Petrol and Diesel Price : ಡಿಸೇಲ್‌ 10 ರೂ., ಪೆಟ್ರೋಲ್‌ 5 ರೂ. ಇಳಿಕೆ : ಜನತೆಗೆ ಮೋದಿ ದೀಪಾವಳಿ ಗಿಫ್ಟ್‌

ನವದೆಹಲಿ : ಕಳೆದ ಕೆಲವು ತಿಂಗಳಿನಿಂದಲೂ ತೈಲ ಬೆಲೆ ಏರಿಕೆಯನ್ನು ಕಾಣುತ್ತಲೇ ಸಾಗಿತ್ತು. ಆದ್ರೀಗ ದೀಪಾವಳಿ ಹಬ್ಬದ ಹೊತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ. ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಇಳಿಕೆಗೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ದೇಶದಲ್ಲಿ ತೈಲ ಬೆಲೆ ದಿನೇ ದಿನೇ ದಾಖಲೆಯನ್ನು ಬರೆಯುತ್ತಿದೆ. ಸತತವಾಗಿ ಏರಿಕೆಯಾಗುತ್ತಿದ್ದ ಪೆಟ್ರೋಲ್‌ ಹಾಗೂ ಡಿಸೇಲ್‌ ದರದಿಂದಾಗಿ ವಾಹನ ಸವಾರರು ಕಂಗಾಲಾಗಿದ್ದರು. ಆದ್ರೀಗ ಕೇಂದ್ರ ಸರಕಾರ ಜನತೆಗೆ ರಿಲೀಫ್‌ ನೀಡಲು ಮುಂದಾಗಿದೆ. ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕ ಕಡಿತ ಘೋಷಿಸಿದೆ. ಇದರಿಂದಾಗಿ ಡಿಸೇಲ್‌ 10 ರೂ., ಪೆಟ್ರೋಲ್‌ ದರದಲ್ಲಿ 5 ರೂಪಾಯಿ ಇಳಿಕೆಯಾಗಲಿದೆ.

Petrol and diesel prices goes record high in India : Check today rates

ಕೇಂದ್ರ ಸರಕಾರ ಅಬಕಾರಿ ಸುಂಕ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹೊಸ ದರ ಜಾರಿಗೆ ಬರಲಿದೆ. ದೇಶದಲ್ಲಿ ಇದೇ ಮೊದಲ ಬಾರಿ ಪೆಟ್ರೋಲ್‌ ದರ ಲೀಟರ್‌ಗೆ 120 ರೂಪಾಯಿ ದಾಖಲಿಸಿತ್ತು. ದಿನೇ ದಿನೇ ಏರಿಕೆಯನ್ನೇ ಕಾಣುತ್ತಿದ್ದ ತೈಲ ದರ ನಾಳೆಯಿಂದ ಇಳಿಕೆ ಕಾಣುವ ಸಾಧ್ಯತೆಯಿದೆ. ದೀಪಾವಳಿ ಸಂಭ್ರಮದ ಹೊತ್ತಲೇ ಕೇಂದ್ರ ಸರಕಾರ ಜನತೆಗೆ ಭರ್ಜರಿ ಗಿಫ್ಟ್‌ ಕೊಟ್ಟಿದೆ.

( Centre to cut excise duty on petrol by Rs 5, diesel by Rs 10 from tomorrow )

Comments are closed.