ದೆಹಲಿ: ಮಾದಕ ವಸ್ತುಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರನ್ನು ಸುಲ್ತಾನ್ ಪುರಿಯಲ್ಲಿ ದೆಹಲಿ ಪೋಲಿಸರು ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ, ಪೊಲೀಸರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 18 ಕೋಟಿ ಮೌಲ್ಯದ 6 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಡ್ರಗ್ ಕಾರ್ಟೆಲ್ ಕಿಂಗ್ ಪಿನ್ ತೈಮೂರ್ ಖಾನ್ ಆಲಿಯಾಸ್ ಭೋಲಾ ಅವರ ಸಹಾಯಕ ಆಸಿಮ್ ಮತ್ತು ಸುಲ್ತಾನ್ ಪುರಿಯಲ್ಲಿ ಮಾದಕ ವಸ್ತು ಪೂರೈಕೆದಾರ ವರುಣ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಇಬ್ಬರೂ ಪ್ರಮುಖ ಡ್ರಗ್ ಸಿಂಡಿಕೇಟ್ ಗೆ ಸೇರಿದವರು.
ಇದನ್ನೂ ಓದಿ: ತಮಿಳು ನಾಡಿನ ಫೌಲ್ಟ್ರಿ ಕಂಪೆಯಲ್ಲಿ 300 ಕೋಟಿ ತೆರಿಗೆ ವಂಚನೆ
ದೆಹಲಿ ಪೊಲೀಸರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಡ್ರಗ್ ಪೆಡ್ಲರ್ ಗಳ ಬೆನ್ನು ಹತ್ತಿ ರಾಷ್ಟ್ರ ರಾಜಧಾನಿಯಲ್ಲಿ ಸಕ್ರಿಯ ಡ್ರಗ್ ಪ್ರಕರಣಗಳನ್ನು ಭೇದಿಸಲು ‘ಆಪರೇಶನ್ ಸ್ಪೈಡರ್’ ಅನ್ನು ಪ್ರಾರಂಭಿಸಿದೆ. ಈ ‘ಆಪರೇಶನ್ ಸ್ಪೈಡರ್’ ಕಾರ್ಯಚರಣೆಯಲ್ಲಿ ಇಬ್ಬರು ಡ್ರಗ್ ಪೆಡ್ಲರ್ ಜೊತೆ 18 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳ ಲಾಗಿದೆ.
‘ಆಪರೇಶನ್ ಸ್ಪೈಡರ್’ ಕಾರ್ಯಾಚರಣೆಯ ಅಡಿಯಲ್ಲಿ, ದೆಹಲಿ ಪೊಲೀಸ್ ಮಾದಕ ವಸ್ತು ದಳವು ಮಾದಕ ದ್ರವ್ಯ ಬಳಕೆದಾರರು, ಅವರ ಪೂರೈಕೆದಾರ ಮತ್ತು ಅದಕ್ಕೆ ಜೋಡಿಸಲಾದ ದಟ್ಟವಾದ ವೆಬ್ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ. ರಾಜಸ್ಥಾನದ ಹರಿಯಾಣದ ಉತ್ತರ ಪ್ರದೇಶದಲ್ಲಿ ಗ್ರಾಹಕರನ್ನು ಹೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
(‘Operation Spider’: Two drug peddlers arrested, heroin worth Rs 18 crore seized)