ನವದೆಹಲಿ : ಕೊರೊನಾ ವೈರಸ್ ಸೋಂಕಿನ ವಿರುದ್ದದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಕೇವಲ 279 ದಿನಗಳಲ್ಲಿ ದೇಶದ 100 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಮಹತ್ವದ ಸಾಧನೆಯನ್ನು ಮೆರೆದಿದೆ. ಈ ಮೂಲಕ ನೂರು ಕೋಟಿ ವ್ಯಾಕ್ಸಿನ್ ನೀಡಿದ ವಿಶ್ವದ ಎರಡನೇ ದೇಶವೆಂಬ ಖ್ಯಾತಿಗೆ ಪಾತ್ರವಾಗಿದೆ.

ಕೇಂದ್ರ ಸರಕಾರ ದೇಶದಲ್ಲಿ 2021ರ ಜನವರಿ 16ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಆರಂಭಿಸಿತ್ತು. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರವೇ ಲಸಿಕೆಯನ್ನು ನೀಡಲಾಗಿತ್ತು. ನಂತರದಲ್ಲಿ ಫೆಬ್ರವರಿ 2 ರಿಂದಲೂ ರಾಜ್ಯ ಮತ್ತು ಕೇಂದ್ರ ಪೊಲೀಸ್ ಸಿಬ್ಬಂದಿ, ಸಶಸ್ತ್ರ ಪಡೆ ಸಿಬ್ಬಂದಿ, ಗೃಹರಕ್ಷಕ ದಳ, ನಾಗರಿಕ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಸ್ವಯಂಸೇವಕರು, ಮುನ್ಸಿಪಲ್ ಕಾರ್ಮಿಕರು, ಕಾರಾಗೃಹ ಸಿಬ್ಬಂದಿ, ಪಿಆರ್‌ಐ ಸಿಬ್ಬಂದಿ ಮತ್ತು ಕಂದಾಯ ಕಾರ್ಯಕರ್ತರು ನಿಯಂತ್ರಣ ಮತ್ತು ಕಣ್ಗಾವಲು, ರೈಲ್ವೇ ರಕ್ಷಣಾ ಪಡೆ ಮತ್ತು ಚುನಾವಣಾ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನು ನೀಡುವ ಕಾರ್ಯವನ್ನು ಆರಂಭಿಸಲಾಯಿತು.

ಹಂತ ಹಂತವಾಗಿ ಕೊರೊನಾ ಲಸಿಕೆ ಕಾರ್ಯವನ್ನು ವಿಸ್ತರಿಸಿದ್ದ ಕೇಂದ್ರ ಸರಕಾರ ಮಾರ್ಚ್ 1 ರಿಂದ ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವ್ಯಕ್ತಿಗಳಿಗೆ ಆರಂಭಿಕ ಹಂತದಲ್ಲಿ ನೀಡಲಾಯಿತು. ನಂತರದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿತ್ತು. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯವನ್ನು ಮಾಡಲಾಗಿದೆ. ಸದ್ಯ 1 ರಿಂದ 18 ವರ್ಷದ ಒಳಗಿನವರಿಗೆ ಇನ್ನೂ ಲಿಸಿಕೆ ನೀಡುವ ಕಾರ್ಯ ಆರಂಭಗೊಂಡಿಲ್ಲ. ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕುರಿತು ಟ್ರಯಲ್ ನಡೆಯುತ್ತಿದ್ದು, ಅತೀ ಶೀಘ್ರದಲ್ಲಿಯೇ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.

ದೇಶದಲ್ಲಿ ಕೇವಲ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ 100 ಕೋಟಿ ಲಸಿಕೆಯನ್ನು ನೀಡಲಾಗಿದೆ. ಇಂದು ಬೆಳಗ್ಗೆ 9:47ಕ್ಕೆ ಕೋವಿನ್ ಪೋರ್ಟಲ್‌ನಲ್ಲಿ ನೀಡಲಾಗಿರುವ ಮಾಃಇತಿಯ ಆಧಾರದ ಮೇಲೆ ದೇಶ ನೂರು ಕೋಟಿ ಲಸಿಕೆ ನೀಡಿದ ಸಾಧನೆಯನ್ನು ಮಾಡಿದೆ. ಮುಂದುವರಿದ ದೇಶಗಳಾಗಿರುವ ಅಮೇರಿಕಾ, ರಷ್ಯಾಗಳಿಗೆ ಹೋಲಿಕೆಯನ್ನು ಮಾಡಿದ್ರೆ ಭಾರತ ಮಹತ್ವದ ಸಾಧನೆಯೊಂದನ್ನ ಮಾಡಿದೆ. ಅದ್ರಲ್ಲೂ ಭಾರತದಲ್ಲಿ ಸ್ವದೇಶಿ ನಿರ್ಮಿತ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ.

ಕೊರೊನಾ ಲಸಿಕೆ ನೀಡುವಲ್ಲಿ ವಿಶ್ವ ದಾಖಲೆಯನ್ನು ಬರೆದಿರುವ ಭಾರತ ಇದೀಗ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದೆ. ಆರೋಗ್ಯ ಕಾರ್ಯಕರ್ತರಿಗೆ ವಿಶೇಷವಾಗಿ ಧನವ್ಯಾದ ಅರ್ಪಿಸಲು ಮುಂದಾಗಿದೆ. ಆರೋಗ್ಯ ಕಾರ್ಯಕರ್ತರ ಸುಮಾರು 13 ವಿಡಿಯೋ ಹಾಗೂ ಕಾಫಿ ಟೇಬಲ್ ಬುಕ್ ರಿಲೀಸ್ ಮಾಡಲು ಮುಂದಾಗಿದೆ. ದೇಶದಲ್ಲಿರುವ ನೂರು ಸ್ಮಾರಕ ಗಳಲ್ಲಿ ತ್ರಿವರ್ಣ ದ್ವೀಪವನ್ನು ಬೆಳಕಿಸಲು ಕೇಂದ್ರ ಸರಕಾರ ಮುಂದಾಗಿದೆ.
ಇದನ್ನೂ ಓದಿ : ಕೋವಿಡ್ ವೈರಸ್ ಹುಟ್ಟಿದ್ದು ವುಹಾನ್ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ
ಇದನ್ನೂ ಓದಿ : 2 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ : ಕೊವಾಕ್ಸಿನ್ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್
( India Coronavirus LIVE Updates: India Achieves Landmark 1 Billion Covid Vaccinations Mark )