ಸೋಮವಾರ, ಏಪ್ರಿಲ್ 28, 2025
HomeNationalModi Mann Ki Baat : 100 ಕೋಟಿ ಲಸಿಕೆ ದಾಟಿದ ಮೇಲೆ ದೇಶ ಹೊಸ...

Modi Mann Ki Baat : 100 ಕೋಟಿ ಲಸಿಕೆ ದಾಟಿದ ಮೇಲೆ ದೇಶ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ : ಮೋದಿ

- Advertisement -

ದೆಹಲಿ : ಭಾರತದಲ್ಲಿ ಕೋವಿಡ್‌ ಲಸಿಕೆಯನ್ನು ಪ್ರತಿ ಒಬ್ಬರಿಗೂ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕಿ ಬಾತ್‌ ನಲ್ಲಿ ಹೇಳಿದ್ದಾರೆ. 100 ಕೋಟಿ ಲಸಿಕೆಯ ಮೈಲಿಗಲ್ಲನ್ನು ದಾಟಿದ ನಂತರ ದೇಶವು ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದಿದ್ದಾರೆ.

ಸಾಮಾನ್ಯವಾಗಿ ಪ್ರಧಾನಿ ಮೋದಿಯವರ ಮಾಸಿಕ ಭಾಷಣವನ್ನು ಪ್ರತೀ ತಿಂಗಳಿನ ಕೊನೆಯ ಭಾನುವಾರದಂದು ಪ್ರಸಾರ ಮಾಡಲಾಗುತ್ತಿತ್ತು. ಆದರೆ ಅಕ್ಟೋಬರ್‌ ನಲ್ಲಿ ಅದನ್ನು 2ನೇ ಕೊನೆಯ ಭಾನುವಾರದಂದು ಪ್ರಸಾರ ಮಾಡಲಾಯಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ʼಮನ್‌ ಕಿ ಬಾತ್‌ʼನ 82ನೇ ಆವೃತ್ತಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: Amit Shah : ಕಾಶ್ಮೀರದಲ್ಲಿ ಅಭಿವೃದ್ದಿ ಯೋಜನೆಗೆ ಚಾಲನೆ : ಕಾಶ್ಮೀರಿ ಪಂಡಿತರ ಬೇಟಿ ಮಾಡಲಿರುವ ಅಮಿತ್‌ ಶಾ

ಸೆಪ್ಟೆಂಬರ್‌ ನ ಕೊನೆಯ ಭಾಷಣದಲ್ಲಿ ಮೋದಿ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದರು. ಹಾಗೂ ಲಸಿಕ ಅಭಿಯಾನ ಭಾರತದ ಸಾಮರ್ಥ್ಯವನ್ನು ಮತ್ತು ಸಾಮೂಹಿಕ ಪ್ರಯತ್ನದ ಮಂತ್ರದ ಶಕ್ತಿಯನ್ನು ತೋರಿಸುತ್ತದೆ ಎಂದರು. ಜನರು ಪ್ರೋಟೋಕಾಲ್‌ ಅನ್ನು ಅನುಸರಿಸುವಂತೆ ಮತ್ತು ಯಾರು ಕೂಡ ಲಸಿಕೆಯ ಸುರಕ್ಷತಾ ವಲಯದಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಮನವಿ ಮಾಡಿದರು.

100 ಕೋಟಿ ಲಸಿಕೆಯ ಮೈಲಿಗಲ್ಲನ್ನು ದಾಟಿದ ನಂತರ ದೇಶವು ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದಿದ್ದಾರೆ. ಹಬ್ಬದ ಸಮಯ ಸಮೀಪಿಸುತ್ತಿದೆ ಹಾಗೂ ʼಮರ್ಯಾದಾ ಪುರುಷೋತ್ತಮʼ ಶ್ರೀರಾಮನ ದುಷ್ಟ ರಾಕ್ಷಸರ ವಿರುದ್ದ ಸಾದಿಸಿದ ವಿಜಯವನ್ನು ಪೂರ್ಣ ಭಾರತವು ಆಚರಿಸುತ್ತದೆ ಎಂದರು. ಆದ್ದರಿಂದ ಜನರು ಕೋವಿಡ್‌ ವಿರುದ್ದದ ಹೋರಾಟವನ್ನು ನೆನಪಿನಲ್ಲಿ ಇಟ್ಟಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: PM Narendra Modi : 100 ಕೋಟಿ ಕೊರೊನಾ ಲಸಿಕೆ : ಇದು ಹೊಸ ಅಧ್ಯಾಯದ ಆರಂಭ, ಹೊಸ ಭಾರತ ಎಂದ ಪ್ರಧಾನಿ ನರೇಂದ್ರ ಮೋದಿ

(Country moving forward with new strength after crossing 100 crore vaccine: Modi)

RELATED ARTICLES

Most Popular