ನ್ಯಾಯಾಧೀಶರಿಂದ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ

ಜೈಪುರ : ಬಾಲಕನೋರ್ವನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರೋರ್ವರನ್ನು ಬಂಧಿಸಿರುವ ಘಟನೆ ರಾಜಸ್ತಾನದ ಜೈಪುರ (JAIPUR) ದಲ್ಲಿ ನಡೆದಿದೆ. ಬಾಲಕನ ಕುಟುಂಬಸ್ಥರಿಗೆ ನ್ಯಾಯಾಧೀಶರು ಬೆದರಿಕೆಯೊಡ್ಡಿರುವ ಆರೋಪ ಕೇಳಿಬಂದಿದೆ.

ನ್ಯಾಯಾಧೀಶರಾಗಿರುವ ಜಿಯೇಂದ್ರ ಗುಲಿಯಾ ಎಂಬವರೇ ಬಂಧನಕ್ಕೆ ಒಳಗಾಗಿರುವ ನ್ಯಾಯಾಧೀಶರು. ನ್ಯಾಯಾಧೀಶರು ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆನ್ನುವ ಆರೋಪ ಕೇಳಿಬಂದ ಬೆನ್ನಲ್ಲೇ ಜೈಪುರ ಜಿಲ್ಲಾಧಿಕಾರಿ ಹಿಮಾಂಶು ಗುಪ್ತ ಹಾಗೂ ಎಸ್‌ಪಿ ದೇವೆಂದ್ರ ವಿಷ್ಣೋಯ್‌ ಅವರು ಸಂತ್ರಸ್ತನ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ನ್ಯಾಯಾಧೀಶ ಜಿಯೇಂದ್ರ ಗುಲಿಯಾ ಅವರನ್ನು ಜೈಪುರದಲ್ಲಿ ಬಂಧಿಸಿ, ಭರತ್‌ಪುರಕ್ಕೆ ಕರೆತರಲಾಗಿದೆ. ಅಲ್ಲದೇ ಆರ್‌ಬಿಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಇನ್ನು ಬಾಲಕನ ಪೋಷಕರು ತಮಗೆ ನ್ಯಾಯಧೀಶರು ಬೆದರಿಕೆಯೊಡ್ಡಿದ್ದಾರೆಂದು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಲಾಗಿದೆ.

14 ವರ್ಷದ ಸಂತ್ರಸ್ತ ಬಾಲಕ ನ್ಯಾಯಾಲಯಕ್ಕೆ ಹೇಳಿಕೆಯನ್ನು ನೀಡಲು ತೆರಳಿದ್ದ, ಈ ವೇಳೆಯಲ್ಲಿ ಬಾಲಕನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂತ್ರಸ್ತ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲು ಸೂಚನೆಯನ್ನು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್‌ ವರ್ಮಾ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಎಸ್‌ಪಿ ದೇವೆಂದ್ರ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು : ಮಗುವಿನ ಮೇಲೆ ಪೈಶಾಚಿಕ ಕೃತ್ಯ : ಲೈಂಗಿಕ ಕೃತ್ಯವೆಸಗಿ, ಉಪ್ಪುನೀರಿನ ಟ್ಯಾಂಕ್‌ಗೆ ಎಸೆದ ಆರೋಪಿ

ಇದನ್ನೂ ಓದಿ :  ದಲಿತನ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಮಗಳನ್ನೇ ಅರೆ ನಗ್ನ ಗೊಳಿಸಿದ ತಂದೆ !

( Judge Arrested for sodomising minor to be Produced in court )

Comments are closed.