Grip Water Poisson : ಕೇಳಿದ್ದು ಗ್ರೈಪ್‌ ವಾಟರ್‌, ಕೊಟ್ಟಿದ್ದು ಪಾಯಿಸನ್ ! ಮೆಡಿಕಲ್‌ ಮಾಲೀಕರ ಮಹಾ ಎಡವಟ್ಟು

ತುಮಕೂರು : ಔಷಧದ ವಿಚಾರದಲ್ಲಿ ಎಷ್ಟೇ ಕಾಳಜಿವಹಿಸಿದಷ್ಟೂ ಸಾಲದು. ಅದ್ರಲ್ಲೂ ಮಕ್ಕಳ ವಿಚಾರದಲ್ಲಂತೂ ಹೆಚ್ಚು ಜಾಗರೂಕರಾಗಿರಬೇಕು. ಅದ್ರಲ್ಲೂ ಮೆಡಿಕಲ್‌ ಸಿಬ್ಬಂದಿ ನೀಡುವ ಔಷಧವನ್ನು ಪರಾಮರ್ಷಿಸಿಯೇ ಮಕ್ಕಳಿಗೆ ನೀಡಬೇಕು ಅನ್ನೋದು ಈ ಘಟನೆಯಿಂದಲೇ ಖಚಿತವಾಗಿದೆ. ಗ್ರಾಹಕರು ಗ್ರೈಪ್‌ ವಾಟರ್‌ ಕೇಳಿದ್ರೆ, ಮೆಡಿಕಲ್‌ ಸಿಬ್ಬಂದಿ ಪಾಯಿಸನ್‌ ಕೊಟ್ಟು ಕಳುಹಿಸಿದ ಘಟನೆ ತುಮೂರಿನ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕಂತಗಾನಹಳ್ಳಿಯ ನಿವಾಸಿಯಾಗಿರುವ ಕಲ್ಯಾಣಿ ಎಂಬವರು ಮಧುಗಿರಿ ತಾಲೂಕಿನ ಐಡಿಹಳ್ಳಿಯ ಮೆಡಿಕಲ್ ಶಾಪ್‌ಗೆ ತೆರಳಿ ಗ್ರೈಪ್‌ ವಾಟರ್‌ ಕೇಳಿದ್ದಾರೆ. ಈ ವೇಳೆಯಲ್ಲಿ ಮಡಿಕಲ್‌ ಮಾಲೀಕನ ಪತ್ನಿ ಗ್ರೈಪ್‌ ವಾಟರ್‌ ಬದಲು ಸರ್ಜಿಕಲ್‌ ಸ್ಪಿರಿಟ್‌ ಕೊಟ್ಟು ಕಳುಹಿಸಿದ್ದರು. ಮನೆಗೆ ತೆರಳಿದ ಕಲ್ಯಾಣಿ ಅವರಿಗೆ ಶಾಕ್‌ ಎದುರಾಗಿತ್ತು.

ಗ್ರೈಪ್‌ ವಾಟರ್‌ ಓಪನ್‌ ಮಾಡುತ್ತಿದ್ದಂತೆಯೇ ಕೆಟ್ಟ ವಾಸನೆ ಬರೋದಕ್ಕೆ ಶುರುವಾಗಿತ್ತು. ಇದರಿಂದ ಅನುಮಾನಗೊಂಡ ಕಲ್ಯಾಣಿ ಅವರು ತನ್ನ ಪತಿಯಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಪತಿ ಶಿವಕುಮಾರ್‌ ಅವರು ಬಾಟಲಿ ನೋಡಿದ ನಂತರದಲ್ಲಿ ಇದು ವಿಷ ಅನ್ನೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೆಡಿಕಲ್‌ ಶಾಪ್‌ ವಿರುದ್ದ ಮಿಡಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂಓದಿ : ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ : ವೈದ್ಯ ಕಂಗಾಲು

ಇದನ್ನೂ ಓದಿ : ಮೆಟ್ರೋ ಕಾಮಗಾರಿ ವೇಳೆ‌ ದುರಂತ : ಆಯತಪ್ಪಿ ಕೆಳಗೆ ಬಿದ್ದ ಕ್ರೇನ್‌

( The Great Struggle in Medical: Poisoned Staff instead of Grip Water )

Comments are closed.