ಭಾನುವಾರ, ಏಪ್ರಿಲ್ 27, 2025
HomeNationalCovid Certificate ನಿಂದ PM ನರೇಂದ್ರ ಮೋದಿ ಪೋಟೋ ತೆಗೆಯಲು ಬೇಡಿಕೆ ಇಟ್ಟವನಿಗೆ ತಿರುಗೇಟು ಕೊಟ್ಟ...

Covid Certificate ನಿಂದ PM ನರೇಂದ್ರ ಮೋದಿ ಪೋಟೋ ತೆಗೆಯಲು ಬೇಡಿಕೆ ಇಟ್ಟವನಿಗೆ ತಿರುಗೇಟು ಕೊಟ್ಟ ಕೇರಳ ಹೈಕೋರ್ಟ್‌

- Advertisement -

ದೆಹಲಿ : ಕೋವಿಡ್‌ ಮಹಾಮಾರಿಯ ವಿರುದ್ದ ಹೋರಾಟದಲ್ಲಿ ಗೆಲುವು ಕಂಡಿದೆ. ಲಸಿಕೆ ಹಾಕಿದವರಿಗೆ ನೀಡುವ ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫೋಟೋ ಅಳವಡಿಸಲಾಗಿದೆ. ಆದರೆ ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಅವರ ಪೋಟೋವನ್ನು ತೆಗೆದು ಹಾಕುವಂತೆ ವ್ಯಕ್ತಿಯೋರ್ವ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದ್ರೀಗ ಕೇರಳ ಹೈಕೋರ್ಟ್‌ ವ್ಯಕ್ತಿಗೆ ಉತ್ತರವನ್ನು ನೀಡಿದೆ.

ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆದು ಹಾಕುವುದಕ್ಕೆ ಸಂಬಂಧಪಟ್ಟಂತೆ ಕೇರಳ ಹೈಕೋರ್ಟ್‌ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ನೀಡಲಾಗುವ ಪ್ರಮಾಣ ಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತೆಗೆಯಬೇಕೆಂಬ ಬೇಡಿಕೆ ಅಪಾಯಕಾರಿ ಪ್ರಸ್ತಾಪ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ಧಿ : ನವೆಂಬರ್ 15 ರಿಂದ 2 ತಿಂಗಳು ತೆರೆಯಲಿದೆ ಶಬರಿಮಲೆ

ಪೀಟರ್ ಮೈಲಿಪರಂಬಿಲ್ ಎನ್ನುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ, ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಎನ್.ನಾಗರೇಶ್, ಕರೋನ ಲಸಿಕೆ ತೆಗೆದುಕೊಂಡವರಿಗೆ ನೀಡಲಾಗುವ ಪ್ರಮಾಣ ಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತೆಗೆಯುವುದಕ್ಕೆ ಸಂಬಂಧಪಟ್ಟಂತೆ, ಇದೊಂದು ಅಪಾಯಕಾರಿ ಪ್ರತಿಪಾದನೆಯಾಗಿದ್ದು, ಮುಂದಿನ ದಿನದಲ್ಲಿ ಯಾರೋ ಒಬ್ಬರು ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಕರೆನ್ಸಿ ನೋಟುಗಳಿಂದ ತೆಗೆದುಹಾಕುವಂತೆ ಕೇಳಬಹುದು ಅಂತ ಹೇಳಿತು.

ನ್ಯಾಯಾಪೀಠದ ಪ್ರಶ್ನೆಗೆ ಉತ್ತರಿಸಿದ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಜಿತ್ ಜಾಯ್ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾವಳಿಗಳ ಪ್ರಕಾರ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಕರೆನ್ಸಿ ನೋಟುಗಳಲ್ಲಿ ಮುದ್ರಿಸಲಾಗಿದೆ ಆದರೆ ಯಾವುದೇ ಶಾಸನಬದ್ಧ ನಿಬಂಧನೆಗಳ ಆಧಾರದ ಮೇಲೆ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಫೋಟೋವನ್ನು ನಿಗದಿಪಡಿಸಲಾಗಿಲ್ಲ ಅಂತ ನ್ಯಾಯಾಪೀಠಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.

ಇದನ್ನೂ ಓದಿ: Kedaranath – Modi : ಕೇದಾರನಾಥ ದೇವಾಲಯಕ್ಕೆ ಭೇಟಿ : 250 ಕೋಟಿ ರೂ.ಗಳ ಪುನರ್ ನಿರ್ಮಾಣ ಕಾರ್ಯ ಉದ್ಘಾಟಿಸಲಿರುವ ಮೋದಿ

(Kerala HC hits out at pm Narendra Modi’s demand for poto removal from Covid Certificate)

RELATED ARTICLES

Most Popular