Neeraj Chopra : ಮತ್ತೆ ತರಬೇತಿಗೆ ಮರಳಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಜೊತೆಗೆ ಜಾವೆಲಿನ್‌ ಎಸೆತದಲ್ಲಿ ಐತಿಹಾಸಿಕ ದಾಖಲೆ ಬರೆದವರು ಚಿನ್ನದ ಹುಡುಗ ನೀರಜ್‌ ಚೋಪ್ರಾ. ಒಲಿಂಪಿಕ್ಸ್‌ ನಲ್ಲಿ ಬಂಗಾರದ ಪದಕಕ್ಕೆ ಮುತ್ತಿಕ್ಕುವ ಮೂಲಕ ದೇಶವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿರುವ ನೀರಜ್‌ ಚೋಪ್ರಾ ಇದೀಗ ಮತ್ತೆ ತರಬೇತಿಗೆ ಮರಳಿದ್ದಾರೆ.

ಹರಿಯಾಣ ಹುಡುಗ ನೀರಜ್‌ ಚೋಪ್ರಾ ಅವರು ಒಲಿಂಪಿಕ್‌ನಲ್ಲಿ ಕೇವಲ ಚಿನ್ನದ ಪದಕ ಗೆಲ್ಲಲಿಲ್ಲ, ಜಾವೆಲಿನ್ ಅನ್ನು 87.58 ಮೀಟರ್ ದೂರ ಎಸೆಯುವ ಮೂಲಕ ಟೊಕಿಯೋ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ ಚಿನ್ನದ ಪದಕದ ಜೊತೆಗೆ ವಿಶ್ವದಾಖಲೆ ಬರೆದದ ಸಾಧನೆಯನ್ನು ಅಭಿನವ ಬಿಂದ್ರಾ ಮಾಡಿದ್ದರು. ಹಲವು ವರ್ಷದ ನಂತರದಲ್ಲಿ ನೀರಜ್‌ ಚೋಪ್ರಾ ದಾಖಲೆಯನ್ನು ಬರೆದಿದ್ದಾರೆ.

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಇದೀಗ ತರಬೇತಿಗೆ ಮರಳಿರುವ ಪೋಟೋವನ್ನು ಟ್ವೀಟ್‌ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ನೀರಜ್‌ ಚೋಪ್ರಾ ಧನ್ಯವಾದವನ್ನು ಸಮರ್ಪಿಸಿದ್ದಾರೆ. ಮಿಲ್ಕಾ ಸಿಂಗ್‌, ಪಿಟಿ ಉಷಾ, ಅಭಿನವ್‌ ಬಿಂದ್ರಾ ನಂತರದಲ್ಲಿ ನೀರಜ್‌ ಚೋಪ್ರಾ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ.

ಇದನ್ನೂ ಓದಿ : ಕರ್ನಾಟಕದಲ್ಲೇ ತರಬೇತಿ ಪಡೆದಿದ್ದ ಚಿನ್ನದ ಹುಡುಗ : ನೀರಜ್‌ ಚೋಪ್ರಾಗೆ ಬಳ್ಳಾರಿಯ ಜಿಂದಾಲ್‌ ಪ್ರಾಯೋಜಕತ್ವ

ಇದನ್ನೂ ಓದಿ : ಸುಮ್ಮನೇ ದಕ್ಕಿದ್ದಲ್ಲ ಚಿನ್ನ…!! ನೀರಜ್‌ ಚೋಪ್ರಾ ಕಣ್ಣೀರ ಕಥೆ ನಿಮಗೆ ಗೊತ್ತಾ ..!!

ಇದನ್ನೂ ಓದಿ : ಸಾವಿನ ಕದ ತಟ್ಟಿದ್ದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ

ಇದನ್ನೂ ಓದಿ : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್‌ ಎಸೆದ ಚಿನ್ನದ ಹುಡುಗನ ವಿಡಿಯೋ ವೈರಲ್‌

( Tokyo Olympic Champion Neeraj Chopra Returns To Training After Historic Feat )

Comments are closed.