ಬಿ.ಎಸ್.ಯಡಿಯೂರಪ್ಪಸರ್ವೋಚ್ಚ ನಾಯಕ : IT ದಾಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ : ಕೋಟ ಶ್ರೀನಿವಾಸ ಪೂಜಾರಿ

ಹಾವೇರಿ : ರಾಜ್ಯದಲ್ಲಿ ಹಲವಾರು ಕಡೆ ಐಟಿ ರೈಡ್‌ ಗಳು ನಡೆಯುತ್ತಿದೆ. ಅದರಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತನ ಮನೆ ಮೇಲಿನ ಐಟಿ (IT) ದಾಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಐಟಿ ದಾಳಿಗೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಡಿಯೂರಪ್ಪ ಅವರು ನಮ್ಮ ಸರ್ವೋಚ್ಚ ನಾಯಕ, ಐಟಿ ದಾಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಆದಾಯಕ್ಕೆ ಮೀರಿ ಸಂಪಾದನೆ ಮಾಡಿದವರ ಮೇಲೆ ಐಟಿ ದಾಳಿ ನಡೆಸಲಾಗುತ್ತದೆ ಎಂದರು.

ಇದನ್ನೂ ಓದಿ: BYS PA IT RAID : ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ರೇಡ್‌

ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಪಕ್ಷ ಎಲ್ಲವನ್ನೂ ತೀರ್ಮಾನ ಮಾಡಿ ಟಿಕೆಟ್ ಘೋಷಣೆ ಮಾಡಿದ್ದು, ಬಿಜೆಪಿ ಅಭ್ಯರ್ಥಿಗಳು ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: RSS ಇಲ್ಲದಿದ್ರೆ ಭಾರತ ಮೂರ್ನಾಲ್ಕು ಪಾಕಿಸ್ತಾನ ಆಗ್ತಿತ್ತು : ಸಿದ್ದು, ಕುಮಾರಸ್ವಾಮಿ ವಿರುದ್ದ ಜಗದೀಶ್ ಶೆಟ್ಟರ್ ವಾಗ್ದಾಳಿ

(BS Yeddyurappasarvocha leader: IT attack and politics unrelated: Kota Srinivasa Poojary)

Comments are closed.