Kidney stone : ಕಿಡ್ನಿ ಸ್ಟೋನ್ ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ : ವೈದ್ಯರ ಎಡವಟ್ಟಿಗೆ ಜೀವ ಕಳೆದುಕೊಂಡ ರೋಗಿ

ಅಹಮದಾಬಾದ್ : ವೈದ್ಯರನ್ನು ದೇವರಂತೆ ಕಾಣಬೇಕು ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹದೆ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ವೈದ್ಯರ ಎಡವಟ್ಟಿಗೆ ರೋಗಿಯೊಬ್ಬ ಜೀವವನ್ನೇ ಕಳೆದುಕೊಂಡಿದ್ದಾನೆ.

ರೋಗಿಯೊಬ್ಬ ಮೂತ್ರಪಿಂಡದಲ್ಲಿ ಕಲ್ಲು (kidney stone) ಸಮಸ್ಯೆ ಇಂದ ಬಳಲುತ್ತಿದ್ದ. ಆದ್ದರಿಂದ ಮೂತ್ರಪಿಂಡದ ಕಲ್ಲುಗಳನ್ನು (kidney stone) ತೆಗೆದುಹಾಕಲು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ವೈದ್ಯರು ಕಿಡ್ನಿ ಸ್ಟೋನ್ ತೆಗೆಯುವ ಬದಲು ಎಡ ಮೂತ್ರಪಿಂಡವನ್ನು ತೆಗೆದು ಹಾಕಿದ್ದಾನೆ.

ಇದನ್ನೂ ಓದಿ: ಗುಜರಾತ್‌ ಮಾಸ್ಕ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ : 2 ಸಾವು,125 ಮಂದಿಗೆ ಗಾಯ

ಇದೀಗ ರೋಗಿಯ ಸಂಬಂಧಿಗೆ 11.23 ಲಕ್ಷ ರೂ.ಗಳ ಪರಿಹಾರ (compensation) ನೀಡುವಂತೆ ಗುಜರಾತ್ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗವು ಬಾಲಸಿನೋರ್ ನ ಕೆಎಂಜಿ ಜನರಲ್ ಆಸ್ಪತ್ರೆಗೆ ಆದೇಶಿಸಿದೆ. ಪ್ರಮುಖ ಅಂಗವನ್ನು ಹೊರತೆಗೆದ ನಾಲ್ಕು ತಿಂಗಳ ನಂತರ ರೋಗಿ ಸಾವನ್ನಪ್ಪಿದ್ದಾನೆ.

ಬಾಲಸಿನೋರ್ ನ ಕೆಎಂಜಿ ಜನರಲ್ ಆಸ್ಪತ್ರೆಯು ತನ್ನ ವೈದ್ಯನ ನಿರ್ಲಕ್ಷದ ಈ ಕೃತ್ಯಕ್ಕೆ ನೇರ ಹೊಣೆ ಎಂದು ಗ್ರಾಹಕ ನ್ಯಾಯಾಲಯವು (consumer court) ಅಭಿಪ್ರಾಯಪಟ್ಟಿದೆ. ಆಪರೇಶನ್‌ ನಡೆಯುವ ಸಂದರ್ಭದಲ್ಲಿ ಅಲ್ಲಿದ್ದವರ ನಿರ್ಲಕ್ಷದಿಂದ ಏನಾದರು ತೊಂದರೆ ಯಾದರೆ ಅದಕ್ಕೆ ನೇರ ಹೊಣೆ ವೈದ್ಯನು ಹಾಗೂ ಆಸ್ಪತ್ರೆಯಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮೇ 2011 ರಲ್ಲಿ, ದೇವೆಂದ್ರಾಬಾಯಿ ರಾವಲ್ ಅವರ ಎಡ ಮೂತ್ರಪಿಂಡದಲ್ಲಿ (kidney)14 ಮಿಮೀ ಕಲ್ಲು ಇರುವುದು ಪತ್ತೆಯಾಯಿತು. ಸೆಪ್ಟೆಂಬರ್ 3 ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ, ವೈದ್ಯರು ಕಲ್ಲಿನ ಬದಲು ಮೂತ್ರಪಿಂಡವನ್ನು ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: FactCheck : 10 ನೇ ಕ್ಲಾಸ್ ಉತ್ತೀರ್ಣರಾದವರಿಗೆ ಸಿಗುತ್ತೆ ಮಾಸಿಕ 3,500 ರೂ. ! ವೈರಲ್‌ ಸುದ್ದಿಯ ಅಸಲಿತ್ತೇನು ?

ಕಿಡ್ನಿ ತೆಗೆಯುವುದರಿಂದ ರಾವಲ್ ಆರೋಗ್ಯ ಸುಧಾರಿಸಲಿದೆ ಎಂದು ವೈದ್ಯರು ಹೇಳಿದಾಗ ಕುಟುಂಬಕ್ಕೂ ಅಚ್ಚರಿಯಾಗಿತ್ತು. ನಂತರ, ಅವರ ಸ್ಥಿತಿ ಹದಗೆಟ್ಟಿತು ಮತ್ತು ಅವರು ಜನವರಿ 8 . 2012 ರಂದು ಮೂತ್ರಪಿಂಡದ ಸಮಸ್ಯೆಗಳಿಂದಾಗಿ ಸಾವನ್ನಪ್ಪಿದರು. ರಾವಲ್ ಅವರ ಪತ್ನಿ ಈ ಘಟನೆ ಕುರಿತಂತೆ ಗ್ರಾಹಕರ ನ್ಯಾಯಲಯದ ಮೊರೆ ಹೋಗಿದ್ದು, ಅವರು ಆಸ್ಪತ್ರೆ ಮತ್ತು ವಿಮಾ ಕಂಪನಿಗೆ (insurance company) 11.23 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಆದೇಶ ನೀಡಿದೆ.

(Doctor removes kidney stone instead of removing kidney stone: Patient who lost his life after doctor’s stumble)

Comments are closed.