Kushinagar Airport : ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಕುಶಿನಗರ : ಉತ್ತರ ಪ್ರದೇಶದ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ಮುನ್ನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದರು. ಉತ್ತರ ಪ್ರದೇಶದ ರಾಜ್ಯಪಾಲ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯ ಬೆನ್ನಲ್ಲೇ ಶ್ರೀಲಂಕಾದ ಕೊಲಂಬೊದಿಂದ ವಿಮಾನ ನಿಲ್ದಾಣದಿಂದ ಬಂದ ವಿಮಾನವನ್ನು ಲ್ಯಾಂಡ್‌ ಮಾಡಲಾಗಿತ್ತು. ನಿಯೋಗದಲ್ಲಿ ಶ್ರೀಲಂಕಾದ ಬೌದ್ಧ ಧರ್ಮದ ಎಲ್ಲಾ ನಾಲ್ಕು ನಿಕಾತಾಗಳ (orders) ಅನುನಾಯಕ (deputy’s heads) ಅಂದರೆ ಅಸ್ಗಿರಿಯಾ, ಅಮರಾಪುರ, ರಮಣ, ಮಲ್ವತಾ ಮತ್ತು ಸಂಪುಟ ಸಚಿವ ನಮಲ್ ರಾಜಪಕ್ಶೆ ನೇತೃತ್ವದ ಶ್ರೀಲಂಕಾ ಸರ್ಕಾರದ ಐದು ಸಚಿವರು ಸೇರಿದ್ದಾರೆ.

ಇದನ್ನೂ ಓದಿ: Uttharakhand : ಉತ್ತರಾಖಂಡದಲ್ಲಿ ದಿಢೀರ್ ಮೇಘಸ್ಪೋಟ : 17 ಜನ ಸಾವು, ಹಲವರು ನಾಪತ್ತೆ

ಅಂದಾಜು 260 ಕೋಟಿ ರೂ.ವೆಚ್ಚದಲ್ಲಿ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ಯಾತ್ರಿಕರಿಗೆ ಭಗವಾನ್ ಬುದ್ಧನ ಮಹಾಪರಿನಿರ್ವಾಣ ದೇವಾಲಯಕ್ಕೆ ಭೇಟಿ ನೀಡಲು ಅನುಕೂಲ ಮಾಡಿಕೊಡುತ್ತದೆ ಮತ್ತು ಪ್ರಪಂಚದಾದ್ಯಂತದ ಬೌದ್ಧ ಯಾತ್ರಾ ಪವಿತ್ರ ಸ್ಥಳಗಳನ್ನು ಸಂಪರ್ಕಿಸುವ ಪ್ರಯತ್ನವಾಗಿದೆ. ವಿಮಾನ ನಿಲ್ದಾಣವು ಉತ್ತರ ಪ್ರದೇಶ ಮತ್ತು ಬಿಹಾರದ ಹತ್ತಿರದ ಜಿಲ್ಲೆಗಳಿಗೆ ಸೇವೆ ಸಲ್ಲಿಸಲಿದೆ ಮತ್ತು ಈ ಪ್ರದೇಶದಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಇದನ್ನೂ ಓದಿ: Petrol and Diesel Price : ಪೆಟ್ರೋಲ್, ಡೀಸೆಲ್ ಬೆಲೆ ಶೀಘ್ರದಲ್ಲೇ ಇಳಿಕೆ : ಕೇಂದ್ರ ಸರಕಾರದ ಅಭಿಪ್ರಾಯವೇನು ಗೊತ್ತಾ ?

(PM Narendra Modi inaugurates Kushinagar International Airport)

Comments are closed.