಹಾಜರಾಗಿದ್ದಂತ 53,155 ವಿದ್ಯಾರ್ಥಿಗಳಲ್ಲಿ 29,522 ಮಂದಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಕ್ಟೋಬರ್ 20ರವರೆಗೆ ಶಾಲೆಗಳಿಗೆ ದಸರಾ ರಜೆಯಿದೆ. ಅಕ್ಟೋಬರ್ 21ರಿಂದ ಬಿಸಿಯೂಟ ( Mid Day Meals ) ಪುನರಾರಂಭಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ದಿನಾಂಕ 27-09-2021 ಹಾಗೂ 29-09-2021ರಂದು 352 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಗೆ 53,155 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ.55.54 ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಇನ್ನೂ ಒಂದರಿಂದ ಐದನೇ ತರಗತಿ ಶಾಲೆಗಳ ಆರಂಭದ ಬಗ್ಗೆಯೂ ಮಾತನಾಡಿದ ಅವರು, ದಸರಾ ನಂತರ ತಾಂತ್ರಿಕ ತಜ್ಞರ ಸಭೆ ನಡೆಯಲಿದೆ. ಆ ಸಭೆಯಲ್ಲಿ ಶಾಲೆಗಳ ಆರಂಭ ಕುರಿತಂತೆ ಚರ್ಚಿಸಲಾಗುತ್ತದೆ. ಅಕ್ಟೋಬರ್ 20ರ ವರೆಗೆ ದಸರಾ ರಜೆ ಶಾಲೆಗಳಿಗೆ ಇದೆ. ಈ ಬಳಿಕ ಅಕ್ಟೋಬರ್ 21ರಿಂದ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗುತ್ತದೆ. 10ನೇ ತರಗತಿವರೆಗೆ ಬಿಸಿಯೂಟ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ: Afghanistan : ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ : ಸಾವಿನ ಸಂಖ್ಯೆ 100ಕ್ಕೆ ಏರಿಕೆ

(Afternoon meal’ resumes from schools)

Comments are closed.