ನವದೆಹಲಿ : ಹೆದ್ದಾರಿಗಳಲ್ಲಿ ಗರಿಷ್ಠ ವೇಗದ ಮಿತಿ ಇರುತ್ತದೆ. ಕೇಂದ್ರ ಸರ್ಕಾರ ಈ ವೇಗದ ಮಿತಿಯನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿದೆ. ಹೆದ್ದಾರಿಗಳಲ್ಲಿ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 140 ಕಿ.ಮೀ.ಗೆ ಹೆಚ್ಚಿಸುವ ಕುರಿತಂತೆ ಶೀಘ್ರವೇ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವಿವಿಧ ವರ್ಗದ ರಸ್ತೆಗಳಿಗೆ ವಾಹನಗಳ ವೇಗ ಮಿತಿಯನ್ನು ಪರಿಷ್ಕರಿಸುವ ಮಸೂದೆಯನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ. ಕಾರಿನ ವೇಗ ಹೆಚ್ಚಾದರೆ ಅಪಘಾತ ವಾಗುತ್ತದೆ ಎಂಬ ಮನಸ್ಥಿತಿ ಇದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೇಳಿದರು.
ಇದನ್ನೂ ಓದಿ: PM CARES : ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಕೇಂದ್ರದಿಂದ 10 ಲಕ್ಷ ರೂ ಸ್ಟೈಫಂಡ್
ಎಕ್ಸ್ ಪ್ರೆಸ್ ವೇಗಳಲ್ಲಿ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 140 ಕಿ.ಮೀ.ಗೆ ಹೆಚ್ಚಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ವೇಗ ಮಿತಿಗಳು ಚತುಷ್ಪಥ ರಸ್ತೆಗಳಲ್ಲಿ ಗಂಟೆಗೆ ಕನಿಷ್ಠ 100 ಕಿ.ಮೀ ಇರಬೇಕು, ದ್ವಿಪಥ ರಸ್ತೆಗಳು ಮತ್ತು ನಗರದ ರಸ್ತೆಗಳ ಆಯಾ ವೇಗದ ಮಿತಿ ಗಂಟೆಗೆ 80 ಕಿ.ಮೀ ಮತ್ತು ಗಂಟೆಗೆ 75 ಕಿ.ಮೀ ಇರಬೇಕು ಎಂದು ಗಡ್ಕರಿ ಹೇಳಿದರು.
ಇದನ್ನೂ ಓದಿ: ಕೆಂಪು ರಾಷ್ಟ್ರದ 200 ಸೈನಿಕರನ್ನು ತಡೆದ ಭಾರತೀಯ ಯೋಧರು…!
(Increasing speed limit on highway: central thinking for speed limit of 140 km / h)